Select Your Language

Notifications

webdunia
webdunia
webdunia
webdunia

ಲವ್, ಸೆಕ್ಸ್, ದೋಖಾ: 'ಸಿಲ್ಕ್ ಸಖತ್ ಮಗಾ' ವಯಸ್ಕರಿಗೆ ಮಾತ್ರ!

ಲವ್, ಸೆಕ್ಸ್, ದೋಖಾ: 'ಸಿಲ್ಕ್ ಸಖತ್ ಮಗಾ' ವಯಸ್ಕರಿಗೆ ಮಾತ್ರ!
, ಗುರುವಾರ, 13 ಜೂನ್ 2013 (15:13 IST)
PR
'ಸಿಲ್ಕ್ ಸಖತ್ ಹಾಟ್ ಮಗಾ' ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಬಚಾವ್ ಆಗಿದೆ. ಚಿತ್ರದ ಪೋಸ್ಟರುಗಳನ್ನು ನೋಡಿದವರಿಗೆ ಚಿತ್ರ ಟ್ರಿಬ್ಯುನಲ್‌ಗೆ ಹೋಗಬಹುದು ಎಂಬ ಭೀತಿಯಿತ್ತು. ಅಂತಹ ಉದಾಹರಣೆಗಳೂ ಇವೆ. ಆದರೆ ಈ ಚಿತ್ರ ಮಾತ್ರ 'ಎ' ಪ್ರಮಾಣಪತ್ರದೊಂದಿಗೆ ವಯಸ್ಕರಿಗೆ ಮಾತ್ರ ಎಂಬ ಹಣೆಪಟ್ಟಿಯಲ್ಲಿ ಬಿಡುಗಡೆಗೆ ಅಧಿಕೃತ ಒಪ್ಪಿಗೆ ಪಡೆದಿದೆ!

'ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ಆರಂಭದಿಂದ ಅಂತ್ಯದವರೆಗೆ ಇರುವುದು ಸಿಲ್ಕ್ ಸ್ಮಿತಾ ಜೀವನದ ಕಥೆ ಎನ್ನುವುದು ಚಿತ್ರತಂಡದ ಒಂದು ಹಂತದವರೆಗಿನ ವಾದ. ಆದರೆ ಅದರಲ್ಲಿ ಸಿಲ್ಕ್ ಕಥೆಗಿಂತ ಬೇರೆ ಮಸಾಲೆಗಳೇ ಜಾಸ್ತಿ. ನಟಿಯೊಬ್ಬಳ ಲವ್, ಸೆಕ್ಸ್, ದೋಖಾವನ್ನೇ ಮೆರೆಸಲಾಗಿದೆ. ಪಾತ್ರಕ್ಕಾಗಿ ಸಾಕಷ್ಟು ಮಸಾಲೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

webdunia
PR
ಚಿತ್ರದ ನಾಯಕಿ ವೀಣಾ ಮಲಿಕ್ ಗೊತ್ತೇ ಇದೆ, ಪಾಕಿಸ್ತಾನ ಮೂಲದ ಸೆಕ್ಸ್ ಬಾಂಬ್. ಎಲ್ಲಿ ಹೋದರೂ ವಿವಾದ ಹುಟ್ಟು ಹಾಕುವ ನಟಿ. ಈಕೆಗೆ ನಾಯಕನಾಗಿರುವುದು ಈ ಚಿತ್ರದ ನಿರ್ಮಾಪಕ ವೆಂಕಟಪ್ಪ ಅವರ ಪುತ್ರ ಅಕ್ಷಯ್. ಈ ಹಿಂದೆ 'ಬಾಬಾ' ಎಂಬ ಚಿತ್ರ ನಿರ್ದೇಶಿಸಿದ್ದ ತ್ರಿಶೂಲ್ ಇಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ.

ಇದೀಗ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ ಎ ಪ್ರಮಾಣಪತ್ರವನ್ನು ನೀಡಿರುವುದರಿಂದ ಚಿತ್ರವನ್ನು ವಯಸ್ಕರಷ್ಟೇ ನೋಡಬಹುದು. 18 ವರ್ಷದೊಳಗಿನವರಿಗೆ ಚಿತ್ರಮಂದಿರ ಪ್ರವೇಶಿಸಲು ಕಾನೂನು ಪ್ರಕಾರ ಅವಕಾಶವಿಲ್ಲ. ಅಕ್ಷಯ್ ಮತ್ತು ವೀಣಾ ಮಲಿಕ್ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ಅತಿರೇಕ ಎನ್ನುವಷ್ಟು ಹಾಟ್ ಆಗಿರುವುದರಿಂದ ಸೆನ್ಸಾರ್ ಈ ನಿರ್ಧಾರಕ್ಕೆ ಬಂದಿದೆ.

ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡುವ ಮೊದಲು ಎಷ್ಟು ಕತ್ತರಿ ಪ್ರಯೋಗ ಮಾಡಿದೆ ಎಂಬ ಮಾಹಿತಿಯಿಲ್ಲ. ಇದೀಗ ಪ್ರಮಾಣಪತ್ರ ಸಿಗುವುದರೊಂದಿಗೆ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. ಜುಲೈ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Share this Story:

Follow Webdunia kannada