Select Your Language

Notifications

webdunia
webdunia
webdunia
webdunia

ರಾಜಕೀಯದಲ್ಲಿ ರಾಗಿಣಿ.. ಇದು ಸಿನಿಮಾ ಕಥೇನಾ?

ರಾಜಕೀಯದಲ್ಲಿ ರಾಗಿಣಿ.. ಇದು ಸಿನಿಮಾ ಕಥೇನಾ?
, ಶನಿವಾರ, 25 ಜನವರಿ 2014 (09:32 IST)
PR
ರಾಗಿಣಿ ದ್ವಿವೇದಿ ರಾಜಕೀಯದಲ್ಲಿ ಇದ್ದಾರೆ. ಈ ರೀತಿ ಬರೆದರೆ ನಿಮಗೆ ಅನ್ನಿಸುವ ಸಂಗತಿ ಅದು ಆಕೆಯ ಹೊಸ ಚಿತ್ರ ಇರಬಹುದು ಅಂತ. ಆದರೆ ನಿಮ್ಮ ಎಣಿಕೆ ತಪ್ಪು ರಾಗಿಣಿಯ ಮುಂದಿನ ಚಿತ್ರದ ಹೆಸರು ರಾಜಕೀಯ ಅಲ್ಲ ಆಕೆ ಮುಂಬರುವ ಚುನಾವಣೆಯಲ್ಲಿ ಭಾಗವಾಗಲಿಕ್ಕೆ ಹೊರಟಿದ್ದಾರೆ . ಅಂದರೆ ಆಕೆ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ .

ಆಕೆಗೆ ಮೂರು ಪಕ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಫರ್ ಬಂದಿದೆಯಂತೆ. ಆದರೆ ಯಾವುದಕ್ಕೆ ಆದ್ಯತೆ ನೀಡ ಬೇಕು ಎನ್ನುವುದು ತಿಳಿದಿಲ್ಲ ಎನ್ನುವ ಲಿಬಿಲಿ ರಾಗಿಣಿಗೆ ಇದೆಯಂತೆ. ನಾನೀಗ ಸಿನಿಮಾ ಕೆಲಸಗಳಲ್ಲಿ ತುಂಬಾ ಬ್ಯುಸಿ. ಹೆಚ್ಚು ರಾಜಕೀಯ ಕೆಲಸಗಳಲ್ಲಿ ಭಾಗವಹಿಸಲು ಕಷ್ಟ ಎಂದಿದ್ದಾರೆ ಈ ಚೆಲುವೆ. ಈಗ ಆಕೆಗೆ ಕೇವಲ ಕನ್ನಡ ಚಿತ್ರಗಳಲ್ಲ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಯಾವ ಕಡೆಗೆ ಆಕೆಯ ಒಲವು ಎನ್ನುವುದು ಗೊತ್ತಿಲ್ಲ. ಈಗ ಆಕೆ ಉಪೇಂದ್ರ ನಟನೆಯ ಕುಂಭಕೋಣ ಚಿತ್ರದಲ್ಲಿ ಬ್ಯುಸಿ.

Share this Story:

Follow Webdunia kannada