Select Your Language

Notifications

webdunia
webdunia
webdunia
webdunia

ರಮ್ಯಾಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆಯೇ ರಾಗಿಣಿ?

ರಮ್ಯಾಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆಯೇ ರಾಗಿಣಿ?
SUJENDRA
ನಾಚಿಕೆ ಸ್ವಭಾವದ ನಟಿ ರಾಗಿಣಿ ತುಪ್ಪಾ ಬೇಕಾ ತುಪ್ಪಾ ಎಂದು ವಿವಿಧ ಭಂಗಿಗಳಲ್ಲಿ ಕುಣಿದು ತುಪ್ಪ ಪ್ರಿಯರನ್ನು ಮನರಂಜಿಸಿದ್ದರು. ಪರದೆಯಲ್ಲಿ ಹಾಡಿ ಕುಣಿದಿದನ್ನು ಗಂಭೀರವಾಗಿ ಪರಿಗಣಿಸಿದ ಪುಂಡ ಅಭಿಮಾನಿಗಳು ತುಪ್ಪ ಬೇಕು ಎಂದು ರಾಗಿಣಿಯನ್ನು ನೇರವಾಗಿ ಕೇಳಿದ್ದರು. ಇದರಿಂದ ಒಮ್ಮೆಲೆ ಮುಜುಗರಕ್ಕೀಡಾದ ನಟಿ ನಗುವಿನ ಪ್ರತಿಕ್ರಿಯೆ ನೀಡಿದ್ದರು. ಈ ವಿಷಯ ನಿಮಗೆ ಗೊತ್ತಿರುವಂತದ್ದೇ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹೊಸ ವಿಷಯ ಅಂದರೆ, ತುಪ್ಪಾ ಬೇಕಾ ತುಪ್ಪಾ ಹಾಡಿಗೆ ಕುಣಿದಿದ್ದೇ ರಾಗಿಣಿಗೆ ಅದೃಷ್ಟ ಖುಲಾಯಿಸಿದೆ. ಈಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರಿಗಿಂತ ರಾಗಿಣಿಗೆ ಸಂಭಾವನೆ ಅಧಿಕವಾಗಿದೆ. ಅವರ ಸಂಭಾವನೆ 33 ಲಕ್ಷಕ್ಕೇರಿದೆ ಎನ್ನುತ್ತಿವೆ ಗಾಂಧಿನಗರದ ಆಪ್ತ ಮೂಲಗಳು.

ತನ್ನ ನಟನಾ ವರ್ಚಸ್ಸಿನಿಂದ ಚಿತ್ರಗಳು ಒಂದು ಕೋಟಿ ಗಳಿಸುತ್ತದೆ ಎಂಬ ವಿಶ್ವಾಸ ರಾಗಿಣಿಗಿದೆಯಂತೆ.

ಇದ್ದರೂ ಇರಬಹುದು ಅಲ್ಲವೆ. ಕೇವಲ ನಾಯಕರನ್ನು ಮಾತ್ರ ನೋಡಿ ಯಾರು ಸಿನಿಮಾ ನೋಡಲು ಹೋಗುವುದಿಲ್ಲ. ನಾಯಕಿಯ ಮೈಮಾಟ, ಅಭಿನಯವನ್ನು ನೋಡಿಯೂ ಚಿತ್ರ ವೀಕ್ಷಿಸಲು ಹೋಗುತ್ತಾರೆ. ಹಾಗಾಗಿ ನಾಯಕರು ಮಾತ್ರ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವುದರ ಜತೆಗೆ ನಾಯಕಿಯರೂ ಹೆಚ್ಚಿಸಿಕೊಳ್ಳಲಿ.

ಪಾಪ ವಯಸ್ಸು ಮೀರಿದರೆ ಅವಕಾಶಗಳು ಸಿಗುವುದಿಲ್ಲ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada