Select Your Language

Notifications

webdunia
webdunia
webdunia
webdunia

ಯುವ ಪ್ರೇಮಿಗಳಿಗೆ 'ರಜನಿ ದಿ ಸೂಪರ್ಸ್ಟಾರ್'

ಯುವ ಪ್ರೇಮಿಗಳಿಗೆ 'ರಜನಿ ದಿ ಸೂಪರ್ಸ್ಟಾರ್'
ಉಪೇಂದ್ರ ಅಭಿನಯದ 'ರಜನಿ' ಚಿತ್ರ ಸೆಟ್ಟೇರಲು ಸಿದ್ಧತೆ ನಡೆಯುತ್ತಿದೆ. ಈ ನಡುವೆಯೇ ಅದೇ ಹೆಸರಿನ ಮತ್ತೊಂದು ಚಿತ್ರ ಕೂಡಾ ಬರುತ್ತಿದೆ. ಆದರೆ ಈ ಚಿತ್ರದಲ್ಲಿ ಸ್ವಲ್ಪ ಬದಲಾವಣೆ ಎಂದರೆ ಇದು 'ರಜನಿ ದಿ ಸೂಪರ್ಸ್ಟಾರ್' ಎಂಬ ಟೈಟಲ್ ಹೊಂದಿದೆ.

ಹಾಗಾಂತ ಈ ಚಿತ್ರ ರಜನೀಕಾಂತ್ ಅವರ ಮೇಲೆ ತಯಾರಾಗುತ್ತಿದೆ ಎಂದರೆ ಅದು ತಪ್ಪು. ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ಇವರು ಸ್ಟಾರ್ ಕ್ರಿಯೇಟರ್ಸ್ ಎಂಬ ಸಂಸ್ಥೆಯ ಮೂಲಕ ಚಿತ್ರರಂಗ ಪ್ರವೇಶಿಸುವವರಿಗೆ ತರಬೇತಿ ನೀಡುತ್ತಿದ್ದಾರೆ. ಈ ಹಿಂದೆ 'ವಾರಸ್ದಾರ' ಎಂಬ ಚಿತ್ರವನ್ನು ಕೂಡಾ ನಿರ್ದೇಶಿಸಿದ್ದರು.

'ರಜನಿ ದಿ ಸೂಪರ್ಸ್ಟಾರ್' ಚಿತ್ರವನ್ನು ಸ್ಟಾರ್ ಕ್ರಿಯೇಟರ್ಸ್ ಬ್ಯಾನರ್‌ನಡಿ ಅವರ ಪತ್ನಿ ಶಿಲ್ಪಾ ದೇಶಪಾಂಡೆ ನಿರ್ಮಿಸಲಿದ್ದು, ಕತೆ ಚಿತ್ರಕಥೆ ಹಾಗೂ ಸಂಭಾಷಣೆ, ನಿರ್ದೇಶನವೆಲ್ಲ ಗುರುದೇಶಪಾಂಡೆ ಅವರದ್ದೇ. ಇದೊಂದು ಅಪ್ಪಟ ಪ್ರೇಮಕಥೆಯಾಗಿದ್ದು, ಇಂದಿನ ಯುವ ಪ್ರೇಮಿಗಳಿಗೆ ಈ ಚಿತ್ರ ಮುದ ನೀಡಲಿದೆ ಎನ್ನುತ್ತಾರೆ ಗುರು.

Share this Story:

Follow Webdunia kannada