Select Your Language

Notifications

webdunia
webdunia
webdunia
webdunia

ಮೈತುಂಬಾ ಹಾವು ಸುತ್ತಿಕೊಂಡ ರಾಗಿಣಿ ದ್ವಿವೇದಿ

ಮೈತುಂಬಾ ಹಾವು ಸುತ್ತಿಕೊಂಡ ರಾಗಿಣಿ ದ್ವಿವೇದಿ
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2013 (11:19 IST)
PR
ಕ್ಯಾಬರೆ ನೃತ್ಯ ಮಾಡುವವರು ದೇಹದ ತುಂಬೆಲ್ಲಾ ಹಾವಿನ ಚಿತ್ರ ಬಿಡಿಸಿಕೊಳ್ಳುತ್ತಿದ್ದ ಕಾಲವೊಂದಿತ್ತು. ಇಲ್ಲವೇ ದೇಹದ ಸುತ್ತ ಹೆಬ್ಬಾವು ಸುತ್ತಿಕೊಂಡು ಮೈ ನವಿರೇಳುವಂತೆ ಮಾಡುತ್ತಿದ್ದರು. ಈಗ ಆ ನೆನಪು ಮರುಕಳಿಸುವಂತೆ ಮಾಡಿದ್ದು ನಟಿ ರಾಗಿಣಿ ದ್ವಿವೇದಿ. ಶ್ರೀನಿವಾಸ ರಾಜು ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಥಾಯ್ಲಂಡ್ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿರುವ ರಾಗಿಣಿ ಮೈಮೇಲೆ ದೊಡ್ಡ ಸರ್ಪದ ಹಚ್ಚೆ ಮನೆ ಮಾಡಿದೆ. ಆಕೆಯ ದೇಹದ ಮೇಲಿರುವ ಪಾರದರ್ಶಕ ಉಡುಗೆ ಗಮನಿಸಿದರೆ ಆಕೆಯ ಮೈಮೇಲೆ ಹೆಡೆ ಎತ್ತಿದರೆ ಕಿಬ್ಬೊಟ್ಟೆಯಲ್ಲಿ ಸುರುಳಿ ಸುತ್ತಿ ನಾಭಿಯ ಬಳಿ ಟನರ್್ ತೆಗೆದುಕೊಂಡು ಹೊಟ್ಟೆಯಿಂದ ಬಾಲವನ್ನು ಕೆಳಗಿಳಿಸಿರುವಂತೆ ಕಾಣುತ್ತದೆ.

ಇನೂ ಅನೇಕ ಹಚ್ಚೆಗಳನ್ನು ಅವರು ಹಾಕಿಸಿಕೊಂಡಿದ್ದರು. ಒಂದರಲ್ಲಿ ಪ್ರೀತಿಯೇ ಸುಳ್ಳು ಎಂಬ ಬರಹವಿದ್ದರೆ ಮತ್ತೊಂದರಲ್ಲಿ ಪುರಾತನ ಬುಡಕಟ್ಟು ಜನಾಂಗವೊಂದರ ಹಚ್ಚೆ ಇದೆ. ಮನ್ಮಥನ ಚಿತ್ರ, ಬಾಣದ ಚಿತ್ರ ಅವರ ಮೈಯನ್ನು ಅಲಂಕರಿಸಿದೆ. ಪಾತ್ರಕ್ಕೆ ಅಷ್ಟು ಹಚ್ಚೆ ಬೇಕಿದ್ದರಿಂದ ಹಾಕಿಸಿಕೊಂಡೆ ಎನ್ನುತ್ತಾರೆ ರಾಗಿಣಿ.

ತಿಂಗಳ ಹಿಂದೆ ಅವರ ಮನೆಗೆ ಹಾವು ನುಗ್ಗಿದ್ದು ನಿಮಗೆ ನೆನಪಿರಬಹುದು. ಆ ಘಟನೆಗೂ ಈಗ ಅವರು ಹಾಕಿಸಿಕೊಂಡಿರುವ ಹಚ್ಚೆಗೂ ಏನಾದರೂ ಸಂಬಂಧವಿದೆಯೇ ಎಂಬ ಸಂಶಯದ ಮಾತುಗಳು ಸ್ಯಾಂಡಲ್ವುಡ್ನಲ್ಲಿ ಸುತ್ತುತ್ತಿವೆಯಂತೆ. ಅದೆಲ್ಲಾ ಬಕ್ವಾಸ್ ಎಂದಿರುವ ರಾಗಿಣಿ ಇದು ಕೇವಲ ಪಾತ್ರಕ್ಕಾಗಿ ಮಾಡಿಕೊಂಡ ಸಿದ್ಧತೆ. ನಾಲ್ಕು ಗಂಟೆ ಟ್ಯಾಟು ಹಾಕಿಸಿಕೊಂಡು ಕುಳಿತುಕೊಂಡಿದ್ದೇನೆ. ಇದು ಭಿನ್ನ ಅನುಭವ. ಇದೇನು ಶಾಶ್ವತವಾದುದಲ್ಲ ಎಂದಿದ್ದಾರೆ ರಾಗಿಣಿ.

Share this Story:

Follow Webdunia kannada