Select Your Language

Notifications

webdunia
webdunia
webdunia
webdunia

ಮೂವರು ನಾಯಕಿಯರ ಜತೆ ದರ್ಶನ್ ರೊಮ್ಯಾನ್ಸ್

ಮೂವರು ನಾಯಕಿಯರ ಜತೆ ದರ್ಶನ್ ರೊಮ್ಯಾನ್ಸ್
SUJENDRA
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮೂವರು ನಾಯಕಿಯರೇ? ಹೌದು, ಹೊಸ ಚಿತ್ರ 'ವಿರಾಟ್'ನಲ್ಲಿ ಅವರು ಮೂವರು ನಾಯಕಿಯರ ಜತೆ ಮರ ಸುತ್ತಲಿದ್ದಾರೆ. ಸಾರಥಿ, ಚಿಂಗಾರಿ ಸೂಪರ್ ಹಿಟ್ ಆದ ನಂತರ ಗೆಲುವಿನ ನಗೆಯಲ್ಲೇ ಇರುವ ದರ್ಶನ್‌ಗೆ ಇನ್ನೇನು ಬೇಕು?!

ಎಚ್. ವಾಸು ನಿರ್ದೇಶನದ 'ವಿರಾಟ್' ಚಿತ್ರದಲ್ಲಿ ಕನ್ನಡತಿ ಇರೋದು ಒಬ್ಬರೇ. ಅವರು ಚೈತ್ರ ಚಂದ್ರನಾಥ್. ಈಗಷ್ಟೇ 19ರಲ್ಲಿ ತುಂಬಿ ತುಳುಕುತ್ತಿರುವ ಚೆಲ್ಲು ಚೆಲ್ಲು ಹುಡುಗಿಗೆ ದರ್ಶನ್ ಜತೆ ಅಭಿನಯಿಸುವ ಅವಕಾಶ ಸಿಕ್ಕಿರುವುದು ಸಿಕ್ಕಾಪಟ್ಟೆ ಖುಷಿ ತಂದಿದೆ.

ಆದರೆ ಇದೇ ಅವರ ಮೊದಲ ಚಿತ್ರವಲ್ಲ. ಈ ಹಿಂದೆ ಶ್ರೀಲಂಕಾದ 'ಕಲ್ಪಾಂತಯಕ ಸಿಹಿಣಯ' ಎಂಬ ಸಿಂಹಳೀಯ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ನಟನೆ ಗೊತ್ತು. ತನ್ನದು ವಿಭಿನ್ನ ಪಾತ್ರ ಎಂದೂ ಆಕೆ ಹೇಳಿಕೊಂಡಿದ್ದಾರೆ.

ಇದು ಒಬ್ಬಳು ನಾಯಕಿಯ ಕಥೆ. ಇಶಾ ಚಾವ್ಲಾ ಮತ್ತು ವಿದಿಶಾ ಶ್ರೀವಾತ್ಸವ್ ಅನ್ನೋ ಇನ್ನಿಬ್ಬರು ಮುಂಬೈ ಆಮದು ನಾಯಕಿಯರು. ಅವರಲ್ಲಿ ಇಶಾ ಚಾವ್ಲಾ ಈಗಾಗಲೇ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆಕೆಯ ಹೆಸರಲ್ಲಿ ಕೆಲವು ಹಿಟ್ ಚಿತ್ರಗಳೂ ಇವೆ. ಆದರೆ ವಿದಿಶಾ ಶ್ರೀವಾತ್ಸವ್ ಹೊಸಬಳು. ಇದುವರೆಗೆ ಬೆಳ್ಳಿತೆರೆಗಾಗಿ ಕ್ಯಾಮರಾ ಎದುರಿಸಿದವರಲ್ಲ. ಮಾಡೆಲ್ ಆಗಿರುವುದರಿಂದ ನಟನೆ ಕಷ್ಟವಿಲ್ಲ ಅನ್ನುತ್ತಾರೆ.

ಸುಹಾಸಿನಿ ಈ ಚಿತ್ರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಾರೆ. ಸುಮಲಾತ ಅಂಬರೀಷ್ ಮತ್ತು ರವಿಶಂಕರ್ ಕೂಡ ಪ್ರಮುಖ ಪಾತ್ರಗಳನ್ನು ಇಲ್ಲಿ ಮಾಡುತ್ತಿದ್ದಾರಂತೆ.

'ವಿರಾಟ್'ಗೆ ಮೊದಲ ಹಂತದ ಚಿತ್ರೀಕರಣ ಈಗಾಗಲೇ ನಡೆದಿದೆ. ಅದು ಹತ್ತೇ ದಿನದಲ್ಲಿ ಮುಗಿದಿತ್ತು. ಈಗ ಎರಡನೇ ಹಂತದ ಚಿತ್ರೀಕರಣ ಇಂದಿನಿಂದ (ಫೆಬ್ರವರಿ 24) ಶುರು. ಬಾಬಾ ಬುಡನ್‌ಗಿರಿಯಲ್ಲಿ ಹಾಕಲಾಗಿರುವ ಅದ್ಧೂರಿ ಗ್ಲಾಸ್ ಸೆಟ್ ಇಲ್ಲಿ ವಿಶೇಷವಂತೆ. ಕ್ಲೈಮ್ಯಾಕ್ಸ್‌ನಲ್ಲಿ ಈ ಸೆಟ್ಟನ್ನು ಬ್ಲಾಸ್ಟ್ ಮಾಡುವ ದೃಶ್ಯವೂ ಇದೆಯಂತೆ.

Share this Story:

Follow Webdunia kannada