Select Your Language

Notifications

webdunia
webdunia
webdunia
webdunia

'ಮುತ್ತಿನ ಮಳೆ'ಯಲ್ಲಿ ಒದ್ದೆಯಾಗಲಿದ್ದಾರೆಯೇ ಕೊಡಗಿನ ಬೆಡಗಿ ರಾಗನಾ?

'ಮುತ್ತಿನ ಮಳೆ'ಯಲ್ಲಿ ಒದ್ದೆಯಾಗಲಿದ್ದಾರೆಯೇ ಕೊಡಗಿನ ಬೆಡಗಿ ರಾಗನಾ?
PR
ನವಿರು ಪ್ರೇಮಕಥೆಯುಳ್ಳ ಚಿತ್ರಗಳು ಎಂದಿಗೂ ಸೋಲುವುದಿಲ್ಲ ಎಂಬುದು ಚಿತ್ರೋದ್ಯಮಿಗಳ ಅಭಿಪ್ರಾಯ. ಸಾಮಾನ್ಯವಾಗಿ ಇಂಥ ಚಿತ್ರಗಳಿಗೆ ಕಾಲೇಜು ಹುಡುಗ-ಹುಡುಗಿಯರು ಮುತ್ತಿಕೊಳ್ಳುವುದರಿಂದ ಒಂದಷ್ಟು ಮಾಧುರ್ಯಪೂರ್ಣ ಗೀತೆಗಳು, ಕಾಲೇಜು ಪರಿಸರ ಮತ್ತು ಹಾಸ್ಯಮಯ ದೃಶ್ಯಗಳನ್ನು ಉತ್ತಮ ರೀತಿಯಲ್ಲಿ ಪೋಣಿಸಿ ನೀಡಿಬಿಟ್ಟರೆ ಇಂಥ ಚಿತ್ರಗಳು ಯಶಸ್ಸು ಕಾಣುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರವರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ತಮ್ಮ ಮಾತಿಗೆ ಉದಾಹರಣೆಯಾಗಿ ಗಾಂಧಿನಗರದ ಮಂದಿ 'ಎಕ್ಸ್ ಕ್ಯೂಸ್ ಮಿ', 'ಜೋಶ್', 'ಫ್ರೆಂಡ್ಸ್, 'ಅಭಿ' ಮೊದಲಾದ ಚಿತ್ರಗಳ ಉದಾಹರಣೆಯನ್ನು ನೀಡುತ್ತಾರೆ. ಅವುಗಳ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರವು ಸದ್ಯದಲ್ಲಿಯೇ ಸೆಟ್ಟೇರಲಿದೆ ಎಂಬುದು ಗಾಂಧಿನಗರದ ಸದ್ಯದ ಸುದ್ದಿ.

'ಮುತ್ತಿನ ಮಳೆ' ಎಂಬ ಹೆಸರನ್ನಿಟ್ಟುಕೊಂಡಿರುವ ಈ ಚಿತ್ರದಲ್ಲಿ ಕಾಲ್ಗೆಜ್ಜೆ ಚಿತ್ರದಲ್ಲಿ ನಟಿಸಿದ್ದ ವಿಶ್ವಾಸ್ ನಾಯಕ ಹಾಗೂ ಬೆಸುಗೆ ಚಿತ್ರದಲ್ಲಿ ನಟಿಸಿದ್ದ ಕೊಡಗಿನ ಬೆಡಗಿ ರಾಗನಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಿಯಾ ಸಾಗರ್ ಚಿತ್ರದ ನಿರ್ದೇಶಕರು. ಕಥೆ-ಚಿತ್ರಕಥೆ-ಸಂಭಾಷಣೆಯೂ ಅವರದ್ದೇ. ನಿರ್ಮಾಪಕರ ತಂಡದಲ್ಲಿ ಹಲವು ಕೈಗಳು ಸೇರಿವೆ. ಭಾಸ್ಕರ ರಾಜು, ಚಂದ್ರಶೇಖರ ರಾಜು, ಬಾಲಾಜಿ, ಸತೀಶ್, ವಿಶ್ವನಾಥ್ ಮೊದಲಾದವರ ಜೊತೆಗೆ ಪ್ರಿಯಾ ಸಾಗರ್ ಕೂಡಾ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ರವಿಶರ್ಮಾ ಸಂಗೀತ, ಮೋಹನ್ ಛಾಯಾಗ್ರಹಣ, ಶ್ರೀನಿವಾಸ್ ಸಂಕಲನ, ಅಶೋಕ್ ಕುಮಾರ್ ಸಹಕಾರವಿರುವ ಈ ಚಿತ್ರ ಕನ್ನಡ ಚಿತ್ರರಂಗದ ಸದ್ಯದ ಟ್ರೆಂಡನ್ನು ಬದಲಿಸುವುದೇ ಎಂಬುದನ್ನು ಕಾದುನೋಡಬೇಕಿದೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada