Webdunia - Bharat's app for daily news and videos

Install App

ಮಿಲನ ಖ್ಯಾತಿಯ ಪ್ರಕಾಶ್ರಿಂದ ಸುದೀಪ್ಗಾಗಿ ಹೊಸ ಚಿತ್ರ

Webdunia
ಶುಕ್ರವಾರ, 23 ಆಗಸ್ಟ್ 2013 (10:09 IST)
PR
ಪ್ರಕಾಶ್ ನಿರ್ದೇಶನದ ಮಿಲನ, ವಂಶಿ ಚಿತ್ರಗಳು ಬಾಕ್ಸಾಫೀಸಿನಲ್ಲಿ ಹಿಟ್ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಮತ್ತೊಂದು ಗೆಲುವು ಸಾಧಿಸಲು ಪ್ರಕಾಶ್ ಸುದೀಪ್ ಜೊತೆ ಸೇರಿದ್ದಾರೆ. ಸುದೀಪ್ ಫೈನೆಸ್ಟ್ ನಟ. ಅವರ ಜೊತೆ ಸಿನೆಮಾ ಮಾಡುವ ಕುರಿತು ಬಹಳ ದಿನಗಳಿಂದ ಚರ್ಚೆ ಮಾಡುತ್ತಿದ್ದೆವು. ಅದು ಈಗ ಮೂರ್ತರೂಪ ಪಡೆದಿದೆ. ನಾವಿಬ್ಬರು ಚಿತ್ರ ಮಾಡುವುದು ಫೈನಲ್ ಆಗಿದ್ದು ಕಥೆ, ಚಿತ್ರಕಥೆ ಬಗ್ಗೆ ಚರ್ಚೆ ನಡೆಯುತ್ತಿದೆ. 2014ರಲ್ಲಿ ಚಿತ್ರ ಆರಂಭವಾಗಲಿದೆ ಎಂದಿದ್ದಾರೆ ಪ್ರಕಾಶ್.

ಲವ್ ಸ್ಟೋರಿ ಮಾಡುವುದರಲ್ಲಿ ಅವರದ್ದು ಎತ್ತಿದ ಕೈ. ಅವರ ಬಹುತೇಕ ಚಿತ್ರಗಳು ಪ್ರೀತಿ ಸುತ್ತಲೇ ಕೇಂದ್ರೀಕೃತವಾಗಿರುತ್ತವೆ. ಸುದೀಪ್ ಮಾಸ್ ಹೀರೋ, ಆದ್ದರಿಂದ ಅವರಿಗೆ ಸೂಕ್ತವಾದ ಕಥೆ ಮಾಡುವುದು ಅಗತ್ಯ. ಅವರಿಗಾಗಿ ಚೆಂದದ ಲವ್ ಸ್ಟೋರಿ ಚಿತ್ರ ಮಾಡಬೇಕು ಎಂದುಕೊಂಡಿದ್ದೇನೆ. ಅವರಿಗೆ ಕನ್ನಡೇತರ ಪ್ರೇಕ್ಷಕರೂ ಇದ್ದಾರೆ. ಹಾಗಾಗಿ ಯೂನಿವರ್ಸಲ್ ಆಡಿಯನ್ಸ್ ಇಷ್ಟಪಡೆಯುವ ಕಥೆ ಮಾಡುತ್ತಿದ್ದೇವೆ ಎನ್ನುತ್ತಾರೆ ಪ್ರಕಾಶ್.

ಈ ಪ್ರಾಜೆಕ್ಟ್ ಆರಂಭಕ್ಕೂ ಮುನ್ನ ಇನ್ನೊಂದು ಚಿತ್ರ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ. ಸದ್ಯದಲ್ಲೇ ಮಾಹಿತಿ ಕೊಡುವುದಾಗಿ ಪ್ರಕಾಶ್ ತಿಳಿಸಿದ್ದಾರೆ. ಸುದೀಪ್-ಪ್ರಕಾಶ್ ಜೋಡಿಯ ಸಿನೆಮಾವನ್ನು ಆಕ್ಸಿಡೆಂಟ್ ಚಿತ್ರ ನಿರ್ಮಿಸಿದ್ದ ರಘುನಾಥ್ ನಿಮರ್ಿಸುತ್ತಿದ್ದಾರೆ. ಒಳ್ಳೆಯ ಸಿನೆಮಾ ಕೊಡುತ್ತೇವೆ ಎಂಬುದು ಸದ್ಯದ ಗ್ಯಾರಂಟಿ. ಆದರೆ ಪ್ರಾಜೆಕ್ಟ್ ಬಗ್ಗೆ ಮಾತನಾಡುವುದಕ್ಕೆ ಬೇಕಾದಷ್ಟು ಸಮಯ ಇದೆ ಎನ್ನುತ್ತಾರೆ ಸುದೀಪ್.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments