Webdunia - Bharat's app for daily news and videos

Install App

ಮಾರ್ಚ್ 18ರಿಂದ ಸಂಜು ವೆಡ್ಸ್ ಗೀತಾ ಪ್ರೇಮಗಾಥೆ

Webdunia
ಸೋಮವಾರ, 28 ಫೆಬ್ರವರಿ 2011 (17:06 IST)
ಶ್ರೀನಗರ ಕಿಟ್ಟಿ ಮತ್ತು ಲಕ್ಕಿ ಸ್ಟಾರ್ ರಮ್ಯಾ ಮೊತ್ತ ಮೊದಲ ಬಾರಿಗೆ ಜತೆಯಾಗಿ ನಟಿಸಿರುವ, ಹಾಡುಗಳ ಮೂಲಕ ಕರ್ನಾಟಕದಲ್ಲಿ ತಣ್ಣನೆ ಗಾಳಿಗೆ ಕಾರಣವಾಗಿರುವ ನಾಗಶೇಖರ್ ನಿರ್ದೇಶನದ ಬಹುನಿರೀಕ್ಷಿತ ಎರಡನೇ ಚಿತ್ರ 'ಸಂಜು ವೆಡ್ಸ್ ಗೀತಾ' ಮಾರ್ಚ್ 18ರ ಶುಭ ಶುಕ್ರವಾರ ಬಿಡುಗಡೆಯಾಗಲಿದೆ.
PR

ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬನ ಪ್ರೇಮ ಕಥೆ ಎಂದು ಹೇಳಲಾಗುತ್ತಿರುವ ಈ ಚಿತ್ರ ವಿಶ್ವಕಪ್ ಜ್ವರದ ನಡುವೆಯೇ ಬಿಡುಗಡೆಯಾಗುತ್ತಿದೆ. ಆದರೆ ಯಾವುದೇ ಸಮಸ್ಯೆಯಾಗದು ಎನ್ನುವ ಭರವಸೆ ಚಿತ್ರತಂಡದ್ದು. ಚಿತ್ರಕ್ಕೆ ಫೆಬ್ರವರಿ 14ರಂದೇ ಸೆನ್ಸಾರ್ ಒಪ್ಪಿಗೆ ಸಿಕ್ಕಿದೆ.

ಜೆಸ್ಸಿ ಗಿಫ್ಟ್ ಸಂಗೀತದಲ್ಲಿನ ಹಾಡುಗಳಂತೂ ಒಂದಕ್ಕಿಂತ ಒಂದು ಮಿಗಿಲಾಗಿವೆ ಎಂಬ ಮಾತುಗಳು ಎಲ್ಲೆಡೆಯಿಂದ ಬರುತ್ತಿವೆ. ಸ್ವತಃ ಕಿಟ್ಟಿಗೆ ಹೊಸತೊಂದು ಇಮೇಜನ್ನು ಈ ಚಿತ್ರ ನೀಡಲಿದೆ ಎಂಬ ಭರವಸೆಯೂ ಇದೆ. ಈ ನಡುವೆ ಹಾಡುಗಳನ್ನು ಯೂಟ್ಯೂಬಿನಲ್ಲಿ ಅಪ್‌ಲೋಡ್ ಮಾಡಲಾಗಿದೆ.

' ದುನಿಯಾ' ಹಿನ್ನೆಲೆ ಸಂಗೀತದಿಂದ ಮಿಂಚಿದ್ದ, ಅತ್ಯುತ್ತಮ ಕೀಬೋರ್ಡ್ ವಾದಕ ಎಂದು ಹೆಸರು ಪಡೆದುಕೊಂಡಿರುವ ನಿರ್ದೇಶಕ, ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲಾ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಇದು ಪ್ಲಸ್ ಪಾಯಿಂಟ್ ಎನಿಸಲಿದೆಯಂತೆ.

ಈ ಹಿಂದೆಂದೂ ಕಂಡಿರದ ರೀತಿಯಲ್ಲಿ ಸ್ವತಃ ಮುತುವರ್ಜಿ ವಹಿಸಿ ಚಿತ್ರದ ಯಶಸ್ಸಿಗೆ ಶ್ರಮಿಸುತ್ತಿರುವ ರಮ್ಯಾ ನಿರೀಕ್ಷೆಯೂ ಬೆಟ್ಟದೆತ್ತರದ್ದು. ಅವರೇ ಅರ್ಪಿಸುತ್ತಿರುವ ಚಿತ್ರವಿದು. ತನ್ನ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಪುಟಗಳಲ್ಲಿ ಈ ಚಿತ್ರದ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡದೆ ನಿದ್ದೆ ಮಾಡದಷ್ಟು ಸಿನಿಮಾವನ್ನು ಹಚ್ಚಿಕೊಂಡಿದ್ದಾರೆ. ಶ್ರೇಯಾ ಘೋಷಾಲ್ ಹಾಡಿರುವ ಶೀರ್ಷಿಕೆ ಗೀತೆಯನ್ನು ಕೂಡ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾರೆ.

ಇವೆಲ್ಲಕ್ಕಿಂತಲೂ ಹೆಚ್ಚಾಗಿ ರಮ್ಯಾ, ಶ್ರೀನಗರ ಕಿಟ್ಟಿ, ರಂಗಾಯಣ ರಘು, ಅವಿನಾಶ್, ಶರಣ್ ಮುಂತಾದವರು ಚಿತ್ರದಲ್ಲಿ ಉಚಿತವಾಗಿ ನಟಿಸಿರುವುದು. ಈ ಬಗ್ಗೆ ರಮ್ಯಾ ಅವರಲ್ಲಿ ಸ್ವತಃ ವೆಬ್‌ದುನಿಯಾ ಪ್ರತಿಕ್ರಿಯೆ ಬಯಸಿದಾಗ, ಯಾವುದೇ ಉತ್ತರ ನೀಡಲು ನಿರಾಕರಿಸಿದ್ದಾರೆ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments