Webdunia - Bharat's app for daily news and videos

Install App

ಮಾನಸಿಗೆ ಬಜಾರಿ ಪಾತ್ರ ಅಂದ್ರೆ ತುಂಬಾ ಇಷ್ಟವಂತೆ

Webdunia
PR
PR
ಕನಸು ಕಂಗಳ ಅವಕಾಶ ವಂಚಿತೆ 'ಮೊಗ್ಗಿನ ಮನಸು' ಹುಡುಗಿ ಮಾನಸಿ ನಟಿಸಿದ ಚಿತ್ರಗಳು ಬಿಡುಗಡೆ ಕಾಣುತ್ತಿಲ್ಲ ಎಂಬ ಅಪವಾದಗಳ ನಡುವೆಯೇ ಅಲ್ಲೊಂದು ಇಲ್ಲೊಂದು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಅದರಲ್ಲೊಂದು 'ಬಂಗಾರಿ'. ಲೂಸ್‌ಮಾದ ಯೋಗೀಶ್ ನಾಯಕನಾಗಿರುವ ಈ ಚಿತ್ರದಲ್ಲಿ ಮಾನಸಿಯದ್ದು ಬಜಾರಿ ಹುಡುಗಿ ಪಾತ್ರವಂತೆ.

ಪಕ್ಕಾ ರಫ್ ಎನ್ ಟಫ್ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿರುವ ಮಾನಸಿಯಂತೂ ಬಹು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. 'ಈ ಪಾತ್ರ ತುಂಬಾ ಚಾಲೆಂಜಿಂಗ್ ಆಗಿರುವುದರಿಂದ ನನ್ನೆಲ್ಲಾ ಪ್ರತಿಭೆಗಳಿಗೆ ಇಲ್ಲಿ ಅವಕಾಶವಿದೆ. ಇಂತಹ ಚಾಲೆಂಜಿಂಗ್ ಪಾತ್ರಗಳನ್ನೇ ನಾನಿನ್ನು ಎದುರು ನೋಡುತ್ತೇನೆ' ಎಂದಿದ್ದಾರೆ.

ಹಳ್ಳಿ ಹುಡುಗಿಯ ಪಾತ್ರವಾಗಿರುವುದರಿಂದ ಬಹಳಷ್ಟು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿರುವ ಮಾನಸಿ, 'ಬಂಗಾರಿ ಚಿತ್ರದ ಕಥೆ ಮತ್ತು ಪಾತ್ರ ಈ ಹಿಂದೆ ನಾನು ನಟಿಸಿರುವ ಚಿತ್ರಗಳಿಂದ ಭಿನ್ನವಾಗಿದೆ. ಇಲ್ಲಿ ಅಭಿನಯಕ್ಕೆ ಹೆಚ್ಚು ಒತ್ತು ಇದೆ. ಪ್ರತಿಯೊಂದು ದೃಶ್ಯ ಮತ್ತು ಸಂಭಾಷಣೆಯಲ್ಲಿ ಹೊಸ ಖದರ್ ಇದೆ' ಎಂದಿದ್ದಾರೆ.

ಹಳ್ಳಿ ಹುಡುಗಿ 'ಬಂಗಾರಿ'ಗೆ ಸಾಥ್ ನೀಡಲು ನಾಯಕ ಯೋಗೀಶ್ ಅವರೂ ಹಳ್ಳಿ ಹೈದನ ಪಾತ್ರದಲ್ಲಿ ಮಿಂಚಲಿದ್ದಾರೆ.

ಮಾ. ಚಂದ್ರು ಮಾಲೂರು 'ಬಂಗಾರಿ' ನಿರ್ದೆಶಕರು. ಇದು ಅವರ ಚೊಚ್ಚಲ ಚಿತ್ರ. ಚಿತ್ರಕ್ಕೆ ಏಕಲವ್ಯ ಸಂಭಾಷಣೆ, ಎ.ಎಂ. ನೀಲ್ ಸಂಗೀತ ಹಾಗೂ ಆನಂದ ಪ್ರಭು ಛಾಯಾಗ್ರಹಣವಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments