Select Your Language

Notifications

webdunia
webdunia
webdunia
webdunia

ಮಾದಕನಟಿ ಸಿಮ್ರನ್ ಆಹಾ ಕಲ್ಯಾಣಂ ನಿಂದ ರೀ ಎಂಟ್ರಿ

ಮಾದಕನಟಿ ಸಿಮ್ರನ್ ಆಹಾ ಕಲ್ಯಾಣಂ ನಿಂದ ರೀ ಎಂಟ್ರಿ
, ಭಾನುವಾರ, 22 ಡಿಸೆಂಬರ್ 2013 (14:37 IST)
PR
ಸಿಮ್ರನ್ ಕೌರ್ ಟಾಲಿವುಡ್ ಮತ್ತು ಕಾಲಿವುಡ್ ನನ್ನು ಆಳಿದ ನಟಿ. ಈಕೆ ರೂಪ, ನಟನೆಯಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಉತ್ತಮ ಸ್ಥಾನ ಪಡೆದಿದ್ದಳು. ನುವ್ವುವಸ್ತಾವನಿ , ನರಸಿಮ್ಹನಾಯಿದು,ಕಲಿಸುಮ್ದಾಂ ರಾ , ಮುಂತಾದ ಚಿತ್ರಗಳಲ್ಲಿ ನಟಿಸುವುದರ ಮೂಲಕ ತೆಲುಗು ಸಿನಿಪ್ರಿಯರ ಮನೆಮಗಳಾದ ನಟಿ ಸಿಮ್ರನ್ . ಮದುವೆ ಆದ ಬಳಿಕ ಈಕೆ ಬೆಳ್ಳಿ ತೆರೆಯಿಂದ ಕಡೆಗೆ ಬರಲಿಲ್ಲ. ಆಗಾಗ ಜಾಹೀರಾತು, ಕಿರುತೆರೆ ರಿಯಾಲಿಟಿ ಶೋಗಳ ಮೂಲಕ ತನ್ನ ಇರುವಿಕೆಯನ್ನು ತೋರುತ್ತಿದ್ದರು.

ಆದರೆ ಬೆಳ್ಳಿತೆರೆಯ ಮೇಲೆ ಕಾಣಿಸುವುದಕ್ಕೆ ಆದ್ಯತೆ ನೀಡಲಿಲ್ಲ . ಈಗ ಮತ್ತೆ ಆಕೆಗೆ ಬಿಗ್ ಸ್ಕೀನ್ ಮೇಲೆ ತನ್ನ ಪ್ರತಿಭೆ ತೋರುವ ಆಸೆ ಉಂಟಾಗಿದೆ ಎಂದೇ ಹೇಳ ಬಹುದು. ಮೂಲಗಳ ಪ್ರಕಾರ ಸಿಮ್ರನ್ ಮತ್ತೆ ನಟಿಸುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಆಹಾ ಕಲ್ಯಾಣಂ ಚಿತ್ರದಲ್ಲಿ ಆಕೆ ಪ್ರಮುಖ ಪಾತ್ರದಲಿ ಕಾಣಸಿಗುತ್ತಿದ್ದಾರಂತೆ. ಈ ಚಿತ್ರದಲ್ಲಿ ನಟಿಸುವ ಮೂಲಕ ರೀ ಎಂಟ್ರಿ ಆಗುತ್ತಿದ್ದಾರೆ ಈ ಮುದ್ದು ಚೆಲುವೆ. ಹಿಂದಿಯಲ್ಲಿ ಬಿಡುಗಡೆಯಾಗಿ ಯಶಸ್ವಿ ಯಾಗಿದ್ದ ಬ್ಯಾಂಡ್ ಬಾಜಾ ಬಾರಾತ್ ಸಿನಿಮಾ ರೀಮೇಕ್ ಆಹಾ ಕಲ್ಯಾಣಂ ಈ ಚಿತ್ರದ ಮೂಲಕ ಸಿಮ್ರಾನ್ ಮತ್ತೆ ತೆಲುಗು ಪ್ರೇಕ್ಷಕರನ್ನು ಆಕರ್ಷಿಸುತ್ತಾರ ಎನ್ನುವ ನಿರೀಕ್ಷೆ ತೆಲುಗು ಚಿತ್ರರಂಗದವರದ್ದಾಗಿದೆ. ಸೊ ವೇಯ್ಟ್ ಅಂಡ್ ಸೀ .

Share this Story:

Follow Webdunia kannada