Select Your Language

Notifications

webdunia
webdunia
webdunia
webdunia

ಮಮ್ಮುಟ್ಟಿ 'ಶಿಕಾರಿ'ಗೆ ಪ್ರಾಣಿಗಳಿಂದಲೇ ತಡೆ

ಮಮ್ಮುಟ್ಟಿ 'ಶಿಕಾರಿ'ಗೆ ಪ್ರಾಣಿಗಳಿಂದಲೇ ತಡೆ
SUJENDRA
ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಕನ್ನಡದಲ್ಲೂ 'ಶಿಕಾರಿ' ಮಾಡಲು ಹೊರಟಿರುವುದು ನಿಮಗೆ ಗೊತ್ತೇ ಇದೆ. ಅದಕ್ಕೀಗ ಪ್ರಾಣಿಗಳೇ ತಡೆಯಂತೆ. ಅಂದ್ರೆ ಬೇಟೆಯಾಡೋದಿಕ್ಕೆ ಸಾಧ್ಯವಾಗ್ತಿಲ್ವೇ ಅಂತ ಕೇಳಿದ್ರೆ, ನಿಜ. ಥಿಯೇಟರುಗಳ ಬೇಟೆಯಾಡಲು ಹೊರಟಿರುವ 'ಶಿಕಾರಿ'ಗೆ ಪ್ರಾಣಿಗಳ ರಕ್ಷಕರು ಅಡ್ಡ ಬಂದಿದ್ದಾರೆ!

ಅಂದ್ರೆ ವನ್ಯಜೀವಿ ಸಂರಕ್ಷಣಾ ಇಲಾಖೆ. ಈ ಇಲಾಖೆಯಿಂದ ಇನ್ನೂ 'ಶಿಕಾರಿ'ಗೆ ಮುಕ್ತಿ ದೊರೆತಿಲ್ಲ. ಚಿತ್ರದಲ್ಲಿ ಪ್ರಾಣಿಗಳನ್ನು ಬಳಸಿಕೊಂಡಿರುವುದರಿಂದ, ಸೆನ್ಸಾರ್ ಮಾಡುವುದಕ್ಕೂ ಮೊದಲು ವನ್ಯಜೀವಿ ಸಂರಕ್ಷಣಾ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯಬೇಕು. ಅವರಿಂದ ತಕರಾರುಗಳಿದ್ದರೆ ಆ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕುತ್ತದೆ.

ಇದೇ ಕಾರಣದಿಂದ ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವ 'ಶಿಕಾರಿ' ಚಿತ್ರಮಂದಿರಗಳಿಗೆ ಬರುವಾಗ ತಡವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದರೆ ಈ ವಾರ ಚಿತ್ರ ತೆರೆಗೆ ಬರಬೇಕಿತ್ತು. ಒಂದೆಡೆ ಚಿತ್ರಮಂದಿರಗಳ ಸಮಸ್ಯೆಯೂ 'ಶಿಕಾರಿ'ಗಿತ್ತು. ಜತೆಗೆ ಪ್ರಾಣಿಗಳದ್ದು! ಹಾಗಂತಾರೆ ಯುವ ನಿರ್ದೇಶಕ ಅಭಯ ಸಿಂಹ.

ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಬದುಕಿನ ಸುತ್ತ ಸಾಗುವ ಕಥೆಯೇ ಶಿಕಾರಿ. ಇಲ್ಲಿ ಮಮ್ಮುಟ್ಟಿ ದ್ವಿಪಾತ್ರ ಮಾಡಿದ್ದಾರೆ. ಎರಡೂ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆ ಎರಡೂ ಪಾತ್ರಗಳಿಗೆ ಸ್ವತಃ ಮಮ್ಮುಟ್ಟಿಯವರೇ ಕನ್ನಡದಲ್ಲಿ ಡಬ್ ಮಾಡಿರುವುದು ವಿಶೇಷ.

ಇಲ್ಲಿ ಮಮ್ಮುಟ್ಟಿಯವರಿಗೆ ಪೂನಂ ಬಾಜ್ವಾ ನಾಯಕಿ. ಉಳಿದಂತೆ ಇನೋಸೆಂಟ್, ಟಿನಿ ಟೋಮ್, ಸುರೇಶ್ ಕೃಷ್ಣ, ಅಚ್ಯುತ್ತ ಕುಮಾರ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.

ಮಮ್ಮುಟ್ಟಿ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲಿರಬಹುದು, ಆದರೆ ತೆರೆಯಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಅವರು ನಾಯಕರಾಗಿದ್ದ 'ವಿಧೇಯನ್', 'ಚಟ್ಟಾಂಬಿ ನಾಡು' ಮುಂತಾದ ಚಿತ್ರಗಳಲ್ಲಿ ಕನ್ನಡದ ಕೆಲವು ಸಂಭಾಷಣೆಗಳನ್ನು ಇದೇ ಮಮ್ಮುಟ್ಟಿ ಆಡಿದ್ದರು. ಹಾಗಾಗಿ ಕನ್ನಡದ ನಂಟು ಅವರಿಗೆ ಹೊಸತೇನಲ್ಲ.

Share this Story:

Follow Webdunia kannada