Webdunia - Bharat's app for daily news and videos

Install App

ಮಂಗಳೂರು ಮಧು ನಿರ್ದೇಶನದ ಚಿತ್ರಕ್ಕೆ ಭಾಮಾ ನಾಯಕಿ

Webdunia
ಗುರುವಾರ, 1 ಆಗಸ್ಟ್ 2013 (10:12 IST)
PR
ಬರ್ಫಿ ಚಿತ್ರದಲ್ಲಿ ಸಿಖ್ ಹುಡುಗಿಯಾಗಿ ಮುದ್ದಾಗಿ ಅಭಿನಯಿಸಿರುವ ಭಾಮಾ ಇದೀಗ ಚಿಕ್ಕಮಗಳೂರಿನ ಸಮೀಪ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರವೊಂದರ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈವರೆಗೆ ತಾನು ಮಾಡಿರದ ರೀತಿಯ ಪಾತ್ರವನ್ನು ಪೋಷಿಸುತ್ತಿರುವುದಕ್ಕೆ ಅವರಿಗೆ ಅತೀವ ಸಂತಸವಾಗಿದೆಯಂತೆ.

ಮಂಗಳೂರು ಮಧು ಚಿತ್ರದ ನಿರ್ದೇಶಕರು. ಇಂದಿಗೂ ಜೀವಂತವಾಗಿರುವ ಆ ಪ್ರೇಮಿಗಳ ಕಥೆಯನ್ನು ತೆರೆಯ ಮೇಲೆ ತರುವುದಾಗಿ ಹೇಳಿದ್ದ ನಿರ್ದೇಶಕರು ನಾಯಕಿಯ ಹೆಸರನ್ನು ಗೌಪ್ಯವಾಗಿಟ್ಟಿದ್ದರು. ಇದೀಗ ಭಾಮಾ ಆ ಪಾತ್ರಕ್ಕೆ ಆಯ್ಕೆಯಾಗಿರುವುದು ಬಹುತೇಕ ಖಚಿತವಾಗಿದೆ. ಪಾವನಿ ಪಾತ್ರವನ್ನು ಭಾಮಾ ಮಾಡಲು ಒಪ್ಪಿಕೊಂಡಿದ್ದನ್ನು ನಿರ್ದೇಶಕರು ಖಚಿತಪಡಿಸಿದ್ದಾರೆ. ಚಿತ್ರದಲ್ಲಿ ನಾಯಕಿಗೆ ನಾಯಕನಷ್ಟೇ ಮುಖ್ಯವಾದ ಪ್ರಾಧಾನ್ಯತೆ ಇದೆಯಂತೆ. ಆತನಷ್ಟೇ ಆಕೆಯೂ ಸಮರ್ಥಳು. ಕತೆ ಕೇಳಿ ಸಿಕ್ಕಾಪಟ್ಟೆ ಇಷ್ಟ ಪಟ್ಟ ಭಾಮಾ ತಕ್ಷಣವೇ ಪಾತ್ರ ಮಾಡಲು ಒಪ್ಪಿಗೆ ಸೂಚಿಸಿದರು ಎಂದಿದ್ದಾರೆ ನಿರ್ದೇಶಕರು.

2007 ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ನೈಜ ಕತೆ ಇದು. ವ್ಯವಸ್ಥೆಗೆ ಅಂಜಿಕೊಂಡು ಇಂದಿಗೂ ಅವರು ದೂರವಾಗಿದ್ದಾರೆ. ಜೊತೆಯಾಗಬೇಕೆಂಬ ಅವರ ಕನಸಿನ್ನೂ ಕೈಗೂಡಿಲ್ಲ. ದಿಗಂತ್ ಚಿತ್ರದ ನಾಯಕ. ದಿವ್ಯ ಪ್ರಸಾದ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಮುಂದಿನ ತಿಂಗಳು ಮುಹೂರ್ತ. ಚಿಕ್ಕಮಗಳೂರಿನಲ್ಲೇ ಚಿತ್ರೀಕರಣ ನಡೆಸುವ ಇರಾದೆ ನಿರ್ದೇಶಕರದ್ದು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments