Select Your Language

Notifications

webdunia
webdunia
webdunia
webdunia

ಮಂಗಳೂರು ಮಧು ನಿರ್ದೇಶನದ ಚಿತ್ರಕ್ಕೆ ಭಾಮಾ ನಾಯಕಿ

ಮಂಗಳೂರು ಮಧು ನಿರ್ದೇಶನದ ಚಿತ್ರಕ್ಕೆ ಭಾಮಾ ನಾಯಕಿ
ಬೆಂಗಳೂರು , ಗುರುವಾರ, 1 ಆಗಸ್ಟ್ 2013 (10:12 IST)
PR
ಬರ್ಫಿ ಚಿತ್ರದಲ್ಲಿ ಸಿಖ್ ಹುಡುಗಿಯಾಗಿ ಮುದ್ದಾಗಿ ಅಭಿನಯಿಸಿರುವ ಭಾಮಾ ಇದೀಗ ಚಿಕ್ಕಮಗಳೂರಿನ ಸಮೀಪ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರವೊಂದರ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈವರೆಗೆ ತಾನು ಮಾಡಿರದ ರೀತಿಯ ಪಾತ್ರವನ್ನು ಪೋಷಿಸುತ್ತಿರುವುದಕ್ಕೆ ಅವರಿಗೆ ಅತೀವ ಸಂತಸವಾಗಿದೆಯಂತೆ.

ಮಂಗಳೂರು ಮಧು ಚಿತ್ರದ ನಿರ್ದೇಶಕರು. ಇಂದಿಗೂ ಜೀವಂತವಾಗಿರುವ ಆ ಪ್ರೇಮಿಗಳ ಕಥೆಯನ್ನು ತೆರೆಯ ಮೇಲೆ ತರುವುದಾಗಿ ಹೇಳಿದ್ದ ನಿರ್ದೇಶಕರು ನಾಯಕಿಯ ಹೆಸರನ್ನು ಗೌಪ್ಯವಾಗಿಟ್ಟಿದ್ದರು. ಇದೀಗ ಭಾಮಾ ಆ ಪಾತ್ರಕ್ಕೆ ಆಯ್ಕೆಯಾಗಿರುವುದು ಬಹುತೇಕ ಖಚಿತವಾಗಿದೆ. ಪಾವನಿ ಪಾತ್ರವನ್ನು ಭಾಮಾ ಮಾಡಲು ಒಪ್ಪಿಕೊಂಡಿದ್ದನ್ನು ನಿರ್ದೇಶಕರು ಖಚಿತಪಡಿಸಿದ್ದಾರೆ. ಚಿತ್ರದಲ್ಲಿ ನಾಯಕಿಗೆ ನಾಯಕನಷ್ಟೇ ಮುಖ್ಯವಾದ ಪ್ರಾಧಾನ್ಯತೆ ಇದೆಯಂತೆ. ಆತನಷ್ಟೇ ಆಕೆಯೂ ಸಮರ್ಥಳು. ಕತೆ ಕೇಳಿ ಸಿಕ್ಕಾಪಟ್ಟೆ ಇಷ್ಟ ಪಟ್ಟ ಭಾಮಾ ತಕ್ಷಣವೇ ಪಾತ್ರ ಮಾಡಲು ಒಪ್ಪಿಗೆ ಸೂಚಿಸಿದರು ಎಂದಿದ್ದಾರೆ ನಿರ್ದೇಶಕರು.

2007ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ನೈಜ ಕತೆ ಇದು. ವ್ಯವಸ್ಥೆಗೆ ಅಂಜಿಕೊಂಡು ಇಂದಿಗೂ ಅವರು ದೂರವಾಗಿದ್ದಾರೆ. ಜೊತೆಯಾಗಬೇಕೆಂಬ ಅವರ ಕನಸಿನ್ನೂ ಕೈಗೂಡಿಲ್ಲ. ದಿಗಂತ್ ಚಿತ್ರದ ನಾಯಕ. ದಿವ್ಯ ಪ್ರಸಾದ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಮುಂದಿನ ತಿಂಗಳು ಮುಹೂರ್ತ. ಚಿಕ್ಕಮಗಳೂರಿನಲ್ಲೇ ಚಿತ್ರೀಕರಣ ನಡೆಸುವ ಇರಾದೆ ನಿರ್ದೇಶಕರದ್ದು.

Share this Story:

Follow Webdunia kannada