Select Your Language

Notifications

webdunia
webdunia
webdunia
webdunia

ಭಾರತಕ್ಕೆ ಬಾ ವೀಣಾ ಮಲಿಕ್ ನಿನಗೆ ಚಪ್ಪಲಿ ಸೇವೆ ಮಾಡ್ತೀವಿ ಅಂದ್ರು ವೀಣಾ ಅಭಿಮಾನಿಗಳು..ಯಾಕೆ ಗೊತ್ತೇ ?

ಭಾರತಕ್ಕೆ ಬಾ ವೀಣಾ ಮಲಿಕ್ ನಿನಗೆ ಚಪ್ಪಲಿ ಸೇವೆ ಮಾಡ್ತೀವಿ ಅಂದ್ರು ವೀಣಾ ಅಭಿಮಾನಿಗಳು..ಯಾಕೆ ಗೊತ್ತೇ ?
, ಶನಿವಾರ, 5 ಏಪ್ರಿಲ್ 2014 (15:49 IST)
ಬಾ ಭಾರತಕ್ಕೆ ನಿನ್ನನ್ನು ರಸ್ತೇಲಿ ನಿಲ್ಲಿಸಿ ಚಪ್ಪಲೀಲಿ ಹೊಡಿತೀವಿ ಎನ್ನುವ ಕೂಗು ಹಾಕಿದ್ದಾರೆ ನಟಿ ವೀಣಾ ಮಲೀಕ್ ಗೆ ಭಾರತೀಯ ಚಿತ್ರ ಪ್ರೇಮಿಗಳು. ಭಾರತದಲ್ಲಿ ತನಗೆ ಬದುಕು ಕಂಡುಕೊಂಡ ಬಿಚ್ಚು ಮೈ ಪಾಕಿಸ್ತಾನಿ ನಟಿ ವೀಣಾಮಲಿಕ್ ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಭಾರತವು ನೀಚ ದೇಶ ಎನ್ನುವ ಅರ್ಥ ಬರುವಂತೆ ಟ್ವೀಟ್ ಮಾಡಿದ್ದಳಂತೆ..

ಆಕೆಯನ್ನು ಬೆಳೆಸಿದ ಭಾರತೀಯ ಅಭಿಮಾನಿಗಳಿಗೆ ಆಕೆಯ ಈ ಮಾತು ಕೆರಳಿ ಕೆಂಡ ಮಾಡಿದೆ. ಅವರು ಓದಿ ಸುಮ್ಮನೆ ಇರದೇ ಬಾ ಬಾಲಿವುಡ್ ಗೆ ಮಾಡ್ತಿವಿ ನಿನಗೆ ಎಂದು ಹೇಳಿದ್ದಾರೆ.

ಹೇಳಿ ಕೇಳಿ ಪಾಕಿಸ್ತಾನದವಳು, ಭಾರತದಲ್ಲಿ ಇರುವಷ್ಟು ಕಾಲ ಆಕೆ ಭಾರತೀಯ ಹುಡುಗರ ಜೊತೆ ಆಟ ಆಡಿದವಳು ಅಂತಹ ಮನಸ್ಥಿತಿಯವಳಿಗೆ ಭಾರತದ ಬಗ್ಗೆ ಅಭಿಮಾನ ಇರಲು ಸಾಧ್ಯವೇ ಎನ್ನುವ ಮಾತು ಅಪಾರ ಸಂಖ್ಯೆಯಿಂದ ಕೇಳಿ ಬಂದಿದೆ.

ನಾನು ಹೇಳಿದ್ದು ಹಾಗಲ್ಲ ಅದರ ಅರ್ಥ ಬೇರೆ ಎಂದು ಟ್ವೀಟ್ಟರ್ ನಲ್ಲಿಎಷ್ಟು ಗೊಣಗಿದರು ಸಹ ಆಕೆಯನ್ನು ಕ್ಷಮಿಸಲಿಲ್ಲ ಭಾರತೀಯರು. ಆಕೆ ಪಾಕಿಸ್ತಾನಿ ಆಗಿದ್ದಕ್ಕೆ ಭಾರತದ ಬಗ್ಗೆ ಹಗುರವಾಗಿ ಮಾತಾಡಿದ್ದಾಳೆ ಎನ್ನುವುದು ಎಲ್ಲರ ಅಭಿಮತ.

ಸದ್ಯಕ್ಕೆ ವೀಣ ಮಲಿಕ್ ಗೆ ವಿದೇಶದಲ್ಲಿ ಶೂಟಿಂಗ್ ಇದೆ. ಅದಾದ ಬಳಿಕ ಉಳಿದ ಸನ್ನಿವೇಶ ಶೂಟ್ ಮಾಡಲು ಭಾರತಕ್ಕೆ ಬರಬೇಕು.. ಆಗ ಪರಿಸ್ಥಿತಿ ಏನಾಗುತ್ತೋ.. !!

Share this Story:

Follow Webdunia kannada