Webdunia - Bharat's app for daily news and videos

Install App

ಭಾಮಾ ಇಲ್ಲದ ಭಟ್ರ 'ಡ್ರಾಮಾ'ಕ್ಕೆ ರಾಧಿಕಾ ಪಂಡಿತ್

Webdunia
PR
ರಾಧಿಕಾ ಪಂಡಿತ್ ಆಸೆ ಕೊನೆಗೂ ಈಡೇರಿದೆ. ಕನ್ನಡದ ಟಾಪ್ ನಿರ್ದೇಶಕ ಯೋಗರಾಜ್ ಭಟ್ ಚಿತ್ರದಲ್ಲಿ ನಟಿಸಬೇಕೆಂದು ಯಾವತ್ತೋ ಅಂದುಕೊಂಡಿದ್ದರು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈಗ ಭಾಮಾ ಕಳಚಿಕೊಂಡ 'ಡ್ರಾಮಾ'ದಲ್ಲಿ ಪಾರ್ಟು ಮಾಡುವ ಅವಕಾಶ ರಾಧಿಕಾ ಪಂಡಿತ್‌ಗೆ ಸಿಕ್ಕಿದೆ!

' ಬ್ರೇಕಿಂಗ್ ನ್ಯೂಸ್' ಚಿತ್ರೀಕರಣದಲ್ಲಿರುವ ರಾಧಿಕಾಗೆ ಇದ್ದಕ್ಕಿದ್ದಂತೆ ಭಟ್ರು ಫೋನ್ ಮಾಡಿ, ನನ್ನ 'ಡ್ರಾಮಾ'ದಲ್ಲಿ ನಟಿಸ್ತಿಯೇನಮ್ಮ ಅಂತ ಕೇಳಿದ್ರಂತೆ. ಒಂಚೂರು ಯೋಚನೆ ಮಾಡಿದ ರಾಧಿಕಾ, ಭಟ್ರಿಗೆ ಬೇಕಾದ ಡೇಟ್ಸುಗಳನ್ನೆಲ್ಲ ಲೆಕ್ಕ ಹಾಕಿ ಕೊನೆಗೆ ಓಕೆ ಅಂದ್ರಂತೆ. ಇದರೊಂದಿಗೆ ಭಟ್ರ ಚಿತ್ರದಲ್ಲಿ ನಟಿಸುವ ಆಸೆ ಮಾತ್ರವಲ್ಲ, ತನ್ನ ಮೊದಲ ಹಿಟ್ ಚಿತ್ರದ ಜೋಡಿ ಯಶ್ ಜತೆ ಮಿಂಚುವ ಅವಕಾಶವೂ ಸಿಕ್ಕಿದೆ. ಕನ್ನಡ ಪ್ರೇಕ್ಷಕರಿಗೆ ಇದೇ ಬೋನಸ್ ಅಂತಾರೆ ರಾಧಿಕಾ!

ಭಾಮಾ ಡೇಟ್ಸ್, ಕಥೆ ಸಮಸ್ಯೆ...
ಹೀಗಂತಿರೋದು ಯೋಗರಾಜ್ ಭಟ್ರು. ಭಾಮಾ ಎರಡು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಮ್ಮ ಯೋಜನೆಯಂತೆ ಚಿತ್ರೀಕರಣ ಕೂಡ ಆರಂಭವಾಗುತ್ತಿಲ್ಲ. ಬದಲಾದ ದಿನಾಂಕಗಳಿಗೆ ಅವರಿಗೆ ಪುರುಸೊತ್ತಿಲ್ಲ.

ಜತೆಗೆ ನನ್ನ ಚಿತ್ರದ ನಾಯಕಿ ಪಾತ್ರಕ್ಕೆ ಇನ್ನೂ ಸ್ವಲ್ಪ ಪ್ರಬುದ್ಧ ಹುಡುಗಿ ಬೇಕು ಅನ್ನಿಸಿತು. ಹಾಗಾಗಿ ಭಾಮಾ ಜಾಗಕ್ಕೆ ರಾಧಿಕಾ ಪಂಡಿತ್‌ರನ್ನು ಕರೆ ತಂದಿದ್ದೇನೆ.

ಗಟ್ಟಿಗಿತ್ತಿಯಂತೆ ರಾಧಿಕಾ...
ರಾಧಿಕಾ ಪಂಡಿತ್ ಯಾವ ಪಾತ್ರವನ್ನಾದರೂ ಮಾಡುವ ಗಟ್ಟಿಗಿತ್ತಿ ಅನ್ನೋದು ಎಲ್ಲರಿಗೂ ಗೊತ್ತು. ಆದರೂ 'ಡ್ರಾಮಾ' ಪಾತ್ರ ಪೂರ್ತಿಯಾಗಿ ಡಿಫರೆಂಟ್ ಅಂತೆ.

ನನ್ನದು ಇಲ್ಲಿ ತುಂಬಾ ಡಿಫರೆಂಟ್ ಪಾತ್ರ. ಹುಡುಗರ ಜತೆ ಕಬಡ್ಡಿ ಆಡಲೂ ಸೈ ಅನ್ನೋ ಪಾತ್ರ. ಆದರೆ ಗಂಡುಬೀರಿಯಲ್ಲ. ಯಾವುದಕ್ಕೂ ಜಗ್ಗದ ಪಾತ್ರ. ಜತೆಗೆ ಸಿಕ್ಕಾಪಟ್ಟೆ ಫ್ಲರ್ಟಿಂಗ್ ಕೂಡ ಮಾಡುತ್ತೇನೆ ಎಂದು ಸ್ವತಃ ರಾಧಿಕಾ ತನ್ನ ಪಾತ್ರದ ಬಗ್ಗೆ ಹೇಳ್ತಾರೆ.

ಯಶ್ ಪ್ರೀತಿ ಕಾಮಿಯಂತೆ...
' ಡ್ರಾಮಾ'ದಲ್ಲಿ ಇನ್ನೊಬ್ಬ ನಾಯಕಿ ಪ್ರಜ್ಞಾ ಇರೋದು ಗೊತ್ತೇ ಇದೆ. ಆದರೆ ಆಕೆಗಿಲ್ಲಿ ನಾಯಕಿ ಪಾತ್ರವಿಲ್ಲ. ಪ್ರಮುಖ ಪಾತ್ರ ಅಂತಷ್ಟೇ ಹೇಳಬಹುದು. ಪ್ರಜ್ಞಾ ಇಲ್ಲಿ ಮೂಕಿ ಪಾತ್ರ ಮಾಡಲಿದ್ದಾರಂತೆ.

ಇದುವರೆಗೆ ಲವರ್ ಬಾಯ್ ಪಾತ್ರ ಮಾಡುತ್ತಾ ಬಂದ ಯಶ್ ಇಲ್ಲಿ ಪ್ರೀತಿ-ಕಾಮಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ನೀನಾಸಂ ಸತೀಶ್‌ರದ್ದು ಅತಿ ಕಾಮಿ ಪಾತ್ರವಂತೆ.

ಅದೇನೇ ಇರಲಿ, ಶಶಾಂಕ್ 'ಮೊಗ್ಗಿನ ಮನಸು'ವಿನಲ್ಲಿ ಯುವ ಮನಸ್ಸುಗಳನ್ನು ಕೆದಕಿದ್ದ ಜೋಡಿಯನ್ನು ಭಟ್ರು ತನ್ನ ಡ್ರಾಮಾದಲ್ಲಿ ಹೇಗೆ ತೋರಿಸುತ್ತಾರೆ ಅನ್ನೋದು ಖಂಡಿತಾ ಇಂಟರೆಸ್ಟಿಂಗ್ ಆಗಿರುತ್ತದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?