Webdunia - Bharat's app for daily news and videos

Install App

ಭಾಗ-II: ಮತ್ತೆ ಬರಲಿದ್ದಾನೆ ಕಿಚ್ಚ ಬಚ್ಚನ್, 2015ರಲ್ಲಿ..!

Webdunia
ಶುಕ್ರವಾರ, 3 ಮೇ 2013 (16:01 IST)
PR
ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನಮ್ಮ ಸಿನಿಮಾ ಸೂಪರ್ ಹಿಟ್ ಆಗಿದೆ. ಹಾಗಾಗಿ ಭಾಗ-2 ಮಾಡುತ್ತಿದ್ದೇವೆ ಎಂದು ಹೇಳುವವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಆದರೆ ಅವುಗಳಲ್ಲಿ ಯಶಸ್ವಿಯಾಗಿ ಎರಡನೇ ಭಾಗ ಪೂರ್ತಿಗೊಳಿಸುವವರು ತೀರಾ ಅಪರೂಪ. ಇತ್ತೀಚೆಗಂತೂ ಎರಡನೇ ಭಾಗ ಮಾಡಿದ ಉದಾಹರಣೆಯೇ ಕಾಣಸಿಗುತ್ತಿಲ್ಲ.

ಆದರೆ ಆ ಸಾಲಿಗೆ 'ಬಚ್ಚನ್-2' ಸೇರುವ ಸಾಧ್ಯತೆ ಕಡಿಮೆ. ಅಷ್ಟಕ್ಕೂ ಶಶಾಂಕ್ ತಕ್ಷಣ ಮುಂದುವರಿದ ಭಾಗ ಮಾಡುತ್ತಿದ್ದೇವೆ ಎಂದು ಹೇಳುತ್ತಿಲ್ಲ. 2015ರ ಹೊತ್ತಿಗಷ್ಟೇ ಮುಂದುವರಿದ ಭಾಗ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಕೂಡ ಸಹಮತ ವ್ಯಕ್ತಪಡಿಸಿದ್ದಾರಂತೆ.

ಚಿತ್ರದ ಹೆಸರು 'ಬಚ್ಚನ್-2' ಎಂದಿದ್ದರೆ, ಟ್ಯಾಗ್‌ಲೈನ್ 'ಆಂಗ್ರಿ ಯಂಗ್ ಮ್ಯಾನ್ ರಿಟರ್ನ್ಸ್' ಎಂದಾಗಿರುತ್ತದೆ. ಇದರಲ್ಲಿ ಮೊದಲ ಭಾಗದ ಕಥೆ ಮುಂದುವರಿಯುವುದಿಲ್ಲ. ನಾಯಕ ಪಾತ್ರ ಹೊರತುಪಡಿಸಿ ಪೂರ್ತಿ ತಾರಾಗಣ, ಕಥೆ ಹೊಸತು ಎಂದು ನಿರ್ದೇಶಕ ಶಶಾಂಕ್ ವಿವರಣೆ ನೀಡಿದ್ದಾರೆ.

ಸದ್ಯ ಕಿಚ್ಚ ಸುದೀಪ್ ಯೋಗರಾಜ್ ಭಟ್‌ರ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಅದಾದ ನಂತರ ಇನ್ನೊಂದು ಚಿತ್ರವಿದೆ. ಇನ್ನೊಂದು ವರ್ಷ ಸುದೀಪ್ ಬ್ಯುಸಿಯಾಗಿರುತ್ತಾರೆ. 2014ರಲ್ಲಿ ಸ್ವತಃ ಅವರೇ ನಿರ್ದೇಶನದತ್ತ ಮರಳುವ ಯೋಚನೆ ಮಾಡುತ್ತಿದ್ದಾರೆ. ನಂತರವಷ್ಟೇ ನಮ್ಮ ಚಿತ್ರ ಶುರುವಾಗಲಿದೆ. ಆ ಹೊತ್ತಿಗೆ ನಾನು ಬೇರೊಂದು ಚಿತ್ರ ಮುಗಿಸುತ್ತೇನೆ ಎಂದು ಹೇಳಿದ್ದಾರೆ.

ಅಂದ ಹಾಗೆ, ಕನ್ನಡದಲ್ಲಿ ಮೊದಲ ವಾರದಲ್ಲೇ 8 ಕೋಟಿ ಗಳಿಸುವ ಮೂಲಕ ಸೂಪರ್ ಹಿಟ್ ಹಾದಿಯಲ್ಲಿರುವ 'ಬಚ್ಚನ್' ಈಗ 25 ದಿನಗಳನ್ನು ಪೂರೈಸಿದೆ. ಆರಂಭದಲ್ಲಿ ಹೇಳಿದಂತೆ ಹಿಂದಿ, ತಮಿಳು, ತೆಲುಗು ಸೇರಿದಂತೆ ಪರಭಾಷೆಗಳಿಗೆ ಚಿತ್ರವನ್ನು ಡಬ್ಬಿಂಗ್ ಮಾಡುವ ಯೋಚನೆ ಕೈ ಬಿಡಲಾಗಿದೆ. ಕಾರಣ, ರಿಮೇಕ್ ಹಕ್ಕುಗಳಿಗೆ ಹೆಚ್ಚುತ್ತಿರುವ ಬೇಡಿಕೆ. ಈ ಸಂಬಂಧ ಶೀಘ್ರದಲ್ಲೇ ನಿರ್ಮಾಪಕ ಉದಯ್ ಮೆಹ್ತಾ ಅಧಿಕೃತ ಮಾಹಿತಿ ನೀಡಲಿದ್ದಾರಂತೆ.

ಈ ಹಿಂದೆ ಉಪೇಂದ್ರ, ದಂಡುಪಾಳ್ಯ, ಪರಾರಿ, ಮೈನಾ, ಆ ದಿನಗಳು, ಕೋಟಿಗೊಬ್ಬ ಮುಂತಾದ ಚಿತ್ರಗಳ ಮುಂದುವರಿದ ಭಾಗ ಬರುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಇದುವರೆಗೆ ಯಾವುದೂ ನಿಜವಾಗಿಲ್ಲ. ನಿಜವಾಗಿರುವ ಸಾಲಿನಲ್ಲಿರುವ ಇತ್ತೀಚಿನ ಚಿತ್ರಗಳು ಜೋಗಿ ಮತ್ತು ಆಪ್ತಮಿತ್ರ ಮಾತ್ರ. ಈ ಎರಡೂ ಚಿತ್ರಗಳ ಮುಂದುವರಿದ ಭಾಗ ಜೋಗಯ್ಯ ಮತ್ತು ಆಪ್ತರಕ್ಷಕ ಹೆಸರಿನಲ್ಲಿ ಬಂದಿದ್ದವು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments