Select Your Language

Notifications

webdunia
webdunia
webdunia
webdunia

ಬೆಳ್ಳಿತೆರೆಗೆ ಮಾರ್ಗದರ್ಶನ ಮಾಡುವ ಬೆಳ್ಳಿಚುಕ್ಕಿ

ಬೆಳ್ಳಿತೆರೆಗೆ ಮಾರ್ಗದರ್ಶನ ಮಾಡುವ ಬೆಳ್ಳಿಚುಕ್ಕಿ
ಕಪ್ಪು ಬಿಳುಪು ಚಿತ್ರಗಳ ಕಾಲದಲ್ಲೆಲ್ಲಾ ಚಲನಚಿತ್ರಗಳಲ್ಲಿ ನಟಿಸಬೇಕೆಂದಿದ್ದರೆ ಆತನಿಗೆ ರಂಗಭೂಮಿಯ ಅನುಭವವಿದ್ದರೆ ಒಳ್ಳೆಯದು ಎನ್ನಲಾಗುತ್ತಿತ್ತು. ರಂಗಭೂಮಿಯ ಕಲಾವಿದರಿಗೆ ಲೈವ್ ಆಡಿಯನ್ಸ್ ಮುಂದೆ ಅಭಿನಯಿಸಿರುವ ಅನುಭವ ಇರುತ್ತದೆಯಾದ್ದರಿಂದ ಕ್ಯಾಮೆರಾ ಎದುರಿಸುವುದು ಅವರಿಗೆ ಕಷ್ಟವಾಗುವುದಿಲ್ಲ ಎಂಬುದು ಒಂದು ವರ್ಗದವರ ವಾದವಾಗಿತ್ತು.

ಕಾಲಾ ನಂತರದಲ್ಲಿ ಅಭಿನಯಕ್ಕೂ ತರಬೇತಿಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡವು. ಜೊತೆಗೆ, ಒಂದಷ್ಟು ಹೈಟು-ವೆಯ್ಟು ಇದ್ದು, ಚಾಕೊಲೇಟ್ ಹೀರೊನಂತಿದ್ದರೆ ಸಾಕು, ಅಭಿನಯವನ್ನು ಹೇಗೋ ಸರಿದೂಗಿಸಬಹುದು ಎಂಬ ಅಭಿಪ್ರಾಯಗಳೂ ಕೇಳಿಬಂದವು. ಈ ನಡುವೆ ಕಲಾವಿದರಿಗೆ ಒಂದಷ್ಟು ತಾಂತ್ರಿಕ ಪರಿಜ್ಞಾನಗಳು ಹಾಗೂ ಚಲನಚಿತ್ರದ ಒಂದಷ್ಟು ವ್ಯಾಕರಣ ಗೊತ್ತಿದ್ದರೆ ಒಳ್ಳೆಯದು ಎಂಬ ಉದ್ದೇಶದಿಂದ ಆದರ್ಶ ಫಿಲ್ಮ್ ಇನ್ಸ್‌ಟಿಟ್ಯೂಟ್ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಇದಕ್ಕೂ ಮುಂಚೆ ಪುಣೆಯಲ್ಲಿನ ಹಾಗೂ ಮದ್ರಾಸಿನ ಫಿಲ್ಮ್ ಇನ್ಸ್‌ಟಿಟ್ಯೂಟ್‌ಗಳು ಖ್ಯಾತಿಯ ಉತ್ತುಂಗಕ್ಕೇರಿದ್ದವು.

ಇವೆಲ್ಲಾ ವಿಷಯಗಳು ಈಗೇಕೆ ಬಂದವೆಂದರೆ, ಬೆಳ್ಳಿಚುಕ್ಕಿ ಫಿಲ್ಮ್ ಅಕಾಡೆಮಿ ಎಂಬ ಇದೇ ಸ್ವರೂಪದ ಕಲಾಶಾಲೆಯೊಂದು ಮೈದಳೆದಿದೆ. ಅಭಿನಯ, ನಿರ್ದೇಶನ, ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ನೃತ್ಯಗಳು, ಸಂಗೀತ, ಛಾಯಾಗ್ರಹಣ, ಮಾಡೆಲಿಂಗ್, ಕಿರುಚಿತ್ರ ತಯಾರಿಕೆ ಹೀಗೆ ಹಲವು ಹನ್ನೊಂದು ಕ್ಷೇತ್ರಗಳಲ್ಲಿ ಇಲ್ಲಿ ತರಬೇತಿ ಲಭ್ಯ.

ಕಳೆದ ಒಂದೂವರೆ ದಶಕಗಳಿಂದಲೂ ಇವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೆಳ್ಳಿಚುಕ್ಕಿ ಸಂಸ್ಥೆ ಸುಮಾರು 50ಕ್ಕೂ ಹೆಚ್ಚಿನ ಫ್ಯಾಷನ್ ಷೋ ಹಾಗೂ ಸೌಂದರ್ಯ ಸ್ಪರ್ಧೆಗಳನ್ನು ನಡೆಸಿದ ಅನುಭವ ಹೊಂದಿದೆ. ಇಲ್ಲಿ ತಯಾರಾದ ಹಲವು ಹನ್ನೊಂದು ಪ್ರತಿಭೆಗಳು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಈಗಾಗಲೇ ನೆಲೆ ಕಂಡುಕೊಂಡಿದ್ದಾರೆ.

ಬೆಂಗಳೂರಿನ ವಿಜಯನಗರದ ಚಂದ್ರಾ ಲೇಓಟ್‌ನಲ್ಲಿ ತನ್ನ ನೆಲೆಯನ್ನು ಕಂಡುಕೊಂಡಿರುವ ಬೆಳ್ಳಿಚುಕ್ಕಿ ಸಂಸ್ಥೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಇರಾದೆಯನ್ನು ಹೊಂದಿದೆ.

Share this Story:

Follow Webdunia kannada