Select Your Language

Notifications

webdunia
webdunia
webdunia
webdunia

ಬೆಳ್ಳಿತೆರೆಗೆ ದಾಂಗುಡಿಯಿಡುತ್ತಿರುವ ಮಡಿಕೇರಿ ಬೆಡಗಿಯರು

ಬೆಳ್ಳಿತೆರೆಗೆ ದಾಂಗುಡಿಯಿಡುತ್ತಿರುವ ಮಡಿಕೇರಿ ಬೆಡಗಿಯರು
EVENT
ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆಂದರೆ ಅಂಥವರನ್ನು 'ಏನೋ ಒಂಥರಾ' ನೋಡಲಾಗುತ್ತಿತ್ತು. ಇದಕ್ಕೆ ಸರಿಯಾಗಿ, 'ಕನ್ನಡದಲ್ಲಿ ನಾಯಕಿಯರೇ ಇಲ್ಲ; ಆದ್ದರಿಂದ ಪರಭಾಷಾ ನಾಯಕಿಯರನ್ನು ಕರೆತರುತ್ತಿದ್ದೇವೆ' ಎಂಬಂಥ ಮಾತುಗಳನ್ನು ನಿರ್ಮಾಪಕರು ಆಡುತ್ತಿದ್ದರು. ಆದರೀಗ ಜನರ ದೃಷ್ಟಿಕೋನವೂ ಬದಲಾಗಿದೆ, ಕನ್ನಡದ ಹುಡುಗಿಯರೂ ಮೈಚಳಿ ಬಿಟ್ಟು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹೀಗೆ ಕಾಲಿಡುತ್ತಿರುವವರಲ್ಲಿ ಮಡಿಕೇರಿಯ ಬೆಡಗಿಯರು ಸಿಂಹಪಾಲನ್ನು ಪಡೆಯುತ್ತಿದ್ದಾರೆ ಎಂಬುದನ್ನು ನಿಮ್ಮ ಗಮನಕ್ಕೆ ತರಲಷ್ಟೇ ಈ ಬರಹ. ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ಶಿವರಾಜ್‌ ಕುಮಾರ್ ಅಭಿನಯದ 'ಸವ್ಯಸಾಚಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಪ್ರೇಮಾ ಕೊಡಗಿನ ಬೆಡಗಿಯೇ. ನಂತರ ಅವರ ಜೊತೆಯಲ್ಲಿ 'ಓಂ', 'ನಮ್ಮೂರ ಮಂದಾರ ಹೂವೇ' ಚಿತ್ರಗಳಲ್ಲಿ ಮಿಂಚಿದ ಈಕೆ ಚಿತ್ರರಂಗದಲ್ಲೊಂದು ಭದ್ರ ಸ್ಥಾನವನ್ನು ಮತ್ತು ಹಣ-ಹೆಸರನ್ನು ಗಳಿಸಿದರು ಎಂಬುದು ನಿಮಗೆಲ್ಲಾ ಗೊತ್ತಿರುವ ಸಂಗತಿ.

ಇದೇ ರೀತಿಯಲ್ಲಿ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರದಲ್ಲಿ ಗಮನ ಸೆಳೆದ ನಿಧಿ ಸುಬ್ಬಯ್ಯ ನಂತರ 'ಪಂಚರಂಗಿ', 'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ಚಿತ್ರಗಳ ಮೂಲಕ ಉದ್ಯಮದವರ ಹಾಟ್‌ ಫೇವರೇಟ್‌ ಎನಿಸಿಕೊಂಡರೆ, 'ರಾಮ ಶಾಮ ಭಾಮ', 'ಸತ್ಯವಾನ್‌ ಸಾವಿತ್ರಿ', 'ಬಿಂಬ' ಮೊದಲಾದ ಚಿತ್ರಗಳಲ್ಲಿ ಡೈಸಿ ಬೋಪಣ್ಣ ಮಿಂಚಿದರು.

ಕಿರುತೆರೆಯಲ್ಲಿ ಖ್ಯಾತಿಯನ್ನು ಗಳಿಸಿದ್ದ ಝಾನ್ಸಿ ಸುಬ್ಬಯ್ಯ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು ಮತ್ತು ಐಟಂ ಸಾಂಗ್‌ಗಳಲ್ಲೂ ಕಾಣಿಸಿಕೊಂಡರು. 'ತಮಸ್ಸು', 'ಜಾಕಿ', 'ಮುರಳಿ ಮೀಟ್ಸ್‌ ಮೀರಾ' ಚಿತ್ರಗಳಲ್ಲಿ ಗಮನ ಸೆಳೆದ ಹರ್ಷಿಕಾ ಪೂಣಚ್ಚ ಈಗ ಕವಿತಾ ಲಂಕೇಶರ 'ಕ್ರೇಜಿಲೋಕ' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಓದುವಾಗಲೇ ಚಿತ್ರರಂಗದ ಸೆಳೆತಕ್ಕೆ ಒಳಗಾದ ದಿಶಾ ಪೂವಯ್ಯ, ಪುನೀತ್‌ ರಾಜ್‌ಕುಮಾರ್ ಅಭಿನಯದ 'ಹುಡುಗರು' ಚಿತ್ರದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಕಾಣಿಸಿಕೊಂಡರು. ಅದರ ಹಿಂದೆಯೇ 'ಪೊಲೀಸ್‌ ಸ್ಟೋರಿ-3' ಮತ್ತು 'ರಾಣಾ ಪ್ರತಾಪ್‌' ಚಿತ್ರಗಳಲ್ಲಿ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಈ ಎರಡೂ ಚಿತ್ರಗಳಲ್ಲಿ ಥ್ರಿಲ್ಲರ್ ಮಂಜು ಇದ್ದರು ಎಂಬುದಿಲ್ಲಿ ಗಮನಾರ್ಹ.

ಒಟ್ಟಿನಲ್ಲಿ ಕೊಡಗಿನ ಬೆಡಗಿಯರಿಗೆ ಚಂದನವನ ಅದೃಷ್ಟವನ್ನು ಹೊತ್ತು ತರುವಂತಿದೆ, ಅಲ್ಲವೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada