Webdunia - Bharat's app for daily news and videos

Install App

ಬಿಕಿನಿ ಅಂದ್ರೇನು ಗೊತ್ತೇನ್ರೀ ನಿಮ್ಗೆ?; ರಾಗಿಣಿ ರೋಪ್

Webdunia
SUJENDRA
ಮಾಧ್ಯಮಗಳ ಬಗ್ಗೆ ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ ಮುನಿಸಿಕೊಂಡಿದ್ದಾರೆ. ಅವರು 'ಆರಕ್ಷಕ' ಚಿತ್ರದಲ್ಲಿ ಬಿಕಿನಿ ಹಾಕಿಕೊಂಡು ಸಿಕ್ಕಾಪಟ್ಟೆ ಹಾಟ್ ಹಾಟಾಗಿ ಕುಣಿದಿದ್ದಾರೆ ಅನ್ನೋದು ನಿಜವಲ್ಲವಂತೆ. ವಾಸ್ತವದಲ್ಲಿ ರಾಗಿಣಿ ತೊಟ್ಟಿದ್ದು ಬಿಕಿನಿ ಅಲ್ಲ, ಈಜುಡುಗೆ. ಅಷ್ಟೇ ಅಲ್ಲ, ಅದರ ಮೇಲೊಂದು ಶಾಲನ್ನೂ ಹೊದ್ದುಕೊಂಡಿದ್ದಾರೆ. ಹಾಗಂತ ರಾಗಿಣಿ ಸ್ಪಷ್ಟನೆ ನೀಡಿದ್ದಾರೆ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ, ಪಿ. ವಾಸು ನಿರ್ದೇಶನದ 'ಆರಕ್ಷಕ' ಚಿತ್ರದಲ್ಲಿ ರಾಗಿಣಿ ನಾಯಕಿ. ಈ ಚಿತ್ರದ ಹಾಡೊಂದರಲ್ಲಿ ತಾನು ವಿಕ್ಟೋರಿಯಾ ಸೀಕ್ರೆಟ್ ಬಿಕಿನಿ ಹಾಕಿದ್ದೇನೆ, ಇಲ್ಲಿ ತುಂಬಾ ಮಾದಕವಾಗಿ ಕಾಣಿಸಿಕೊಂಡಿದ್ದೇನೆ ಎಂದು ಅವರೇ ಕೆಲದಿನಗಳ ಹಿಂದೆ ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿದ್ದರು.

ಆದರೆ ಈಗ ತನ್ನ ಹೇಳಿಕೆಯಿಂದ ರಾಗಿಣಿ ಹಿಂದಕ್ಕೆ ಸರಿದಿದ್ದಾರೆ. ಅಲ್ಲದೆ, ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ. ತಾನು ಹಾಗೆ ಹೇಳಿಯೇ ಇಲ್ಲ. ಈ ಸಿನಿಮಾದಲ್ಲಿ ನಾನು ಬಿಕಿನಿ ಹಾಕಿಲ್ಲ. ನನ್ನ ಇಂಟ್ರಡಕ್ಷನ್ ಹಾಡಿನಲ್ಲಿ ನಾನು ವಿಕ್ಟೋರಿಯಾ ಸೀಕ್ರೆಟ್ ಈಜುಡುಗೆಯ ಮೇಲೆ ಸಾರಂಗ್ (ಇಂಟರ್ನೆಟ್ಟಿನಲ್ಲಿ ಸರ್ಚ್ ಮಾಡಿ) ಹಾಕಿಕೊಂಡಿದ್ದೇನೆ. ಇದನ್ನು ಬಿಕಿನಿ ಅನ್ನೋದಾದರೆ, ಅಂತವರಿಗೆ ನಾನು ಏನೆಂದು ಹೇಳಲಿ ಎಂದು ಲೇವಡಿ ಮಾಡಿದ್ದಾರೆ.

ರಾಗಿಣಿ ಹೇಳಿದ ಇಷ್ಟೆಲ್ಲ ಮಾತುಗಳನ್ನು ಕೇಳಿದವರು, ಅವರಿನ್ನು ಬಿಕಿನಿ ಹಾಕೋದೇ ಇಲ್ಲ ಅಂದುಕೊಂಡಿದ್ದರೆ ಮುಂದಿನ ಮಾತುಗಳು ದಾರಿ ತಪ್ಪಿಸುತ್ತವೆ. ಅವರು ಬಿಕಿನಿ ವಿರೋಧಿಯಲ್ಲವಂತೆ. ಯಾವತ್ತಾದರೂ ಬಿಕಿನಿ ಹಾಕಲೇ ಬೇಕಾದ ಪಾತ್ರ ಬಂದರೆ, ಆಗ ಖಂಡಿತಾ ಅದರ ಬಗ್ಗೆ ಯೋಚನೆ ಮಾಡುತ್ತಾರಂತೆ.

ಬಿಕಿನಿ ಧರಿಸುವುದು ದೊಡ್ಡ ಸಂಗತಿಯೇ ಅಲ್ಲ. ಅದೀಗ ಹೀರೋಯಿನ್ ತೊಡುವ ಇನ್ನೊಂದು ದಿರಿಸು, ಅಷ್ಟೇ. ನನಗೆ ಅಂತಹ ಆಫರ್ ಬಂದರೆ ಯೋಚನೆ ಮಾಡುತ್ತೇನೆ. ನನಗೆ ಅದು ಚೆನ್ನಾಗಿ ಸೂಟ್ ಕೂಡ ಆಗುತ್ತದೆ. ಆದರೆ ಸಂದರ್ಭ ಇರಬೇಕು. ಹಾಗಿದ್ದರೆ ಹಿಂಜರಿಕೆಯೇನಿಲ್ಲ ಅಂತ ಹೇಳುವ ಮೂಲಕ ನಿರ್ಮಾಪಕರಿಗೆ ರಾಗಿಣಿ ಬಹಿರಂಗ ಆಹ್ವಾನ ನೀಡಿದ್ದಾರೆ.

ಇನ್ನು ಎಲ್ಲಾ ನಾಯಕಿಯರಂತೆ ರಾಗಿಣಿಯೂ ಐಟಂ ನಂಬರ್ ಬಗ್ಗೆ ತನ್ನದೇ ವ್ಯಾಖ್ಯಾನವನ್ನು ಸೃಷ್ಟಿಸಿದ್ದಾರೆ. ಒಂದು ಹಾಡಿನಲ್ಲಿ ಒಬ್ಬಳೇ ನಾಯಕಿ ಕುಣಿದರೆ, ಅದು ಐಟಂ ಸಾಂಗ್ ಅಲ್ಲವಂತೆ. ಹಾಗಾಗಿ ರಾಗಿಣಿ ಆರಕ್ಷಕ ಚಿತ್ರದಲ್ಲಿ ಮತ್ತೆ ಐಟಂ ಸಾಂಗ್ ಮಾಡಿದ್ದಾರೆ ಎಂಬ ವಾದವನ್ನು ಅವರು ಒಪ್ಪುತ್ತಿಲ್ಲ. ಅದೊಂದು ಹಾಡು ಮಾತ್ರ ಅನ್ನುತ್ತಾರೆ.

ಹೀಗೆನ್ನುತ್ತಾ ಮತ್ತೆ ಗೊಂದಲ ಮಾತಿಗೆ ರಾಗಿಣಿ ಧುಮುಕುತ್ತಾರೆ. ಐಟಂ ಸಾಂಗ್ ಮಾಡೋದರಲ್ಲಿ ತಪ್ಪೇನಿದೆ. ಅದು ಜನರನ್ನು ರಂಜಿಸುತ್ತದೆ, ನೋಡುತ್ತಾರೆ. ನನಗೀಗ ಐಟಂ ಸಾಂಗುಗಳಲ್ಲಿ ನಟಿಸಲು ಸಾಕಷ್ಟು ಆಫರುಗಳು ಬರುತ್ತಿವೆ. ಆದರೆ ನಾಯಕಿಯಾಗಿರದ ಹೊರತು, ಹಾಡುಗಳಲ್ಲಿ ಕಾಣಿಸಿಕೊಳ್ಳಲು ನಾನು ಸಿದ್ಧಳಿಲ್ಲ ಎಂದಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments