ಬಾಕ್ಸಾಫೀಸಿನಲ್ಲಿ 'ಕೋಳಿ-ಕೋತಿ' ಆಟ ಬಲು ಜೋರು
ಕಳೆದ ವಾರ ಬಿಡುಗಡೆಯಾದ 'ಕೋ ಕೋ ಕೋಳಿ ಕೋತಿ' ಚಿತ್ರ ಬಾಕ್ಸಾಫೀಸಿನಲ್ಲಿ ಭರ್ಜರಿ ಹಿಟ್ ಆಗಿದ್ಯಂತೆ. ಹಾಗಂತ ನಿರ್ದೇಶಕ ಆರ್. ಚಂದ್ರು ಅವರಿಂದ ಹಿಡಿದು ಕ್ಯಾಮರಾಮ್ಯಾನ್ವರೆಗೆ ಪ್ರತಿಯೊಬ್ಬರೂ ಸಾರಿ ಸಾರಿ ಹೇಳಿದ್ದಾರೆ. ನಾವು ಗೆದ್ದಿದ್ದೇವೆ ಎಂದ ಎದೆ ತಟ್ಟಿ ಹೇಳಿದ್ದಾರೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಶ್ರೀನಗರ ಕಿಟ್ಟಿ ನಾಯಕರಾಗಿದ್ದ 'ಕೋ ಕೋ' ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿದ್ದರು. ಸಂಜನಾ, ಬುಲೆಟ್ ಪ್ರಕಾಶ್, ಸುರೇಶ್ ಮಂಗಳೂರು ಮುಂತಾದವರೂ ಇದರಲ್ಲಿ ನಟಿಸಿದ್ದರು. ಚಿತ್ರ ಬಿಡುಗಡೆಯಾದ ಒಂದು ವಾರದಲ್ಲಿ ಇವರೆಲ್ಲರೂ ಸಂತೋಷ ಕೂಟದಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಂಡರು. ನಿರ್ದೇಶಕ-ನಿರ್ಮಾಪಕರನ್ನು ಅಪಾದಮಸ್ತಕ ಹೊಗಳಿದರು.ಈ ಯಶಸ್ಸಿಗೆ ಮಾಧ್ಯಮಗಳೂ ಕಾರಣ. ನನ್ನ ಎಲ್ಲಾ ನಾಲ್ಕು ಚಿತ್ರಗಳ ಯಶಸ್ಸಿನ ಸಂದರ್ಭದಲ್ಲಿ ಮಾಧ್ಯಮಗಳು ಜತೆಗಿದ್ದವು. ನಿರ್ಮಾಪಕ ಭಾಸ್ಕರ್ ಅವರ ಕಥೆ ಇಲ್ಲಿ ಇನ್ನೊಂದು ಪ್ಲಸ್ ಪಾಯಿಂಟ್. ಉಳಿದೆಲ್ಲರ ಸಹಕಾರದಿಂದ 'ಕೋ ಕೋ ಕೋಳಿ ಕೋತಿ' ಬಾಕ್ಸಾಫೀಸಿನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿಸುತ್ತಿದೆ ಎಂದವರು ನಿರ್ದೇಶಕ ಆರ್. ಚಂದ್ರು.ಬುಲೆಟ್ ಪ್ರಕಾಶ್ ಅವರಂತೂ ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು. ಕಬ್ಬಿನ ಜಲ್ಲೆಯಿಂದ ಎಷ್ಟು ಸಾಧ್ಯವಾಗುತ್ತದೋ, ಅಷ್ಟು ಜ್ಯೂಸ್ ತೆಗೆದಂತೆ ನಿರ್ದೇಶಕ ಆರ್. ಚಂದ್ರು ಕೆಲಸ ಮಾಡಿದ್ದಾರೆ. ನನ್ನ ಪಾಲಿಗಂತೂ ಇದೊಂದು ಮೈಲುಗಲ್ಲು. ಪ್ರತಿಯೊಂದು ಹಂತದಲ್ಲೂ ನಿರ್ದಿಷ್ಟವಾಗಿ ಚಿತ್ರ ಬರಬೇಕು ಅನ್ನುವ ಕಲ್ಪನೆ ನಿರ್ದೇಶಕರಲ್ಲಿತ್ತು. ನನಗೆ ಹತ್ತು ಸಿನಿಮಾಗಳ ಅನುಭವ ಒಂದರಲ್ಲೇ ಆಗಿದೆ. ನನ್ನ ನಟನೆಯಲ್ಲಿ ಏನಾದರೂ ಕಂಡು ಬಂದಿದ್ದರೆ, ಅದಕ್ಕೆ ಚಂದ್ರು ಕಾರಣ ಎಂದು ಹೊಗಳಿ ಅಟ್ಟಕ್ಕೇರಿಸಿದರು.ನಿರ್ಮಾಪಕ ಭರಣಿ ಮಿನರಲ್ಸ್ ಭಾಸ್ಕರ್ ಕೂಡ ಇದರಿಂದ ಹೊರತಲ್ಲ. ನಿರ್ದೇಶಕ ಚಂದ್ರು, ನಾಯಕ-ನಾಯಕಿ ಸೇರಿದಂತೆ ಪ್ರತಿಯೊಬ್ಬರನ್ನೂ ಪ್ರಶಂಸಿಸಿದರು. ಅದೇ ಕಾರಣದಿಂದಾಗಿ ಚಿತ್ರ ಚೆನ್ನಾಗಿ ಓಡುತ್ತಿದೆ ಎಂದರು.ಅವರ ಪ್ರಕಾರ, ತೆಲುಗಿನ ಮಹೇಶ್ ಬಾಬು 'ಬಿಸಿನೆಸ್ಮ್ಯಾನ್'ಗಿಂತ 'ಕೋ ಕೋ'ಗೆ ಹೆಚ್ಚು ಪ್ರತಿಕ್ರಿಯೆ ಉತ್ತರ ಕರ್ನಾಟಕದಲ್ಲಿದೆಯಂತೆ. ಇಂತಹ ಬೆಂಬಲ ಸಿಕ್ಕಿರುವುದು ಖುಷಿ ತಂದಿದೆ ಎಂದರು. ಹೆಮ್ಮೆಯಾಗುತ್ತಿದೆ ಎಂದು ಎಲ್ಲರ ಬೆನ್ನು ತಟ್ಟಿದರು.ವೆಬ್ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!