Select Your Language

Notifications

webdunia
webdunia
webdunia
webdunia

ಪ್ರಿಯಾಮಣಿ ಈಗ ಆಂಟಿ.... ಆಹಾ!

ಪ್ರಿಯಾಮಣಿ ಈಗ ಆಂಟಿ.... ಆಹಾ!
, ಶುಕ್ರವಾರ, 18 ಏಪ್ರಿಲ್ 2014 (10:48 IST)
PR
ಸಾಮಾನ್ಯವಾಗಿ ತಾವು ನಟಿಸುವ ಚಿತ್ರಗಳಲ್ಲಿ ಅಕ್ಕ , ಆಂಟಿ ಅಮ್ಮ , ಅಜ್ಜಿ ಎಲ್ಲ ಆಗ್ತಾರೆ ನತೀಮನಿಯರು. ಆದರೆ ರಿಯಲ್ ಬದುಕಲ್ಲಿ ಸಿಗುವ ಪಟ್ಟವು ಮಾತ್ರ ವಿಶೇಷವಾದ ಅನುಭೂತಿ ನೀಡುತ್ತದೆ. ನಟಿ ಪ್ರಿಯಾಮಣಿ ವಿಷಯದಲ್ಲೂ ಸಹ ಅಂತಹದ್ದೇ ಆಗಿದೆ. ಆಕೆ ಈಗ ಆಂಟಿ ಆಗಿದ್ದಾಳೆ.

ಸಾಮಾನ್ಯವಾಗಿ ಹೀರೋಯಿನ್ ಗಳು ಯಾವ ಬಗ್ಗೆಯಾದರೂ ವೈಲೆಂಟ್ ಆಗಿದ್ರು ಸಹ , ತಮ್ಮ ವಯಸ್ಸಿನ ವಿಷಯ ಬಂದಾಗ ಮಾತ್ರ ಪೂರ್ತಿ ಸೈಲೆಂಟ್! ಶ್ರುತಿ ಹಾಸನ್ , ಶ್ರೀಯ ಎಂದಿಗೂ ತಮ್ಮ ವಯಸ್ಸನ್ನು ಮುಚ್ಚಿಟ್ಟಿಲ್ಲ. ಅದೇ ಸಾಲಿಗೆ ಪ್ರಿಯಾಮಣಿ ಸಹ ಸೇರ್ಪಡೆ ಆಗುತ್ತಾಳೆ.

webdunia
PR
ಆಕೆ ತನ್ನ ವಯಸ್ಸು ಎಷ್ಟು ಎನ್ನುವ ಸಂಗತಿಯನ್ನು ನೇರವಾಗಿ ಮಾಧ್ಯಮದ ಮುಂದೆ ಇಡ್ತಾಳೆ. ಅತ್ಯುತ್ತಮ ನಟಿ ಆಗಿದ್ದರು ಸಹ ಆಕೆ ತಮಿಳು ಚಿತ್ರರಂಗದಿಂದ ಕಳೆದ ಎರಡು - ಮೂರು ವರ್ಷಗಳಿಂದ ದೂರ ದೂರ ! ಆದರೆ ಕನ್ನಡ , ತೆಲುಗು ಮತ್ತು ಮಲೆಯಾಳಂ ಚಿತ್ರಗಲ್ಲಿ ಮಾತ್ರ ಸಿಕ್ಕಾಪಟ್ಟೆ ಬ್ಯುಸಿಯಾಗಿ ತನ್ನ ಪ್ರತಿಭೆ ತೋರುತ್ತಾ ಬಂದಿದ್ದಾಳೆ ಈ ಕೃಷ್ಣ ಸುಂದರಿ. ದರ್ಶನ್ ಅವರ ಜೊತೆ ಅಂಬರೀಶ ಚಿತ್ರದಲ್ಲಿ ನಟಿಸುತ್ತಿರುವ ಈ ಚೆಲುವೆಯ ಸಹೋದರ ಮತ್ತು ಆತನ ಪತ್ನಿ ಇತ್ತೀಚೆಗೆ ಅಪ್ಪ ಅಮ್ಮ ಆದರು.. ಈ ಖುಷಿಯನ್ನು ಟ್ವಿಟ್ ಮಾಡಿ ನಾನು ಆಂಟಿ ಆದೆ ಎಂದು ಹಂಚಿ ಕೊಂಡಿದ್ದಾಳೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada