Webdunia - Bharat's app for daily news and videos

Install App

ಪೂಜಾ ಗಾಂಧಿಗೂ ಕುಮಾರಸ್ವಾಮಿ ಮನೆ ಕೊಟ್ರಂತೆ..!

Webdunia
PR


ರಾಧಿಕಾ ಪ್ರಸಂಗ ಚಾಲ್ತಿಯಲ್ಲಿರುವಾಗಲೇ ಹುಟ್ಟಿಕೊಂಡಿರುವ ಸುದ್ದಿಯಿದು. ಆಕೆಗೆ ಬೆಂಗಳೂರಿನಲ್ಲೊಂದು ಮನೆ, ಮಂಗಳೂರಿನಲ್ಲಿ ಇನ್ನೊಂದು ಮನೆ, ತೋಟ, ಸಿನಿಮಾ ಎಂದೆಲ್ಲ ಕೊಟ್ಟ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಈಗ ಮಳೆ ಹುಡುಗಿ ಪೂಜಾ ಗಾಂಧಿಗೂ ಮನೆ ಕೊಟ್ಟರೇ?

ಗೊತ್ತಿಲ್ಲ. ಪೂಜಾ ಗಾಂಧಿಗೆ ಕುಮಾರಣ್ಣ ಮನೆ ಕೊಟ್ಟಿದ್ದಾರಂತೆ ಅನ್ನೋ ಸುದ್ದಿ ಬೆಂಗಳೂರಿನಲ್ಲಿ ಕಾಡ್ಗಿಚ್ಚು ಎಬ್ಬಿಸಿರುವುದು ನಿಜ. ಮಾಧ್ಯಮದವರು ಮತ್ತು ಜನ ಆ ಮನೆಗಾಗಿ ಹುಡುಕಾಟ ನಡೆಸುತ್ತಿರುವುದೂ ನಿಜ. ಆದರೆ ಯಾರಿಗೂ ಆ ಮನೆಯನ್ನು ಪತ್ತೆ ಮಾಡೋದಿಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಮನೆ ಕೊಟ್ಟಿರುವುದು ಹೌದೇ ಎಂಬ ಸುದ್ದಿಯನ್ನು ಖಚಿತ ಪಡಿಸುವುದಕ್ಕೂ ಸಾಧ್ಯವಾಗುತ್ತಿಲ್ಲ.

ಹಾಗಿದ್ದರೆ ಈ ಸುದ್ದಿ ಹುಟ್ಟಿಕೊಂಡದ್ದು ಹೇಗೆ? ಇದಕ್ಕೆ ಉತ್ತರ ಸ್ವತಃ ಪೂಜಾ ಗಾಂಧಿ. ಆಕೆ ಮಾಡಿಕೊಂಡ ಎಡವಟ್ಟೋ ಅಥವಾ ನಿಜ ಸಂಗತಿಯೋ? ಅಂತೂ ಅವರ ಬಾಯಿಯಿಂದಲೇ ಈ ಸುದ್ದಿ ಹೊರ ಬಿದ್ದಿದೆ.

ಆಗಿರುವುದು ಇಷ್ಟೇ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದವರು, "ನನಗೆ ಹೊಸ ಮನೆ ಸಿಕ್ಕಿದೆ" ಎಂದಿದ್ದರು. ಬಹುಶಃ ಆ ಮನೆ ಕುಮಾರಸ್ವಾಮಿಯೇ ಕೊಟ್ಟಿರಬಹುದು ಅಂತ ಸುದ್ದಿ ಹಬ್ಬಲು ಇಷ್ಟೇ ಸಾಕಾಗಿತ್ತು!

PR


ಸುದ್ದಿ ನಿಜವಲ್ಲ: ಪೂಜಾ ಗಾಂಧಿ
ಕುಮಾರಸ್ವಾಮಿಯಿಂದ ತನಗೆ ಮನೆ ಸಿಕ್ಕಿದೆ ಎಂಬ ವರದಿಗಳು ನಿಜವಲ್ಲ ಅನ್ನೋದು ಪೂಜಾ ವಾದ. ನಾನು ಹೇಳಿದ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನನಗೆ ಯಾರೂ ಮನೆ ಕೊಟ್ಟಿಲ್ಲ. ಬೆಂಗಳೂರಿನಲ್ಲಿರುವ ಮನೆ ನನ್ನ ಸ್ವಂತದ್ದು ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

ಜೆಡಿಎಸ್ ಕುಟುಂಬಕ್ಕೆ ನಾನೂ ಸೇರಿದ್ದೇನೆ ಎಂದು ಹೇಳುವಾಗ ನನ್ನ ಕನ್ನಡ ಜ್ಞಾನದ ಕೊರತೆಯಿಂದ Home ಬದಲಿಗೆ family ಎಂಬ ಪದ ಬಳಕೆ ಮಾಡಿದ್ದೆ. ಕುಮಾರಣ್ಣ ನನ್ನನ್ನು ತಂಗಿ ಅಂತಾನೇ ಕರೀತಾರೆ. ಸಂದರ್ಶನದಲ್ಲಿ ಮಾತು ಆಚೀಚೆ ಆಗಿದ್ದರಿಂದ ಈ ಆವಾಂತರ ನಡೆದಿದೆ. ನನಗೆ ಯಾರೂ ಮನೆ ಕೊಟ್ಟಿಲ್ಲ. ನಾನು ಜೆಡಿಎಸ್‌ನ ಬಿಗ್ ಹೋಮ್‌ಗೆ ಸೇರ್ಪಡೆಯಾಗಿದ್ದೇನೆ ಎಂದಷ್ಟೇ ಹೇಳಿದ್ದೆ ಎನ್ನುತ್ತಾರೆ ಪೂಜಾ ಗಾಂಧಿ.

ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಅನ್ನೋದನ್ನು ನೀವೇ ನಿರ್ಧರಿಸಿ..!

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments