Select Your Language

Notifications

webdunia
webdunia
webdunia
webdunia

ಪುನೀತ್ ಮೊದಲ ಚಿತ್ರ 'ಅಪ್ಪು' ಬಾಲಿವುಡ್‌ಗೆ ರಿಮೇಕ್?

ಪುನೀತ್ ಮೊದಲ ಚಿತ್ರ 'ಅಪ್ಪು' ಬಾಲಿವುಡ್‌ಗೆ ರಿಮೇಕ್?
, ಶನಿವಾರ, 20 ಏಪ್ರಿಲ್ 2013 (12:56 IST)
PR
PR
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾದ ಮೊದಲ ಚಿತ್ರ 'ಅಪ್ಪು' ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆಯೇ? ಹೌದೆನ್ನುತ್ತಿವೆ ಮೂಲಗಳು. ತೆಲುಗಿನ ಪೂರಿ ಜಗನ್ನಾಥ್ ಕನ್ನಡದಲ್ಲಿ ನಿರ್ದೇಶಿಸಿದ್ದ ಈ ಚಿತ್ರಕ್ಕೀಗ ಅವರು ಕಥೆ-ಚಿತ್ರಕಥೆ ಬರೆಯುತ್ತಿದ್ದಾರಂತೆ!

ಅಂದ ಹಾಗೆ, ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ 'ಅಪ್ಪು' ಚಿತ್ರಕ್ಕೆ ರಿಮೇಕ್ ಎಂಬ ಪದ ಹೊಸತಲ್ಲ. ಕನ್ನಡದಲ್ಲಿ ಬಿಡುಗಡೆಯಾದ ನಂತರ ಅದೇ ಚಿತ್ರ ತೆಲುಗಿನಲ್ಲಿ 'ಈಡಿಯೆಟ್', ತಮಿಳಿನಲ್ಲಿ 'ಧಮ್', ಬೆಂಗಾಲಿಯಲ್ಲಿ 'ಪ್ರಿಯಾ ಅಮರ್ ಪ್ರಿಯಾ' ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು. ಸೂಪರ್ ಸ್ಟಾರ್‌ಗಳು ಅಭಿನಯಿಸಿದ್ದು ಮಾತ್ರವಲ್ಲ, ಎಲ್ಲೆಡೆ ಸೂಪರ್ ಹಿಟ್ ಕೂಡ ಆಗಿತ್ತು.

ಅದೇ ಚಿತ್ರಕ್ಕೀಗ ಬಾಲಿವುಡ್ ಯೋಗ ಕೂಡಿ ಬಂದಂತಿದೆ. ಮೂಲ ನಿರ್ದೇಶಕ ಪೂರಿ ಜಗನ್ನಾಥ್ ಅವರೇ ಅಲ್ಲೂ ನಿರ್ದೇಶನಕ್ಕೆ ರೆಡಿಯಾಗುತ್ತಿದ್ದಾರೆ. ಪುನೀತ್ ಜಾಗಕ್ಕೆ ಬಾಲಿವುಡ್ ಹೊಸ ಪೀಳಿಗೆಯ ಹುಡುಗರಾದ ಅರ್ಜುನ್ ಕಪೂರ್ ಅಥವಾ ಸಿದ್ಧಾರ್ಥ ಮಲ್ಹೋತ್ರಾ ನಾಯಕರಾಗುವ ಸಾಧ್ಯತೆಗಳಿವೆ. ಆದರೆ ರಕ್ಷಿತಾ ಜಾಗಕ್ಕೆ ಯಾರು ಬರುತ್ತಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರಗಳು ಬಾಲಿವುಡ್‌ಗೆ ಈ ಹಿಂದೆಯೂ ರಿಮೇಕ್ ಆಗಿದ್ದವು. ಪೋಕಿರಿ, ಬದ್ರಿ ಸೇರಿದಂತೆ ಹಲವು ಚಿತ್ರಗಳು ತೆಲುಗಿನಿಂದ ಬಾಲಿವುಡ್‌ಗೆ ಹೋಗಿವೆ. ಆ ಸಾಲಿಗೆ ಹೊಸ ಸೇರ್ಪಡೆ 'ಅಪ್ಪು' ಆಗಲಿದೆ.

Share this Story:

Follow Webdunia kannada