Select Your Language

Notifications

webdunia
webdunia
webdunia
webdunia

'ನೀರ್ ದೋಸೆ'ಯಲ್ಲಿ ರಮ್ಯಾ ಸಿಗರೇಟು ಎಳೀತಾರಂತೆ..!

'ನೀರ್ ದೋಸೆ'ಯಲ್ಲಿ ರಮ್ಯಾ ಸಿಗರೇಟು ಎಳೀತಾರಂತೆ..!
PR
ಲಕ್ಕಿ ಸ್ಟಾರ್ ರಮ್ಯಾ ಇದುವರೆಗೆ ಸಭ್ಯ ಪಾತ್ರಗಳಲ್ಲೇ ಕಾಣಿಸಿಕೊಂಡವರು. ಹೆಚ್ಚೆಂದರೆ ಗಂಡು ಬೀರಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲೋ ಅಧಿಕಾರಿಯಾಗಿ ನಟಿಸಿದ್ದೂ ಇದೆ. ಆದರೆ ಕ್ಲಬ್ ಡ್ಯಾನ್ಸರ್, ವೇಶ್ಯೆಯಂತಹ ಪಾತ್ರದಲ್ಲಿ ಇದುವರೆಗೆ ಅಭಿನಯಿಸಿದ್ದಿಲ್ಲ. ಅಂತಹ ಪಾತ್ರ ಇದೇ ಮೊದಲ ಬಾರಿ ಸಿಕ್ಕಿದೆ!

ಕ್ಲಬ್ ಡ್ಯಾನ್ಸರ್ ಪಾತ್ರವೆಂದ ಮೇಲೆ ಪಾತ್ರಕ್ಕೆ ಬೇಕಾದ ರೀತಿ-ರಿವಾಜುಗಳು ಬೇಕೇ ಬೇಕು ತಾನೇ? ಹಾಗಾಗಿಯೇ 'ನೀರ್ ದೋಸೆ' ಚಿತ್ರದಲ್ಲಿ ಅವರ ಮೈಗೆ ಕ್ಲಬ್ ಡ್ಯಾನ್ಸರು ತುಂಡು-ಮುಂಡು ಧಿರಿಸುಗಳು ಬಂದಿವೆ. ಪಾರದರ್ಶಕ ಬಟ್ಟೆಗಳು ರಮ್ಯಾ ತನುವನ್ನಲಂಕರಿಸಿವೆ. ಅಷ್ಟು ಮಾತ್ರವಲ್ಲ, ಅವರ ಕೈ ಬೆರಳುಗಳ ನಡುವೆ ಸಿಗರೇಟು ಬಂದಿದೆ. ಪುಸ್ಸ್ ಅಂತ ಧಾರಾಳ ಹೊಗೆ ಬಿಡುತ್ತಿದ್ದಾರೆ.

ನಿರ್ದೇಶಕ ವಿಜಯ್ ಪ್ರಸಾದ್ ಇಂತಹದ್ದೊಂದು ಪಾತ್ರದ ಬಗ್ಗೆ ಹೇಳಿದಾಗ ಆರಂಭದಲ್ಲಿ ರಮ್ಯಾ ಒಪ್ಪಿಕೊಂಡಿದ್ದರೂ, ನಂತರ ನಿರಾಕರಿಸಲು ಅತಿರೇಕದ ನಟನೆಯ ಬೇಡಿಕೆಯೇ ಕಾರಣವಿರಬಹುದು. ಇಂತಹ ಪಾತ್ರದ ಬಗ್ಗೆ ಸಂಪೂರ್ಣ ವಿವರ ಪಡೆದಾಗ, ಕಥೆ ಪೂರ್ತಿಯಾಗಿ ಕೈಗೆ ಸಿಕ್ಕಿದಾಗ ನೋಡಿದ ರಮ್ಯಾಗೆ ತನ್ನ ಅಭಿಮಾನಿಗಳು ಏನನ್ನುತ್ತಾರೋ ಎಂಬ ಭೀತಿಯೂ ಕಾಡಿರಬಹುದು ಎನ್ನುವುದು ಊಹೆ.

ಅಂದ ಹಾಗೆ, 'ನೀರ್ ದೋಸೆ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಈ ದೃಶ್ಯಗಳು ಹೊರ ಜಗತ್ತಿಗೆ ಗೊತ್ತಾಗದಂತೆ ಚಿತ್ರತಂಡ ಭಾರೀ ಜಾಗರೂಕತೆ ವಹಿಸುತ್ತಿದೆ. ಯಾವುದೇ ಕಾರಣಕ್ಕೂ ಫೋಟೊ ತೆಗೆಯಬಾರದು ಎಂದು ಮಾಧ್ಯಮಗಳಿಗೆ ಫರ್ಮಾನು ವಿಧಿಸಲಾಗುತ್ತಿದೆ. ಇಂತಹ ಫೋಟೊಗಳು ಹೊರಗೆ ಹೋಗಬಾರದು ಎಂದು ರಮ್ಯಾ ಕಟ್ಟುನಿಟ್ಟಾಗಿ ನಿರ್ದೇಶಕರಿಗೆ ಹೇಳಿದ್ದಾರಂತೆ.

ಜಗ್ಗೇಶ್ ನಾಯಕನಾಗಿರುವ ಈ ಚಿತ್ರದಲ್ಲಿ ರಮ್ಯಾ, ದತ್ತಣ್ಣ ಮುಂತಾದವರು ನಟಿಸುತ್ತಿದ್ದಾರೆ.

ಈ ನಡುವೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಭಾವನಾ ಚಿತ್ರದಿಂದ ಹೊರ ಬಿದ್ದಿದ್ದಾರೆ. ಅವರ ಜಾಗಕ್ಕೆ ಚಿರಯೌವ್ವನೆ ಸುಮನ್ ರಂಗನಾಥ್ ಎಂಟ್ರಿ ಪಡೆದಿದ್ದಾರೆ. ಕೊನೆಯ ಕ್ಷಣದಲ್ಲಿ ಭಾವನಾ ಕೈ ಎತ್ತಿದರೂ ನಿರ್ದೇಶಕ ವಿಜಯ್ ಪ್ರಸಾದ್ ಹೆಚ್ಚು ತಲೆ ಕೆಡಿಸಿಕೊಳ್ಳದೆ 'ಸಿದ್ಲಿಂಗು' ಸೆಕ್ಸಿ ಟೀಚರ್‌ಗೆ ಜೈ ಎಂದಿದ್ದಾರೆ.

Share this Story:

Follow Webdunia kannada