Select Your Language

Notifications

webdunia
webdunia
webdunia
webdunia

ನಿರ್ಮಾಪಕರ ಸಂಗ: ರಾಗಿಣಿ ಅಫೇರ್‌ಗೆ ಯೋಗಿ ಗುಡ್ ಬೈ?

ನಿರ್ಮಾಪಕರ ಸಂಗ: ರಾಗಿಣಿ ಅಫೇರ್‌ಗೆ ಯೋಗಿ ಗುಡ್ ಬೈ?
PR
ಲೂಸ್ ಮಾದ ಯೋಗೇಶ್ ಮತ್ತು ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ ನಡುವೆ ವಿವಾಹ ನಿಶ್ಚಿತಾರ್ಥವೂ ನಡೆದು ಹೋಯಿತು ಎಂದು ಸುದ್ದಿಯಾದ ಒಂದೆರಡು ತಿಂಗಳ ನಂತರ ಆ ಜೋಡಿ ಈಗ ಬೇರೆಯಾಗಿರುವ ಬಗ್ಗೆ ಗಾಂಧಿನಗರಿಯ ಗಲ್ಲಿಗಲ್ಲಿಗಳಲ್ಲಿ ಗುಲ್ಲು ಹಬ್ಬಿದೆ!

ಯೋಗಿ-ರಾಗಿಣಿ ಚೆಲ್ಲಾಟದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಬೆಂಗಳೂರಿನಲ್ಲಿರಲಿ, ದುಬೈಗೇ ಹೋಗಲಿ; ಇಬ್ಬರೂ ಜತೆಯಾಗಿಯೇ ಇರಬೇಕು. ಸುಖಾಸುಮ್ಮನೆ ಪೋಲಿ ಪೋಲಿಯಾಗಿ ಮಾತನಾಡುತ್ತಾ ಜತೆಗೇ ಹರಟುತ್ತಿದ್ದರು. ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿ ದಿಗಂತ್-ಐಂದ್ರಿತಾ ರೇ ನಂತರ ತಾವೇ ಅನ್ನುವಂತೆ ಥಳಕು ಹಾಕಿಕೊಂಡೇ ಫೋಟೊಗಳಿಗೆ ಪೋಸ್ ಕೊಡುತ್ತಿದ್ದರು.

ಹೀಗಿದ್ದವರು 'ಬಂಗಾರಿ' ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದೂ ಆಯ್ತು. ಆದರೆ ಈಗ ಅವರಿಬ್ಬರು ಬೇರೆಯಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಇದಕ್ಕೆ ಕಾರಣ, ರಾಗಿಣಿ. ಆಕೆಯ ಕೆಲವು ನಿರ್ಮಾಪಕರ ಜತೆ ಕ್ಲೋಸ್ ಆಗಿರುವುದರನ್ನು ಯೋಗಿ ಸಹಿಸುತ್ತಿಲ್ಲವಂತೆ. ಹಾಗಾಗಿ ಆಕೆಯ ಜತೆ ಯೋಗಿ ಮಾತೇ ಬಿಟ್ಟಿದ್ದಾರಂತೆ!

ಕೆಲವು ನಿರ್ಮಾಪಕರ ಜತೆ ರಾಗಿಣಿ ಸಿಕ್ಕಾಪಟ್ಟೆ ಹರಟುತ್ತಾರೆ. ಅವರ ಹೆಗಲ ಮೇಲೆ ಕೈ ಹಾಕಿಯೇ ಮಾತನಾಡುತ್ತಾರೆ. ಮೊಬೈಲ್‌ನಲ್ಲೂ ಅದೇ ಕಥೆ. ಈ ಬಗ್ಗೆ ರಾಗಿಣಿಗೆ ಯೋಗಿ ಒಂದಷ್ಟು ಕಿವಿಮಾತು ಹೇಳಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಇನ್ನು ರಾಗಿಣಿಯಿಂದ ದೂರವೇ ಇರಬೇಕು ಎಂದು ಯೋಗಿ ನಿರ್ಧರಿಸಿದ್ದಾರೆ. ಅದರಂತೆ ರಾಗಿಣಿಗೆ ಫೋನ್ ಮಾಡಬಾರದು ಮತ್ತು ಆಕೆ ಫೋನ್ ಮಾಡಿದರೂ ರಿಸೀವ್ ಮಾಡಬಾರದು ಎಂದು ನಿರ್ಧರಿಸಿದ್ದಾರಂತೆ.

ವಿಷಯ ಇಷ್ಟಕ್ಕೇ ಮುಗಿಯುತ್ತಿಲ್ಲ, ಇನ್ನು ಮುಂದೆ ಎಲ್ಲೂ ಜತೆಯಾಗಿ ಹೋಗುವುದಿಲ್ಲ. ಎದುರು ಸಿಕ್ಕಿದರೂ ಸಹನಟಿ ಎಂಬಷ್ಟಕ್ಕೇ ಸಂಬಂಧ ಸೀಮಿತಗೊಳ್ಳಬೇಕು ಎಂದು ಯೋಗಿ ನಿರ್ಧರಿಸಿದ್ದಾರೆ ಎಂದು ಟ್ಲಾಬ್ಲಾಯ್ಡ್ ಪತ್ರಿಕೆಯೊಂದು ತನ್ನ ಗಾಸಿಪ್ ಕಾಲಂನಲ್ಲಿ ಬರೆದುಕೊಂಡಿದೆ.

Share this Story:

Follow Webdunia kannada