Webdunia - Bharat's app for daily news and videos

Install App

ನಮ್ಮ ರಮೇಶ್ ಕೈಯಲ್ಲಲ್ಲ, ಮಂಗನ ಕೈಯಲ್ಲಿ ಮಾಣಿಕ್ಯ!

Webdunia
PR
ಒಂದು ಕಾಲದಲ್ಲಿ ಕನ್ನಡದ ತ್ಯಾಗರಾಜ ಎಂದೇ ಖ್ಯಾತಿವೆತ್ತಿದ್ದ ರಮೇಶ್ ಅರವಿಂದ್ ಇತ್ತೀಚೆಗೆ ಹಾಸ್ಯಪಾತ್ರಗಳಲ್ಲೇ ಮಿಂಚುತ್ತಿದ್ದಾರೆ. ಈಗೀಗ ಅದೂ ಕಡಿಮೆ. ಅವರು ನಟಿಸಿದ ಸಿನಿಮಾಗಳು ಹೇಳಹೆಸರಿಲ್ಲದಂತೆ ಚಿತ್ರಮಂದಿರಗಳಿಂದ ಜಾಗ ಖಾಲಿ ಮಾಡುತ್ತಿವೆ.

ಆದರೂ ರಾಜೇಂದ್ರ ಕಾರಂತ್ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆ ಚಿತ್ರದ ಹೆಸರೇ 'ಮಂಗನ ಕೈಯಲ್ಲಿ ಮಾಣಿಕ್ಯ'. ಆರಂಭದಲ್ಲಿ ಕಾರಂತರ ನಿರ್ದೇಶನದ ಈ ಚಿತ್ರಕ್ಕೆ 'ರಸಗುಲ್ಲ' ಎಂದು ಹೆಸರಿಡಲಾಗಿತ್ತು. ಕಥೆ, ಚಿತ್ರಕಥೆ ಎಲ್ಲವೂ ಕಾರಂತರದ್ದು. ರಮೇಶ್ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಲ್ಲುತ್ತಿದ್ದಾರಷ್ಟೇ.

ಈಗಾಗಲೇ ಚಿತ್ರೀಕರಣ ಶುರುವಾಗಿದೆ. ರಮೇಶ್‌ಗೆ ನಾಯಕಿಯಾಗಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಳ್ಳುತ್ತಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಪಕರು.

' ಮಂಗನ ಕೈಯಲ್ಲಿ ಮಾಣಿಕ್ಯ' ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ರಮೇಶ್ ಹೇಳುವುದಿಷ್ಟು: ಈ ಚಿತ್ರದ ನಾಯಕ ಯಾವತ್ತೂ ಚಿಂತೆ ಮಾಡುತ್ತಲೇ ಇರುತ್ತಾನೆ. ಪ್ರತಿಯೊಂದಕ್ಕೂ ಟೆನ್ಶನ್, ಅದಕ್ಕಾಗಿಯೇ ಆತ ಕಾಯುತ್ತಿರುತ್ತಾನೆ. ತುಂಬಾ ಸವಾಲಿನ ಪಾತ್ರ. ಕ್ಷಣಕ್ಷಣ ಪಾತ್ರದ ಸ್ವರೂಪ ಬದಲಾಗುತ್ತದೆ.

ರಮೇಶ್ ಈಗಾಗಲೇ 'ತುಂತುರು' ಮುಗಿಸಿದ್ದಾರೆ. ಈಗ ಚಿತ್ರೀಕರಣದಲ್ಲಿರುವ ಕಾರಂತರ ಚಿತ್ರ ಮುಗಿದ ನಂತರ ರಿಯಲ್ ಸ್ಟಾರ್ ಉಪೇಂದ್ರರ 'ಸೂಪರ್ ಕಿಕ್' ನಿರ್ದೇಶನದತ್ತ ಗಮನ ಕೇಂದ್ರೀಕರಿಸುತ್ತಾರಂತೆ.

ನಮ್ಮ ಇಬ್ಬರ ನಿರ್ದೇಶನದ ರೀತಿ, ನಟನೆ ಎಲ್ಲವೂ ಭಿನ್ನ. ಉಪ್ಪಿಯನ್ನು ನಿರ್ದೇಶಿಸುವುದೆಂದರೆ ಮಜಾ ಇರುತ್ತದೆ. ಈ ಚಿತ್ರವನ್ನು ಕೆ. ಮಂಜು ನಿರ್ಮಿಸುತ್ತಿದ್ದಾರೆ. ಈಗಾಗಲೇ ಚರ್ಚೆ ನಡೆದಿದೆ. ಬೇರೆ ಚಿತ್ರಗಳಲ್ಲಿ ಬ್ಯುಸಿ ಇರುವ ಕಾರಣ ಇಬ್ಬರಿಗೂ ಪುರುಸೊತ್ತಾಗಿಲ್ಲ ಎಂದಿದ್ದಾರೆ ರಮೇಶ್.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments