Select Your Language

Notifications

webdunia
webdunia
webdunia
webdunia

ನನಗೂ ಒಬ್ಬ ಗೆಳೆಯ ಬೇಕು: ಪೂಜಾ ಗಾಂಧಿ, ರಾಧಿಕಾ ಪಂಡಿತ್

ನನಗೂ ಒಬ್ಬ ಗೆಳೆಯ ಬೇಕು: ಪೂಜಾ ಗಾಂಧಿ, ರಾಧಿಕಾ ಪಂಡಿತ್
, ಮಂಗಳವಾರ, 15 ಫೆಬ್ರವರಿ 2011 (16:15 IST)
WD
ಪ್ರೀತಿ ಅಮರ, ಪ್ರೇಮ ಮಧುರ ಎಂದೆಲ್ಲ ಸಿನಿಮಾದಲ್ಲೇ ಡೈಲಾಗ್ ಹೊಡೆದು ಹಲವು ಪ್ರೇಮಿಗಳಿಗೆ ಜನ್ಮ ಕೊಡುವ ಚಿತ್ರ ತಾರೆಯರ ನಿಜ ಜೀವನದಲ್ಲೂ, ಅಂದರೆ ತೆರೆಯ ಮರೆಯಲ್ಲೂ ನನಗೊಬ್ಬ ಹುಡುಗ ಬೇಕು ಎಂದು ಅನ್ನಿಸದೆ ಇರುತ್ತಾ? ಅದೂ ಪ್ರೇಮಿಗಳ ದಿನದಂದಾದರೂ ಒಮ್ಮೆ ನೆನಪು ಗಾಳಿಯಂತೆ ಬಂದು ಹೋಗಲೇ ಬೇಕಲ್ವಾ?

ಪ್ರೇಮಿಗಳೆಂದರೆ ಹೇಗಿರಬೇಕು ಮತ್ತು ನನ್ನ ಹುಡುಗ ಹೇಗಿರಬೇಕೆಂದು ಪೂಜಾ ಗಾಂಧಿ ಮತ್ತು ರಾಧಿಕಾ ಪಂಡಿತ್‌ರನ್ನು ಕೇಳಿದಾಗ ತಮ್ಮ ಕನಸುಗಳ ಮೂಟೆಯನ್ನು ಬಿಚ್ಚಿಟ್ಟರು. ಹೇಗಿರಬೇಕು ಎಂದು ಬಗೆಬಗೆಯಾಗಿ ವಿವರಿಸಿದರು.

ಪೂಜಾ ಗಾಂಧಿಗಂತೂ ಆಕೆಯ ಹುಡುಗ ತೀರಾ ಬುದ್ಧಿವಂತನಾಗಿರಬೇಕಂತೆ. ಆತ ಸುಂದರಾಂಗನಾಗಿರಬೇಕು, ಮಾನವೀಯ ಮೌಲ್ಯವನ್ನು ಹೊಂದಿರಬೇಕು, ಸದಾ ಪ್ರೀತಿಸುತ್ತಿರಬೇಕು ಎಂದೆಲ್ಲಾ ಹೇಳಿಕೊಂಡಿದ್ದಾರೆ.

'ನನ್ನ ಡ್ರೀಮ್ ಬಾಯ್ ಹ್ಯಾಂಡ್ಸಮ್ ಆಗಿರಬೇಕು, ಇಂಟೆಲಿಜೆಂಟ್ ಆಗಿದ್ದು ಮಾನವೀಯ ಮೌಲ್ಯ ಹೊಂದಿರಬೇಕು. ಯಾವಾಗಲೂ ಪ್ರೀತಿಯಿಂದಲೇ ನೋಡಿಕೊಳ್ಳುವವನಾಗಿರಬೇಕು'

'ಪ್ರೇಮಿಗಳು ವರ್ಷಕ್ಕೊಮ್ಮೆ ಮಾತ್ರ ಪ್ರೇಮಿಗಳ ದಿನ ಆಚರಿಸಬಾರದು. ಪ್ರೀತಿಸೋದು ನಿಜವೆಂದ ಮೇಲೆ ನಿಜವಾದ ಪ್ರೇಮಿಗಳಿಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ ಆಗಿರಬೇಕು. ಬೀಚ್‌ನ ಸನ್‌ಸೆಟ್‌ನಲ್ಲಿ ಕೆಂಪು ಗುಲಾಬಿ ಹಿಡಿದು ನಗು ಮೊಗದಲ್ಲಿ ಪ್ರೇಮ ನಿವೇದನೆ ಮಾಡುವಂಥ ಹುಡುಗನಲ್ಲಿ ಎಲ್ಲವನ್ನೂ ಪ್ರೀತಿಸುವ ಲಕ್ಷಣವಿರಬೇಕು' ಎಂದು ಪೂಜಾ ಗಾಂಧಿ ನುಡಿದರು.

ಮೊಗ್ಗಿನ ಮನಸ್ಸಿನಲ್ಲಿ ಯುವ ಮನಸ್ಸುಗಳ ಭಾವನೆಗಳನ್ನು 'ನನಗೂ ಒಬ್ಬ ಗೆಳೆಯ ಬೇಕು' ಎಂದು ಷರತ್ತು ವಿಧಿಸಿ ಹಾಡಿ ಕುಣಿದಿದ್ದ ರಾಧಿಕಾ ಪಂಡಿತ್, ಈಗ ನಿಜವಾಗಿಯೂ ನನಗೆ ಬೇಕೆನಿಸುತ್ತಿದೆ ಎಂದಿದ್ದಾರೆ.

ಸೀರಿಯಸ್ ಆಗಿ ಪರಿಗಣಿಸುವಂಥ ಮದುವೆ ಪ್ರಪೋಸಲ್ ಇನ್ನೂ ಬಂದಿಲ್ಲ. ನಾನು ಓದಿರುವುದು ಹುಡುಗಿಯರದ್ದೇ ಶಾಲೆ ಮತ್ತು ಕಾಲೇಜಿನಲ್ಲಿ ಆಗಿರುವುದರಿಂದ ಪ್ರೀತಿ, ಪ್ರೇಮ, ಪ್ರಣಯಕ್ಕೆಲ್ಲ ಅವಕಾಶ ಇರಲಿಲ್ಲ. ಆದರೂ ಒಬ್ಬ ಹುಡುಗ ನಾನು ಓದುತ್ತಿದ್ದ ಕಾಲೇಜಿನವರೆಗೂ ಬಂದು ಲವ್ ಲೆಟರ್, ಪುಟ್ಟದೊಂದು ಗಿಫ್ಟ್ ಹಿಡಿದುಕೊಂಡು ಪ್ರೀತಿ ನಿವೇದಿಸಿಕೊಂಡಿದ್ದ.

ಆದರೆ ಅದಕ್ಕೆಲ್ಲಾ ಮನ್ನಣೆ ಕೊಡದೆ ತಿರಸ್ಕರಿಸಿ ಬಿಟ್ಟೆ. ಪ್ರೀತಿ-ಗೀತಿ ಅಂತೆಲ್ಲ ಬೇಡ, ನಾವು ಬರೀ ಫ್ರೆಂಡ್ಸ್ ಆಗಿರೋಣ ಎಂದು ನಾನು ಹೇಳಿದ್ದೇ ತಡ. ಅತ ಗೋಳೋ ಅಂತ ಅಳೋದಿಕ್ಕೆ ಶುರು ಮಾಡಿದ. ಆಗ ನಾನು ಏನು ಮಾಡಬೇಕೆಂದು ತೋಚದೆ ಪೇಚಿಗೆ ಸಿಲುಕಿದೆ. ಈಗ ಅದನ್ನು ನೆನಸಿಕೊಂಡರೆ ತಮಾಷೆ ಅನ್ನಿಸುತ್ತೆ ಎಂದಿದ್ದಾರೆ ರಾಧಿಕಾ ಪಂಡಿತ್.

ಹಾಗಾದರೆ ನಿಮಗೆ ಎಂಥಾ ಹುಡುಗ ಬೇಕು ಎಂದಿದ್ದಕ್ಕೆ, ನನ್ನನ್ನು ಪ್ರೀತಿಸುವ ಹುಡುಗನಲ್ಲಿ ಮುಖ್ಯವಾಗಿ ಎಲ್ಲಕ್ಕೂ ಹೊಂದಿಕೊಂಡು ಹೋಗುವ ಸ್ವಭಾವ ಇರಬೇಕು. ಇತರರ ಕಷ್ಟ ಸುಖದಲ್ಲಿ ಭಾಗಿಯಾಗುವಂತಿರಬೇಕು. ನೋಡಲು ಹ್ಯಾಂಡ್ಸಮ್ ಮತ್ತು ಎತ್ತರವಾಗಿರಬೇಕು ಎಂದೂ ಅವರು ಕಂಡೀಷನ್ ಹಾಕಿದ್ದಾರೆ.

Share this Story:

Follow Webdunia kannada