Select Your Language

Notifications

webdunia
webdunia
webdunia
webdunia

ನಟಿ ಶೃತಿ- ಚಂದ್ರಚೂಡ ವಿವಾಹ ವಿವಾದ ಕೋರ್ಟ್ ಮುಂದೂಡಿಕೆ

ನಟಿ ಶೃತಿ- ಚಂದ್ರಚೂಡ ವಿವಾಹ ವಿವಾದ ಕೋರ್ಟ್ ಮುಂದೂಡಿಕೆ
ಬೆಂಗಳೂರು , ಶನಿವಾರ, 6 ಜುಲೈ 2013 (15:32 IST)
PR
ನಟಿ ಶೃತಿ ಹಾಗೂ ಚಂದ್ರಚೂಡ ಅವರ ವಿವಾಹ ರದ್ದುಕೋರಿ ಚಂದ್ರಚೂಡ ಅವರ ಮೊದಲ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಜುಲೈ 20ಕ್ಕೆ ಮುಂದೂಡಿದೆ.

ವಿವಾಹ ರದ್ದುಕೋರಿ ಚಂದ್ರಚೂಡ ಅವರ ಮೊದಲ ಪತ್ನಿ ಮಂಜೂಳಾ ಅವರು ನಗರದ ಎರಡನೇ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್ ಶೃತಿ ಹಾಗೂ ಚಂದ್ರಚೂಡ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ತುರ್ತು ನೋಟಿಸ್ ಜಾರಿ ಮಾಡಿತ್ತು.

ಆದರೆ ಇಂದು ಶೃತಿ ಹಾಗೂ ಚಂದ್ರಚೂಡ ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಅವರಿಗೆ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ.

ಮೊದಲನೆ ಪತಿ ನಿರ್ದೇಶಕ ಎಸ್.ಮಹೇಂದರ್ ಅವರಿಂದ ವಿಚ್ಛೇದನ ಪಡೆದಿದ್ದ ಶೃತಿ ಕಳೆದ ಜೂನ್ 6ರಂದು ಚಂದ್ರಚೂಡ ಅವರೊಂದಿಗೆ ಎರಡನೇ ಮದುವೆಯಾಗಿದ್ದರು. ಆದರೆ ಚಂದ್ರಚೂಡ ಅವರು ತಮ್ಮಿಂದ ವಿಚ್ಛೇದನ ಪಡೆಯದೇ ಎರಡನೇ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದ ಅವರ ಮೊದಲ ಪತ್ನಿ ಮಂಜೂಳಾ, ಅವರ ವಿವಾಹ ರದ್ದುಕೋರಿ ಅರ್ಜಿ ಸಲ್ಲಿಸಿದ್ದರು.

Share this Story:

Follow Webdunia kannada