Select Your Language

Notifications

webdunia
webdunia
webdunia
webdunia

ದಿಗಂತ್ ಫ್ರೆಂಡ್, ಲವ್ ಮ್ಯಾರೇಜ್ ಆಗ್ತೀನಿ: ಐಂದ್ರಿತಾ

ದಿಗಂತ್ ಫ್ರೆಂಡ್, ಲವ್ ಮ್ಯಾರೇಜ್ ಆಗ್ತೀನಿ: ಐಂದ್ರಿತಾ
SUJENDRA


ಆಗಾಗ ಗಾಸಿಪ್ ಕಾಲಂಗಳಲ್ಲಿ ಬರ್ತಿರೋ ಸುದ್ದಿಗಳನ್ನು ಓದಿ ಓದಿ ಸುಸ್ತಾಗಿರುವ ಐಂದ್ರಿತಾ ರೇ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ನನಗೆ ಗುಳಿಕೆನ್ನೆ ಚೆಲುವ ದಿಗಂತ್ ಜತೆ ಯಾವುದೇ ಸಂಬಂಧವಿಲ್ಲ, ನಾವಿಬ್ಬರೂ ಗುಡ್ ಫ್ರೆಂಡ್ಸ್, ಅಷ್ಟೇ. ಆದ್ರೂ ನಾನು ಲವ್ ಮ್ಯಾರೇಜ್ ಆಗೋದಂತೂ ಗ್ಯಾರಂಟಿ ಎಂದಿದ್ದಾರೆ.

ದಿಗಂತ್ ಜತೆ ಈಗ ಯಾವುದೇ ಸಂಬಂಧ ಇಲ್ಲ (ಮೊದಲು ಇತ್ತೇ?!) ಅಂತ ಐಂದ್ರಿತಾ ಹೇಳ್ತಿದ್ದಾರಾ? ಗೊತ್ತಿಲ್ಲ. ಯಾಕೆಂದರೆ ವರ್ಷದ ಹಿಂದೆ ಈ ಜೋಡಿಯ ಕಲರವ ಜೋರಾಗಿತ್ತು. ಎಲ್ಲೆಂದರಲ್ಲಿ ಜತೆಯಾಗಿಯೇ ಕಾಣಿಸುತ್ತಿದ್ದರು. ಕ್ರಿಕೆಟ್ ಪಂದ್ಯವಾಗಲೀ, ಗೋವಾನೇ ಆಗಲೀ, ಒಟ್ಟೊಟ್ಟಿಗೆ ಹೋಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗಿತ್ತು. ಆದರೂ, 'ಪಾರಿಜಾತ' ಚಿತ್ರದಿಂದಾಗಿ ಮತ್ತೆ ಸುದ್ದಿಯಲ್ಲಿದೆ.

webdunia
SUJENDRA


ಅದೇನೇ ಆದರೂ ಐಂದ್ರಿತಾ ಈ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ. ದಿಗಂತ್ ಮತ್ತು ನನ್ನ ನಡುವೆ ಏನೇನೋ ಇದೆ ಅನ್ನೋದು ಸುಳ್ಳು. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಹೌದು. ಒಟ್ಟಿಗೆ ನಟಿಸುವಾಗ ಇಂತಹ ಗಾಸಿಪ್ ಮಾಮೂಲಿ. ರೊಮ್ಯಾನ್ಸ್ ಕೂಡ ಮಾಡ್ತೀವಿ. ಆದರೆ ಸದ್ಯಕ್ಕೆ ನಾನು ಸಿಂಗಲ್ ಅಂತಾರೆ.

ಇಷ್ಟೆಲ್ಲ ಹೇಳಿದ ಮೇಲೂ ಐಂದ್ರಿತಾ ಆಗೋದು ಲವ್ ಮ್ಯಾರೇಜ್ ಅಂತೆ. ಆ ಜೋಡಿ ಯಾರೆಂದು ಹೇಳಲು ಅವರು ತಯಾರಿಲ್ಲ. ನಾನಿನ್ನೂ ಸಿಂಗಲ್, ಹಾಗೇನೂ ಇಲ್ಲ. ಮುಂದೆ ಆಗೋದು ಮಾತ್ರ ಲವ್ ಮ್ಯಾರೇಜ್ ಅಂತ ಸುಮ್ಮನಾಗ್ತಾರೆ.

webdunia
SUJENDRA


ವಾಲೆಂಟೈನ್ಸ್ ಡೇ ಬಂದಿದೆ. ಅದೇ ಕಾರಣದಿಂದ ಐಂದ್ರಿತಾ ವ್ಯಾಲೆಂಟೈನ್ಸ್ ಡೇಯನ್ನು ಬೆಂಬಲಿಸಿ ತನ್ನ ಅಭಿಮಾನಿ ಹುಡುಗಿಯರಿಗೆ ಕೆಲವೊಂದು ಟಿಪ್ಸ್‌ಗಳನ್ನೂ ಕೊಟ್ಟಿದ್ದಾರೆ. ಓದಿಕೊಳ್ಳಿ.

* ಹುಡುಗರಿಗೆ ಬುದ್ಧಿ ಇಲ್ಲ. ಹಾಗಾಗಿ ಹುಡುಗಿಯರು ಜಾಸ್ತಿ ಮಾತನಾಡಬಾರದು.
* ಪ್ರೀತಿಗೆ ಹೊತ್ತು-ಗೊತ್ತು ಇರೋದಿಲ್ಲ. ಹಾಗಾಗಿ ಅದಕ್ಕಾಗಿ ಕಾಯಬೇಡಿ. ಆತುರಪಡಬೇಡಿ.
* ಗ್ಲಾಮರಸ್ ಅಥವಾ ಸೆಕ್ಸಿಯಾಗಿರುವುದಕ್ಕಿಂತ ನೀಟಾದ ಡ್ರೆಸ್ ಹಾಕಿ.
* ನನ್ನಂತೆ ಸದಾ ಹಸನ್ಮುಖಿಯಾಗಿರಿ.
* ವೃತ್ತಿ ಮತ್ತು ಪ್ರೀತಿಯನ್ನು ಬ್ಯಾಲೆನ್ಸ್ ಮಾಡಲು ಕಲಿಯಿರಿ.
* ಪ್ರೀತಿಯ ಫೀಲ್ ವಿವರಿಸಲು ಸಾಧ್ಯವಿಲ್ಲ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada