Select Your Language

Notifications

webdunia
webdunia
webdunia
webdunia

ದರ್ಶನ್ 'ಬುಲ್ ಬುಲ್'ನಿಂದ 'ದುಬಾರಿ' ರಮ್ಯಾ ಔಟ್

ದರ್ಶನ್ 'ಬುಲ್ ಬುಲ್'ನಿಂದ 'ದುಬಾರಿ' ರಮ್ಯಾ ಔಟ್
PR
ಲಕ್ಕಿ ಸ್ಟಾರ್ ರಮ್ಯಾ 'ಬುಲ್ ಬುಲ್'ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ರೊಮ್ಯಾನ್ಸ್ ಮಾಡುವುದು ಬಹುತೇಕ ಖಚಿತವಾಗಿತ್ತು. ರಿಮೇಕ್ ಚಿತ್ರವಾಗಿದ್ದರೂ ಅದಕ್ಕೆ ತನ್ನದೇ ಆದ ಸಮರ್ಥನೆಯನ್ನು ಕೊಟ್ಟಿದ್ದರು ರಮ್ಯಾ. ಆದರೆ ಕೊನೆ ಕ್ಷಣದಲ್ಲಿ ರಮ್ಯಾ ಪ್ರೊಜೆಕ್ಟ್‌ನಿಂದ ಹೊರ ಬಿದ್ದಿದ್ದಾರೆ. ಕಾರಣ, ಕೇಳಿದಷ್ಟು ಸಂಭಾವನೆ ಕೊಡಲು ನಿರ್ಮಾಪಕರು ಸಿದ್ಧರಿರಲಿಲ್ಲ!

ರಮ್ಯಾ ಇತ್ತೀಚೆಗೆ ತೀರಾ ದುಬಾರಿಯಾಗಿರುವುದು ಗೊತ್ತೇ ಇದೆ. ಕೋಡಿ ರಾಮಕೃಷ್ಣ ನಿರ್ದೇಶನದ ಇನ್ನಷ್ಟೇ ಹೆಸರಿಡಬೇಕಿರುವ ಚಿತ್ರಕ್ಕೆ ಆಕೆ 54 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹೀಗಿರುವಾಗ 'ಬುಲ್ ಬುಲ್' ಟೀಮ್ ಕೂಡ ಹೆಚ್ಚು ಕಡಿಮೆ ಅಷ್ಟೇ ಕೊಡಬೇಕು ಎಂದು ರಮ್ಯಾ ರಚ್ಚೆ ಹಿಡಿದಿದ್ದರು.

ಆದರೆ ಇದಕ್ಕೆ 'ಬುಲ್ ಬುಲ್'ನ ನಿರ್ಮಾಪಕರು ರೆಡಿಯಿರಲಿಲ್ಲ. ಹೆಚ್ಚೆಂದರೆ 30 ಲಕ್ಷ ಕೊಡುತ್ತೇವೆ. ಇನ್ನೊಂದೆರಡು ಲಕ್ಷಕ್ಕೆ ಬೇಕಾದರೆ ಚೌಕಾಸಿ ಮಾಡಬಹುದು ಎಂಬ ಮನಸ್ಥಿತಿ ಅವರಲ್ಲಿತ್ತು. ಕ್ಯಾರೇ ಅನ್ನದ ರಮ್ಯಾ, ಬೇಡ; ದರ್ಶನ್ ಜತೆ ಇನ್ನೊಮ್ಮೆ ನಟಿಸುವ ಅವಕಾಶ ಸಿಗಬಹುದು. ನಾನು ಕಡಿಮೆ ಸಂಭಾವನೆಗೆ ಸಿಗೋದಿಲ್ಲ ಎಂದು ಹೊರ ನಡೆದಿದ್ದಾರೆ.

'ಬುಲ್ ಬುಲ್'ನಿಂದ ರಮ್ಯಾ ಹೊರ ಬೀಳುವುದಕ್ಕೆ ಸಂಭಾವನೆಯೇ ಕಾರಣ ಎನ್ನುವುದನ್ನು ರಮ್ಯಾ ಕಾರ್ಯದರ್ಶಿಯೂ ಖಚಿತಪಡಿಸಿದ್ದಾರೆ.

ಆದರೆ ರಮ್ಯಾ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 'ಬುಲ್ ಬುಲ್'ನಲ್ಲಿ ನಾನು ನಟಿಸುತ್ತಿಲ್ಲ. ದರ್ಶನ್ ಜತೆ ಇನ್ನೊಮ್ಮೆ ಯಾವತ್ತಾದರೂ ನಟಿಸುವ ಅವಕಾಶ ಸಿಗಬಹುದು ಎಂದಷ್ಟೇ ಟ್ವೀಟ್ ಮಾಡಿ ತನ್ನ ಕೆಲಸ ಮುಗಿಸಿದ್ದಾರೆ.

ತೆಲುಗಿನ 'ಡಾರ್ಲಿಂಗ್' ರಿಮೇಕನ್ನು ಕನ್ನಡದಲ್ಲಿ 'ಬುಲ್ ಬುಲ್' ಎಂದು ನಿರ್ದೇಶಿಸುತ್ತಿರುವುದು ಎಂ.ಡಿ. ಶ್ರೀಧರ್. ದರ್ಶನ್ ಸಹೋದರ ದಿನಕರ್ ತೂಗುದೀಪ ಸೇರಿದಂತೆ ಆರು ಮಂದಿ ಇದರ ನಿರ್ಮಾಪಕರು.

Share this Story:

Follow Webdunia kannada