Webdunia - Bharat's app for daily news and videos

Install App

ದರ್ಶನ್, ಪುನೀತ್ ಚಿತ್ರಗಳು ಬೇಕಂತಾರೆ ರಮ್ಯಾ

Webdunia
SUJENDRA
ಪ್ರಸಕ್ತ ಕನ್ನಡ ಚಿತ್ರರಂಗದ ಗೆಲ್ಲುತ್ತಿರುವ ಕುದುರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಜತೆ ಲಕ್ಕಿ ಸ್ಟಾರ್ ರಮ್ಯಾ ನಟಿಸಿರುವುದು ಒಂದೇ ಒಂದು ಚಿತ್ರದಲ್ಲಿ. ಇನ್ನೊಬ್ಬ ಪವರ್‌ಫುಲ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜತೆ ಕಾಣಿಸಿಕೊಂಡು ಐದು ವರ್ಷಗಳೇ ಕಳೆದಿವೆ. ಈ ಹೊತ್ತಲ್ಲಿ ರಮ್ಯಾಗೆ ಅವರ ಜತೆ ನಟಿಸುವ ಆಸೆಯಾಗಿದೆ.

ದರ್ಶನ್ ಜತೆ ರಮ್ಯಾ ನಟಿಸಿದ್ದು 'ದತ್ತ' ಎಂಬ ಚಿತ್ರದಲ್ಲಿ. 2006ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಅಷ್ಟೇನೂ ಸುದ್ದಿ ಮಾಡಿರಲಿಲ್ಲ. ಇನ್ನು ಪುನೀತ್‌ರ 'ಅಭಿ' ಮೂಲಕವೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಮ್ಯಾ, ನಂತರ ಆಕಾಶ್ ಮತ್ತು ಅರಸು ಎಂಬೆರಡು ಚಿತ್ರಗಳಲ್ಲಿ ಜೋಡಿಯಾಗಿದ್ದರು.

ಆದರೂ ಇತ್ತೀಚಿನ ದಿನಗಳಲ್ಲಿ ರಮ್ಯಾ ಸ್ಟಾರುಗಳನ್ನು ಬದಿಗಿಟ್ಟಿರುವಂತಿದೆ. ಹೆಚ್ಚಾಗಿ ಹೊಸಬರ ಜತೆಯೇ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಉದ್ದೇಶಪೂರ್ವಕವಾಗಿ ಅಲ್ಲ ಅಂತಾರವರು.

ನನಗೆ ಬಿಗ್ ಸ್ಟಾರುಗಳ ಜತೆ ಅಭಿನಯಿಸಲು ಅಭ್ಯಂತರವೇನಿಲ್ಲ. ದತ್ತ ಸಿನಿಮಾದ ನಂತರ ನಾನು ದರ್ಶನ್ ಜತೆ ನಟಿಸಿಲ್ಲ. ಪುನೀತ್ ಜತೆ ಅರಸು ಕೊನೆಯದು. ಇವರಿಬ್ಬರ ಜತೆ ಮತ್ತೆ ಕಾಣಿಸಿಕೊಳ್ಳಲು ಖುಷಿಯಿದೆ. ಅಂತಹ ಆಫರುಗಳು ಬಂದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ.

ರಮ್ಯಾ ಪ್ರಕಾರ ಕಥೆ ಉತ್ತಮವಾಗಿರಬೇಕು, ಅಷ್ಟೇ. ಆಗ ಅಲ್ಲಿ ಇತರ ಸಂಗತಿಗಳು ನಗಣ್ಯವಾಗಿ ಬಿಡುತ್ತವೆ. ಭಾರೀ ಬಜೆಟ್, ಅದ್ಧೂರಿ ಲೊಕೇಶನ್ನುಗಳು ಅಥವಾ ರಿಮೇಕ್ ಚಿತ್ರಗಳೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ತರುವುದಿಲ್ಲ. ಪ್ರಯೋಗಾತ್ಮಕ ಚಿತ್ರಗಳೂ ಜನರನ್ನು ಸೆಳೆಯುತ್ತವೆ. ಅದಕ್ಕೆ ಉದಾಹರಣೆ 'ಸಿದ್ಲಿಂಗು' ಅನ್ನೋದು ಅವರ ಮಾತು.

ಅದರಂತೆ 'ಲಕ್ಕಿ' ಕೂಡ ಹೊಸತನವಿರುವ ಕಥೆಯಂತೆ. ಅದರಲ್ಲೂ ವಿಭಿನ್ನವಾಗಿ ಚಿಂತಿಸುವ ಡಾ. ಸೂರಿಯಂತಹ ನಿರ್ದೇಶಕರಿಗೆ ಇಂತಹ ಚಿತ್ರಗಳು ಪ್ರೋತ್ಸಾಹ ನೀಡಿದಂತಾಗುತ್ತದೆ. ಖಂಡಿತಾ ಇದು ಎಲ್ಲಾ ಪ್ರೇಕ್ಷಕರಿಗೆ ಮೆಚ್ಚುಗೆಯಾಗಬಹುದಾದ ಚಿತ್ರವಂತೆ.

ಇನ್ನು ಯಶ್ ವಿವಾದದ ಚಾರಕ್ಕೆ ಬಂದಾಗ, ಯಾವುದೇ ಪ್ರತಿಕ್ರಿಯೆ ನೀಡಲು ರಮ್ಯಾ ನಿರಾಕರಿಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments