Select Your Language

Notifications

webdunia
webdunia
webdunia
webdunia

ತೂಕ ಕಳೆದುಕೊಳ್ಳುವವರ ಪಟ್ಟಿಯಲ್ಲಿ ಕೋಮಲ್

ತೂಕ ಕಳೆದುಕೊಳ್ಳುವವರ ಪಟ್ಟಿಯಲ್ಲಿ ಕೋಮಲ್
, ಗುರುವಾರ, 4 ಜುಲೈ 2013 (14:44 IST)
PR
ಇತ್ತೀಚೆಗಷ್ಟೇ ನಟಿ ಅಮೂಲ್ಯ, ಸಂಜನಾ, ರಾಗಿಣಿ, ಪ್ರಿಯಾಮಣಿ ಒಬ್ಬರಾದ ಬಳಿಕ ಒಬ್ಬರಂತೆ ತೂಕ ಇಳಿಸಿಕೊಂಡಿದ್ದು ಸುದ್ದಿಯಾಗಿತ್ತು. ಮಹಿಳಾಮಣಿಗಳ ಈ ಅಂಟುರೋಗ ಇದೀಗ ನಟರಿಗೂ ಹರಡಿದಂತಿದೆ. ಕೋಮಲ್ ಈ ಬಾರಿ ಸಾಹಸಕ್ಕೆ ಕೈಹಾಕಿದ್ದಾರೆ.

ಈಗಾಗಲೇ ಏಳು ಕೆಜಿ ತೂಕ ಕಳೆದುಕೊಂಡಿರುವ ಕೋಮಲ್ ಇನ್ನು ಒಂದು ತಿಂಗಳಲ್ಲಿ 20ಕೆಜಿ ತೂಕ ಕಡಿಮೆ ಮಾಡಿಕೊಳ್ಳಲಿದ್ದಾರಂತೆ. ಅದಕ್ಕಾಗಿ ಅವರು ಮಾಡಿದ್ದಿಷ್ಟೇ ಅಂತೆ. ತೂಕ ಹೇಗೆ ಕಡಿಮೆ ಮಾಡಿಕೊಳ್ಳುತ್ತೀರಿ ಎಂದು ಕೆಲವರನ್ನು ಪ್ರಶ್ನಿಸಿದಾಗ ಹೊಸೂರು ರಸ್ತೆಯಲ್ಲಿ ಒಳ್ಳೆಯ ವೈದ್ಯರೊಬ್ಬರು ಇದ್ದಾರೆ ಎಂದು ಹೇಳಿದರಂತೆ. ಪ್ರತಿನಿತ್ಯ ಅವರ ಬಳಿ 7 ಸಾವಿರ ಮಂದಿ ತೂಕ ಕಡಿಮೆ ಮಾಡುವ ಸಲಹೆ ಪಡೆಯಲು ಹೋಗುತ್ತಾರೆ ಎಂದು ತಿಳಿಯಿತು. ಸರಿ ಎಂದುಕೊಂಡು ನಾನೂ ಹೋದೆ. ನನ್ನನ್ನು ಪರೀಕ್ಷಿಸಿದ ವೈದ್ಯರು ಇನ್ನು ಮುಂದೆ ಹಾಲು ಕುಡಿಯಬೇಡಿ, ಜೊತೆಗೆ ಸಿಗರೇಟ್ ಕೂಡಾ ಸೇದಬೇಡಿ ಎಂದರು. ಇದರಲ್ಲಿ ಎರಡನೆಯದು ಬಹಳ ಕಷ್ಟ ಡಾಕ್ಟ್ರೆ ಎಂದೆ. ಎಲ್ಲಾ ಕೊಂಚ ದಿನ ಮಾತ್ರ. ನಿಧಾನಕ್ಕೆ ಎಲ್ಲವೂ ಸರಿಹೋಗುತ್ತೆ ಎಂದರು. ಅದರಂತೆ ಹಾಲು ಕುಡಿಯುವುದನ್ನು ಬಿಟ್ಟೆ. ಅದೇನೂ ಕಷ್ಟ ಎನಿಸಲಿಲ್ಲ. ಆದರೆ ಸಿಗರೇಟು...ಸಾಧ್ಯವೇ ಇಲ್ಲ ಎನಿಸುತ್ತಿತ್ತು. ಏನಾದರಾಗಲಿ ಎಂಬಂತೆ ಒಂದು ದಿನ ಸೇದುವುದನ್ನು ಬಿಟ್ಟೆ. ಮರುದಿನ ವಾಂತಿ ಮಾಡಿಕೊಂಡೆ. ಆ ಬಳಿಕ ಸಿಗರೇಟು ಸೇದಿದ್ದೇ ಇಲ್ಲ ಎಂದು ಹೆಮ್ಮೆಯಿಂದ ಬೀಗುತ್ತಾರೆ ಕೋಮಲ್.

Share this Story:

Follow Webdunia kannada