Select Your Language

Notifications

webdunia
webdunia
webdunia
webdunia

ತಿಲಕ್ ಈಗ ಮೇಘನಾ ಗಾಂವ್ಕರ್ ಬಾಯ್ ಫ್ರೆಂಡ್ ಅಲ್ವೇ?

ತಿಲಕ್ ಈಗ ಮೇಘನಾ ಗಾಂವ್ಕರ್ ಬಾಯ್ ಫ್ರೆಂಡ್ ಅಲ್ವೇ?
PR
'ಚಾರ್‌ಮಿನಾರ್' ನಾಯಕಿ ಮೇಘನಾ ಗಾಂವ್ಕರ್ ಮತ್ತು 'ಗಂಡ ಹೆಂಡತಿ' ಬ್ಯಾಡ್‌ಬಾಯ್ ತಿಲಕ್ ಇಬ್ಬರ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂದು ಹರಿದಾಡುತ್ತಿದ್ದ ಸುದ್ದಿಗಳು ಇದ್ದಕ್ಕಿದ್ದಂತೆ ಜೀವ ಕಳೆದುಕೊಂಡಿವೆ. ಇಬ್ಬರೂ ಈಗ ದೂರವಾಗಿದ್ದು, ಬೇರೊಬ್ಬ ಹುಡುಗನ ಜತೆ ಮೇಘನಾ ಸುತ್ತಾಡುತ್ತಿದ್ದಾರಂತೆ!

ಈ ಹಿಂದಾಗಿದ್ದರೆ ಎಲ್ಲೇ ಹೋಗುವುದಿದ್ದರೂ ಮೇಘನಾ ಜತೆ ತಿಲಕ್ ಇರುತ್ತಿದ್ದರು. ಪಾರ್ಟಿಗಳಲ್ಲಿ, ಪ್ರೀಮಿಯರ್ ಶೋಗಳಲ್ಲಿ ಇಬ್ಬರೂ ಜತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ತಿಲಕ್ ಮತ್ತು ಮೇಘನಾ ಎಲ್ಲೂ ಜತೆಯಾಗಿ ಕಾಣಿಸುತ್ತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಮೇಘನಾ ಜತೆ ಯಾರೋ ಒಬ್ಬ ಕೂರ್ಗ್ ಹುಡುಗ ಓಡಾಡುತ್ತಿದ್ದಾನೆ ಎಂದು ಗುಲ್ಲು ಹರಡಿದೆ.

ಮೂಲಗಳ ಪ್ರಕಾರ, ತಿಲಕ್ ಜತೆಗಿನ ಸಂಬಂಧವನ್ನು ಸ್ವತಃ ಮೇಘನಾರೇ ಕಡಿದುಕೊಂಡರಂತೆ. ಮೊದಲನೆಯದಾಗಿ ತಿಲಕ್ ಸ್ವಭಾವವೇ ಮೇಘನಾಗೆ ಅಷ್ಟೊಂದು ಹಿಡಿಸುತ್ತಿರಲಿಲ್ಲ. ಎರಡನೆಯದಾಗಿ, ತಿಲಕ್‌ಗೆ ಚಿತ್ರರಂಗದಲ್ಲಿ ಅವಕಾಶವೇ ಸಿಗುತ್ತಿಲ್ಲ. 'ಗಂಡಹೆಂಡತಿ'ಯಲ್ಲಿ ನಾಯಕನಾದರೂ, ನಂತರ ಎಲ್ಲೋ ಸಣ್ಣಪುಟ್ಟ ಖಳನಟರ ಪಾತ್ರಗಳಿಗೆ ಸೀಮಿತರಾಗುತ್ತಿದ್ದಾರೆ. ಹಾಗಾಗಿ ದೂರ ಸರಿದರು ಎಂದು ಹೇಳಲಾಗುತ್ತಿದೆ.

ಅಷ್ಟಕ್ಕೂ ತಿಲಕ್ ನನ್ನ ಬಾಯ್ ಫ್ರೆಂಡ್ ಅಲ್ಲ. ಜಸ್ಟ್ ಫ್ರೆಂಡ್ ಆಗಿದ್ದ. ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದೂ ಮೇಘನಾ ಎಲ್ಲೋ ಮಾತನಾಡಿದ್ದಾರಂತೆ. ಅಂತೂ ಇಬ್ಬರೂ ಈಗ ಜತೆಯಾಗಿಲ್ಲ, ಅವರ ನಡುವಿನ ಸಂಬಂಧ ಹಿಂದಿನಂತಿಲ್ಲ ಅನ್ನೋದು ನಿಜ. ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಮೇಘನಾ ಮಾತನಾಡಿಲ್ಲ. ಪರ್ಸನಲ್ ವಿಷಯಗಳನ್ನು ಹಂಚಿಕೊಳ್ಳುವುದು ಎಲ್ಲರಂತೆ ಅವರಿಗೂ ಇಷ್ಟವಿಲ್ಲ.

ಅಂದ ಹಾಗೆ, ಮೇಘನಾ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅವರು ನಾಯಕಿಯಾಗಿದ್ದ 'ಚಾರ್‌ಮಿನಾರ್' ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿದೆ. ಪ್ರೇಕ್ಷಕರಿಂದಲೂ ಚೆನ್ನಾಗಿರುವ ಪ್ರತಿಕ್ರಿಯೆ ಬಂದಿದೆ. ನಾಯಕ ಪ್ರೇಮ್ ಮತ್ತು ನಿರ್ದೇಶಕ ಆರ್.ಚಂದ್ರು ಕೂಡ ಸಖತ್ ಸಂತೋಷದಲ್ಲಿದ್ದಾರಂತೆ.

Share this Story:

Follow Webdunia kannada