Select Your Language

Notifications

webdunia
webdunia
webdunia
webdunia

ತರ್ಲೆ ನನ್ ಮಕ್ಳು ಜೊತೆಗೆ ಶ್ರೀನಗರ ಕಿಟ್ಟಿ

ತರ್ಲೆ ನನ್ ಮಕ್ಳು ಜೊತೆಗೆ ಶ್ರೀನಗರ ಕಿಟ್ಟಿ
, ಮಂಗಳವಾರ, 11 ಫೆಬ್ರವರಿ 2014 (09:28 IST)
PR
ನಾಗಶೇಖರ್, ಯತಿರಾಜ್, ಶುಭ ಪೂಂಜಾ ಮತ್ತು ಅಂಜನ ದೇಶ ಪಾಂಡೆ ನಟಿಸುತ್ತಿರುವ ತರ್ಲೆ ನನ್ ಮಕ್ಳು ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಸಹ ಭಾಗಿಯಾಗುತ್ತಾರೆ ಎನ್ನುವುದರ ಬಗ್ಗೆ ನಾವು ಈಗಾಗಲೇ ತಿಳಿಸಿದ್ದೆವು. ಇತ್ತೀಚೆಗೆ ಕಿಟ್ಟಿ ನೈಸ್ ರೋಡ್ ನಲ್ಲಿ ನಡೆದ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು .
ಈ ಚಿತ್ರವನ್ನು ರಾಕೇಶ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕ್ಲೈಮಾಕ್ಸ್ ಸಮಯದಲ್ಲಿ ಕಿಟ್ಟಿಯ ಆಗಮನ ಆಗುತ್ತದೆ. ಅದನ್ನು ವಿಶೇಷವಾಗಿ ಸಿದ್ಧ ಮಾಡಿದ್ದಾರಂತೆ ನಿರ್ದೇಶಕರು.

ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಜೋರು ಮಳೆಗೂ ಚಾನ್ಸ್ ! ಅಂದರೆ ಆಗ ಜೋರಾಗಿ ಮಳೆ ಬರ್ತಾ ಇರುತ್ತೆ.. ಜೊತೆಗೆ ಕ್ಲೈಮ್ಯಾಕ್ಸ್ ಸಹ ನಡೆಯುತ್ತಿರುತ್ತದೆ.ಸೂರ್ಯವಂಶಿ ಸಂಗೀತ ಮತ್ತು ಜೆರಾಲ್ಡ್ ಛಾಯಾಗ್ರಹಣ ಹೊಂದಿರುವ ಈ ಚಿತ್ರದಲ್ಲಿ ಜಗ್ಗೇಶ್ ಪುತ್ರ ಯತೀಶ್ ಅದೃಷ್ಟ ಪರೀಕ್ಷೆ ಆಗಲಿದೆ!

Share this Story:

Follow Webdunia kannada