Select Your Language

Notifications

webdunia
webdunia
webdunia
webdunia

ಜೋಗಯ್ಯ: ಕನ್ನಡಕ್ಕೆ ಪ್ರಿಯಾಂಕಾ ಛೋಪ್ರಾ, ವಿದ್ಯಾ ಬಾಲನ್?

ಜೋಗಯ್ಯ: ಕನ್ನಡಕ್ಕೆ ಪ್ರಿಯಾಂಕಾ ಛೋಪ್ರಾ, ವಿದ್ಯಾ ಬಾಲನ್?
IFM
ಪ್ರೀತಿ ಏಕೆ ಭೂಮಿ ಮೇಲಿದೆ? ಚಿತ್ರಕ್ಕಾಗಿ ಮಲ್ಲಿಕಾ ಶೆರಾವತ್ ಎಂಬ ಸೆಕ್ಸೀ ಬೆಡಗಿಯನ್ನು ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕುಣಿಸಿದ, ರಾಜ್ ಚಿತ್ರಕ್ಕಾಗಿ ನಿಶಾ ಕೊಠಾರಿಯೆಂಬ ಸೆಕ್ಸೀ ತಾರೆಯನ್ನು ಚಿತ್ರವಿಡೀ ಗ್ಲಾಮರಸ್ ಆಗಿಯೇ ಬಿಂಬಿಸಿದ ನಿರ್ದೇಶಕ ಪ್ರೇಮ್ ಇದೀಗ ಪ್ರಿಯಾಂಕಾ ಛೋಪ್ರಾಳನ್ನು ಕನ್ನಡಕ್ಕೆ ಕರೆತರಲು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ.

ಜೋಗಿ ಭಾಗ ಎರಡು ಎಂದೇ ಪ್ರಸಿದ್ಧಿ ಪಡೆದಿರುವ ಪ್ರೇಮ್ ಅವರ ಮುಂದಿನ ಚಿತ್ರ ಜೋಗಯ್ಯ ಚಿತ್ರದ ಒಂದು ಹಾಡಿಗಾಗಿ ಪ್ರಿಯಾಂಕಾ ಛೋಪ್ರಾರನ್ನು ಕುಣಿಸಲು ಎಲ್ಲ ತಯಾರಿಗಳ್ನೂ ಪ್ರೇಮ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರೇಮ್, ಪ್ರಿಯಾಂಕಾ ಛೋಪ್ರಾರ ಸಿನಿಮಾ ಮ್ಯಾನೇಜರ್ ಜೊತೆಗೆ ಈ ಬಗ್ಗೆ ಪ್ರಯತ್ನ ಮಾಡುತ್ತಿದ್ದೇನೆ. ಶಿವರಾಜ್ ಕುಮಾರ್ ಅಭಿನಯದ ಜೋಗಯ್ಯ ಸಿನಿಮಾಕ್ಕಿಗಾಗಿ ಆಕೆಯನ್ನು ಕರೆತರಲು ಯತ್ನ ಮಾಡುತ್ತಿದ್ದೇನೆ. ಆಕೆಯ ಮ್ಯಾನೇಜರ್ ಆಕೆಯ ಡೇಟ್ಸ್ ಹೊಂದಿಸಲು ಪ್ರಯತ್ನ ಪಡುತ್ತಿದ್ದಾರೆ. ಈ ಹಾಡು ತುಂಬ ಸ್ಟೈಲಿಶ್ ಹಾಡಾಗಿದ್ದು, ಅದಕ್ಕೆ ಬಾಲಿವುಡ್ಡಿನಲ್ಲಿ ಪ್ರಿಯಾಂಕಾ ಛೋಪ್ರಾ ಹೊರತು ಬೇರಾರೂ ಫಿಟ್ ಆಗೋದಿಲ್ಲ. ಹಾಗಾಗಿ ಆಕೆಗಾಗಿ ಯತ್ನ ನಡೆಸುತ್ತಿದ್ದೇನೆ ಎಂದು ಪ್ರೇಮ್ ತಿಳಿಸಿದ್ದಾರೆ.
webdunia
IFM


ನಾಯಕನೇನೋ ಶಿವರಾಜ್ ಕುಮಾರ್ ಸರಿ, ಹಾಗಾದರೆ ಜೋಗಯ್ಯ ಚಿತ್ರದ ನಾಯಕಿ ಯಾರು? ಜೋಗಿ ಚಿತ್ರದ ನಾಯಕಿ ಜೆನಿಫರ್ ಕೋತ್ವಾಲ್ ಜೋಗಿ-2 (ಜೋಗಯ್ಯ)ಕ್ಕೂ ನಾಯಕಿಯಾಗಿ ಆರಿಸೋದಿಲ್ವಾ ಎಂದರೆ ಪ್ರೇಮ್, ನನಗೆ ಜೋಗಯ್ಯ ಚಿತ್ರಕ್ಕೆ ಈಗ ಯಶಸ್ಸಿನ ಉತ್ತುಂಗದಲ್ಲಿರುವಂಥ ನಟಿ ಬೇಕಿತ್ತು. ಆದರೂ, ಬಾಲಿವುಡ್ಡಿನ ವಿದ್ಯಾ ಬಾಲನ್ ಥರಹದ ನಾಯಕಿಯ ಅಗತ್ಯವಿದೆ. ಆಕೆಯನ್ನೂ ನಾಯಕಿಯಾಗಿ ಕರೆತರಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಥಟ್ಟನೆ ಉತ್ತರಿಸುತ್ತಾರೆ.

ಆದರೂ, ಕನ್ನಡದಲ್ಲೂ ಸದ್ಯಕ್ಕೆ ಹೊಸ ಹೊಸ ನಾಯಕಿಯರು ಚಿಗುರೊಡೆಯುತ್ತಿದ್ದಾರೆ. ಹಾಗಾಗಿ ಅವರಲ್ಲೇ ಯಾರಾದರೊಬ್ಬರನ್ನು ಆಯ್ಕೆ ಮಾಡುವ ಯೋಚನೆಯೂ ಇದೆ. ಸದ್ಯಕ್ಕಿನ್ನೂ ನಾಯಕಿಯ ಆಯ್ಕೆ ನಡೆದಿಲ್ಲ ಎಂದು ಪ್ರೇಮ್ ತಿಳಿಸಿದ್ದಾರೆ. ಈ ಚಿತ್ರವನ್ನು ಪ್ರೇಮ್ ಪತ್ನಿ ರಕ್ಷಿತಾ ನಿರ್ಮಿಸುತ್ತಿದ್ದಾರೆ. ಪ್ರೀತಿ ಏಕೆ ಭೂಮಿ ಮೇಲಿದೆ? ಚಿತ್ರದ ನಂತರ ಮತ್ತೊಮ್ಮೆ ನಿರ್ಮಾಣಕ್ಕಿಳಿದಿರುವ ಪ್ರೇಮ್ ರಕ್ಷಿತಾ ಜೋಡಿಗೆ ಈ ಬಾರಿಯಾದರೂ ಜೋಗಯ್ಯದ ಮೂಲಕ ಗೆಲ್ಲುತ್ತಾರೋ ಕಾಯಬೇಕು.

Share this Story:

Follow Webdunia kannada