Webdunia - Bharat's app for daily news and videos

Install App

ಜಾಲಿಬಾರು ಮತ್ತು ಪೋಲಿ ಹುಡುಗರು ಚಿತ್ರದಲ್ಲಿ ಕೃಷ್ಣ

Webdunia
ಶನಿವಾರ, 12 ಅಕ್ಟೋಬರ್ 2013 (14:12 IST)
PR
ಜಾಲಿಬಾರು ಮತ್ತು ಪೋಲಿ ಹುಡುಗರು ಎಂಬ ಹೆಸರಿನ ಶೀರ್ಷಿಕೆಯಡಿ ಚಿತ್ರವೊಂದು ತಯಾರಾಗುತ್ತಿದೆ. ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಜನಪ್ರಿಯ ಕವಿತೆ ಜಾಲಿಬಾರಿನಲ್ಲಿ ಕೂತು ಪೋಲಿ ಗೆಳೆಯರು, ಹಾಡಿನಿಂದ ಈ ಶೀರ್ಷಿಕೆ ಆಯ್ದುಕೊಳ್ಳಲಾಗಿದೆ. ಇವೆರಡೂ ಯುವ ಸಮೂಹಕ್ಕೆ ಅನ್ವರ್ಥದಂತಿರುವ ಪದಗಳು. ಇಲ್ಲಿ ಹಾಸ್ಯ ಹಾಗೂ ರೋಚಕತೆ ಸಮಾನವಾಗಿ ಬೆರೆತಿದ್ದು ಇದನ್ನು ರಸವತ್ತಾಗಿ ಬಡಿಸುವ ಯೋಜನೆ ನಿರ್ದೆಶಕ ಶ್ರೀಧರ್ ಅವರದ್ದು.

ಕವಿತೆಯಲ್ಲಿ ಬರುವ ಗೋಪಿ, ಗಾಂಡಲೀನ ಪಾತ್ರಗಳು ಚಿತದಲ್ಲಿವೆ. ಮೂಲಕವಿತೆಯೊಂದಿಗೆ ಮತ್ತು ಚಿತ್ರ ಶೀರ್ಷಿಕೆಯೊಂದಿಗೆ ಸಂಬಂಧ ಬೆಸೆದಿರುವ ಬಿಆರ್ಎಲ್ ತಮ್ಮ ಕವಿತೆಯ ಜನಪ್ರಿಯತೆ ಮತ್ತು ಹುಟ್ಟನ್ನು ಮೆಲುಕು ಹಾಕಿದರು. ನಾನು ಟ್ಯೂನ್ ಕೇಳಿ ಹಾಡು ಬರೆಯುವುದಿಲ್ಲ. ಈ ಚಿತ್ರಕ್ಕೆ ಸಾಲ ಸಾಲ ಎಂಬ ಹಾಡನ್ನು ಬರೆದಿದ್ದು ನಿರ್ದೆಶಕರೇ ಸೂಕ್ತವಾದ ರಾಗ ಸಂಯೋಜನೆ ಮಾಡಿಸಿದ್ದಾರೆ ಎಂದರು.

ನಮ್ಮ ಚಿತ್ರಕ್ಕೆ ಲಕ್ಷ್ಮಣ್‌ರಾವ್ ಅವರ ಜಾಲಿಬಾರಿನಲ್ಲಿ...ಕವಿತೆಯೇ ಚಿತ್ರಕ್ಕೆ ಮೊದಲ ಪ್ರೇರಣೆ. ಇದು ಪದ್ಯಕ್ಕೆ ಮಾತ್ರ ಜೀವ ತುಂಬಿಲ್ಲ, ಚಿತ್ರದ ಪಾತ್ರಗಳನ್ನೂ ಜೀವಂತವಾಗಿರಿಸಿದೆ ಎಂದರು ನಿರ್ದೆಶಕ ಶ್ರೀಧರ್. ಚಿತ್ರ ಕಾಮಿಡಿಯಾಗಿದ್ದರೂ ನನ್ನ ಪಾತ್ರ ಮಾಸ್ ಆಗಿದೆ ಎಂದರು ನಾಯಕ ಕೃಷ್ಣ. ಚಿತ್ರದ ನಾಯಕಿಯಾಗಿ ಮಾನಸಿ ಆಯ್ಕೆಯಾಗಿದ್ದಾರೆ. ವೀರ್ಸಮರ್ಥ ಸಂಗೀತ ನಿರ್ದೆಶನ ಮಾಡಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments