Select Your Language

Notifications

webdunia
webdunia
webdunia
webdunia

ಚೆಲ್ಲಾಟದ ರೇಖಾ ಜತೆ ಜಾಲಿಬಾಯ್ ದಿಗಂತ್!

ಚೆಲ್ಲಾಟದ ರೇಖಾ ಜತೆ ಜಾಲಿಬಾಯ್ ದಿಗಂತ್!
PR
'ಮಿಸ್ ಕ್ಯಾಲಿಫೋರ್ನಿಯಾ' ಚಿತ್ರದಿಂದ ತಮ್ಮ ಚಿತ್ರಜೀವನವನ್ನು ಆರಂಭಿಸಿದ ದಿಗಂತ್ ಆರಂಭಿಕ ಹಂತದಲ್ಲಿ ಒಂದಷ್ಟು ಸರ್ಕಸ್ ಮಾಡಿದ್ದು ನಿಜ. ಆದರೆ 'ಮುಂಗಾರು ಮಳೆ' ಚಿತ್ರದಲ್ಲಿ ಒಂದು ಚಿಕ್ಕ-ಚೊಕ್ಕ ಪಾತ್ರವನ್ನು ನಿರ್ವಹಿಸಿದ ದಿಗಂತ್ ತನ್ಮೂಲಕ ನಿರ್ದೇಶಕ ಯೋಗರಾಜ್ ಭಟ್ಟರ ಅಚ್ಚುಮೆಚ್ಚಿನ ನಾಯಕನೆನಿಸಿಬಿಟ್ಟರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಂತರ ಬಿಡುಗಡೆಯಾದ ಭಟ್ಟರ 'ಗಾಳಿಪಟ' ಚಿತ್ರದಲ್ಲಿನ ಮೂವರು ನಾಯಕರ ಪೈಕಿ ಒಬ್ಬನಾಗುವ ಅದೃಷ್ಟ ದಿಗಂತ್‌ಗೆ ದಕ್ಕಿತು. ನೀತೂ ಜೊತೆಯಲ್ಲಿ ಅವರು ನಿರ್ವಹಿಸಿದ ಪಾತ್ರವು ಎಷ್ಟೊಂದು ಕ್ಲಿಕ್ ಆಯಿತೆಂದರೆ ಕೆಲದಿನಗಳವರೆಗೆ ಅವರನ್ನು ದೂಧ್ ಪೇಡಾ ಎಂದೇ ಕರೆಯಲಾಗುತ್ತಿತ್ತು.

ಯೋಗರಾಜ್ ಭಟ್ಟರು ನಂತರ ನಿರ್ದೇಶಿಸಿದ 'ಮನಸಾರೆ' ಚಿತ್ರದಲ್ಲಿ ದಿಗಂತ್‌ಗೆ ಮತ್ತೊಂದು ಅವಕಾಶ ನೀಡಿದರು. ಈ ಚಿತ್ರವೂ ಯಶಸ್ವಿಯಾಗಿದ್ದರಿಂದ ಅವರಿಬ್ಬರ ಕಾಂಬಿನೇಷನ್ ಸಹ ಕ್ಲಿಕ್ ಆಯಿತು. ನಂತರ ಬಂದದ್ದೇ 'ಪಂಚರಂಗಿ' ಚಿತ್ರ. ಅದು ಯಾವ ಮಟ್ಟದ ಯಶಸ್ಸನ್ನು ದಾಖಲಿಸಿತು ಎಂದು ಹೇಳಬೇಕಿಲ್ಲ.

ಹೀಗೆ ಸರಣಿಯಲ್ಲಿ ಯಶಸ್ವೀ ಚಿತ್ರಗಳನ್ನು ನೀಡುತ್ತಿರುವ ದಿಗಂತ್‌ರ ಮತ್ತೊಂದು ಚಿತ್ರ 'ಜಾಲಿಬಾಯ್' ಶುಕ್ರವಾರ ತೆರೆ ಕಾಣುತ್ತಿದ್ದು ಇದು ಯಶಸ್ಸಿನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದಲ್ಲಿ ಅವರ ನಾಯಕಿ ರೇಖಾ. ಈಕೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಲ್ಲಿ 'ಚೆಲ್ಲಾಟ', 'ಹುಡುಗಾಟ' ಚಿತ್ರಗಳಲ್ಲಿ ನಾಯಕಿಯಾಗಿದ್ದವರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಕೆ.ಮಂಜು ನಿರ್ಮಾಣದ ಈ ಚಿತ್ರವನ್ನು ಡಿ.ಸಭಾಪತಿ ನಿರ್ದೇಶಿಸಿದ್ದಾರೆ. ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ. ಬೆಸ್ಟ್ ಆಫ್ ಲಕ್ ದಿಗಂತ್.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada