Select Your Language

Notifications

webdunia
webdunia
webdunia
webdunia

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಗಂಗರಾಜು ಆಯ್ಕೆ

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಗಂಗರಾಜು ಆಯ್ಕೆ
, ಮಂಗಳವಾರ, 29 ಅಕ್ಟೋಬರ್ 2013 (11:19 IST)
PR
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶನಿವಾರ ನಡೆದ ವಾಷರ್ಷೀಕ ಚುನಾವಣೆಯಲ್ಲಿ ಮಂಡಳಿಯ ಅಧ್ಯಕ್ಷರಾಗಿ ವಿತರಕ ವಲಯದ ಎಚ್.ಡಿ. ಗಂಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2013-14ರ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಂಗರಾಜು ಜೊತೆ ಕೆ.ಜಾನಕಿರಾಮ್, ಜಿ.ಕೆ. ಕುಟ್ಟಿ ನಾಮಪತ್ರ ಸಲ್ಲಿಸಿದ್ದರು. ಆದರೆ ಗಂಗರಾಜು ಮತ್ತು ಮಂಡಳಿಯ ಕೆಲ ಪದಾಧಿಕಾರಿ, ಸದಸ್ಯರ ಮನವಿ ಮೇಲೆ ಅವರಿಬ್ಬರು ನಾಮಪತ್ರ ಹಿಂದಕ್ಕೆ ಪಡೆದಿದ್ದರು.

ಮಂಡಳಿಯ ಇತರ ಪ್ರಮುಖ ಸ್ಥಾನಗಳ ಉಪಾಧ್ಯಕ್ಷ ಕಾರ್ಯದರ್ಶೀ, ಖಚಾಂಚಿ ಸ್ಥಾನಗಳಿಗೆ ನಿರ್ಮಾಪಕ ವಲಯದಿಂದ ಬಿ.ಎನ್. ಗಂಗಾಧರ್, ವಿತರಕರ ವಲಯದಿಂದ ಎನ್.ಎಂ. ಸುರೇಶ್ ಹಾಗೂ ಪ್ರದರ್ಶಕರ ವಲಯದಿಂದ ಜಯರಾಜ್ ಗುಬ್ಬಿ ಆಯ್ಕೆಯಾಗಿದ್ದಾರೆ. ಮಂಡಳಿಯ ಕಾರ್ಯದಶರ್ಿಗಳಾಗಿ ನಿರ್ಮಾಪಕರ ವಲಯದಿಂದ ಸಾ.ರಾ.ಗೋವಿಂದ್, ವಿತರಕರ ವಲಯದಿಂದ ನವಶಕ್ತಿ ನಾಗರಾಜ್, ಪ್ರದರ್ಶಕರ ವಲಯದಿಂದ ಥಾಮಸ್ ಡಿಸೋಜಾ ಆಯ್ಕೆಯಾಗಿದ್ದಾರೆ. ನಿರ್ಮಾಪಕ ಮಹದೇವ್ ಖಚಾಂಚಿಯಾಗಿದ್ದಾರೆ. ಅಧ್ಯಕ್ಷರಾದ ಬಳಿಕ ಮಾತನಾಡಿದ ಎಚ್.ಡಿ. ಗಂಗರಾಜು, ಎಲ್ಲರಲ್ಲೂ ಒಮ್ಮತ ತಂದು ಒಗ್ಗಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಜೊತೆಗೆ ಸ್ಯಾಟಲೈಟ್ ಪ್ರದರ್ಶನದ ದರವನ್ನು ಏಕರೂಪ ಮಾಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ . ಈ ಅಧ್ಯಕ್ಷ ಗಾದಿ ಒಂದು ವರ್ಷದ ಅವಧಿಯದ್ದಾಗಿದ್ದು ಈ ಹಿಂದೆ ವಿಜಯ್ಕುಮಾರ್ ಅಧ್ಯಕ್ಷರಾಗಿದ್ದರು.

Share this Story:

Follow Webdunia kannada