Select Your Language

Notifications

webdunia
webdunia
webdunia
webdunia

ಗಾನಕೋಗಿಲೆ ಜಾನಕಮ್ಮ ಮತ್ತೆ ಕನ್ನಡ ಸಿನಿಮಾದಲ್ಲಿ ಹಾಡುತ್ತಾರಾ?!

ಗಾನಕೋಗಿಲೆ ಜಾನಕಮ್ಮ ಮತ್ತೆ ಕನ್ನಡ ಸಿನಿಮಾದಲ್ಲಿ ಹಾಡುತ್ತಾರಾ?!
, ಸೋಮವಾರ, 13 ಜನವರಿ 2014 (12:35 IST)
PR
PR
ನಿಜ , ಎಸ್ ಜಾನಕಿ ಅಲಿಯಾಸ್ , ಗಾನಕೋಗಿಲೆ ಜಾನಕಮ್ಮ ಏಳು ವರ್ಷಗಳ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಹಾಡಲು ಬಂದು ಹಾಡಿ ಹೋಗಿದ್ದಾರೆ. ಪಲ್ಲಕ್ಕಿ ಖ್ಯಾತಿಯ ನರೇಂದ್ರ ಬಾಬು ಅವರ ಪಲ್ಲಕ್ಕಿ2 ನಲ್ಲಿ ಜಾನಕಮ್ಮ ಕಂಠದ ಸವಿ ಮತ್ತೊಮ್ಮೆ ಆಲಿಸುವ ಸೌಭಾಗ್ಯ ಕನ್ನಡಿಗರಿಗೆ! ಗಿರಿಧರ್ ದಿವಾನ್ ಈ ಚಿತ್ರದ ಸಂಗೀತ ನಿರ್ದೇಶಕ. ಇವರ ಪ್ಯಾಥೊ ಟ್ಯೂನ್ ಕೇಳಿದ ನರೇಂದ್ರ ಬಾಬು ಅವರಿಗೆ ಈ ಗೀತೆಯನ್ನು ಜಾನಕಮ್ಮ ಹಾಡಿಸಬೇಕು ಎಂದನಿಸಿ ಚೆನ್ನೈ ಗೆ ಹೋಗಿ ಕೇಳಿದಾಗ ಗಾನಕೋಗಿಲೆಯಿಂದ ಸಮ್ಮತಿ ದೊರೆತು ಅವರು ಹಾಡಿಯೂ ಆಯಿತು. ಗಿರಿಧರ್ ದಿವಾನ್‌ಗೆ ಹೇಳಲಾಗದಷ್ಟು ಖುಷಿ. ಎಪ್ಪತ್ತೈದರ ಹರೆಯದ ಜಾನಕಮ್ಮ ಆರಾಮ ಕನ್ನಡ ಹಾಡಿದ್ದು ಅವರಿಗೆ ಹೆಮ್ಮೆ ಅನ್ನಿಸಿತಂತೆ!

'ಪಲ್ಲವಿ, ಚರಣಗಳನ್ನು ಬ್ರೇಕ್ ಕೊಡದಂತೆ ಇಡಿ ಇಡಿಯಾಗಿ ಒಂದೇ ಒಂದು ರಿಪೀಟ್ ಟೇಕ್ ಕೂಡಾ ಇಲ್ಲದಂತೆ ಫಟಾಫಟ್ ಹಾಡಿ ಮುಗಿಸಿದ್ದನ್ನು ಇನ್ನೂ ನಂಬಲಾಗ್ತಾ ಇಲ್ಲ. ಇದನ್ನು ನೋಡಿ ಪ್ರತಿ ಯುವ ಗಾಯಕರೂ ಕಲಿಯಬೇಕಿದೆ. ಎನ್ನುವ ರೋಮಾಂಚನ ಗಿರಿಧರ್ ಅವರಿಗಾಗಿದೆ. ಈಗಾಗಲೇ ಯೂಟ್ಯೂಬಲ್ಲಿ ಜಾನಕಿ ಅವರು ಹಾಡಿರುವ ಹಾಡಿನ ಮೇಕಿಂಗ್ ವೀಡಿಯೊ ಲಭ್ಯವಿದೆ.

Share this Story:

Follow Webdunia kannada