Webdunia - Bharat's app for daily news and videos

Install App

ಗಣೇಶ್-ಪ್ರಿಯಾಮಣಿ 'ಏನೋ ಒಂಥರಾ' ವ್ಯಥೆ ಮುಗಿದಿದೆಯಂತೆ!

Webdunia
MOKSHA
ನಾಲ್ಕು ವಾರದ ಹಿಂದೆ ಬಿಡುಗಡೆ ಎಂದು ಹೇಳಿಸಿಕೊಂಡು ನಂತರ ಅನಿವಾರ್ಯ ಕಾರಣದಿಂದ ಮುಂದೆ ಹೋಗಿದ್ದ 'ಏನೋ ಒಂಥರಾ' ಚಿತ್ರ ಇದೇ ತಿಂಗಳ 29ಕ್ಕೆ ಬಿಡುಗಡೆ ಅಗಲಿದೆ.

ಅದಾಗಲೇ ಚಿತ್ರದ ಬಿಡುಗಡೆ ತಡವಾಗಿದೆ. ಹೀಗಿರುವಾಗ ಬಿಡುಗಡೆ ದಿನ ಘೋಷಣೆ ಆದ ಮೇಲೆ ಏಕಾಏಕಿ ನಿಂತು ಒಂದೂವರೆ ತಿಂಗಳು ತಡವಾಗಿ ಬಿಡುಗಡೆ ಆಗುವ ಅಗತ್ಯ ಏನಿತ್ತು ಎನ್ನುವುದು ಇಂದಿಗೂ ಜನರಿಗೆ ತಿಳಿದಿಲ್ಲ.

ಅದೇ ಚಿತ್ರ ಬಿಡುಗಡೆ ಮುನ್ನಾದಿನ ಸಹೃದಯಯರ ಜತೆ ಚಿತ್ರ ವೀಕ್ಷಿಸುವ ಪರಿಪಾಠ ಇದೆಯಂತಲ್ಲ. ಅಲ್ಲಿ ಒಂದಿಷ್ಟು ಬದಲಾವಣೆ ಮಾಡಬೇಕು ಅನ್ನಿಸಿದರೆ ಮಾಡುತ್ತಾರೆ ಅನ್ನುವ ಸುದ್ದಿ ಇದೆ. ಅದೇ ರೀತಿ ಈ ಚಿತ್ರವೂ ಆಯಿತೇನೋ, ಇರಲಿ ಇನ್ನಷ್ಟು ಉತ್ತಮವಾಗಿ ಮೂಡಿ ಬರುತ್ತದೆ ಅಂದರೆ ಒಂದೂವರೆ ತಿಂಗಳು ಕಾಯೋಣ ಅನ್ನುತ್ತಿದ್ದಾರೆ ಗಾಂಧಿನಗರದ ಜನ.

ಇಷ್ಟೆಲ್ಲಾ ಆಗಿ ಒಂದು ಹಿಟ್ ಚಿತ್ರದ ನೀರೀಕ್ಷೆಯಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಒಂದು ಹಿಟ್ ಚಿತ್ರ ಬೇಕೇ ಬೇಕಾಗಿದೆ. ಇತ್ತೀಚೆಗೆ ಚಿತ್ರದ ಹೊರತಾಗಿ ಬೇರೆ ವಿವಾದದಲ್ಲೇ ಹೆಚ್ಚು ಸುದ್ದಿಯಾಗುತ್ತಿರುವ ಗಣೇಶ್ ಈ ಚಿತ್ರದಲ್ಲಿ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಈ ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್ ಎಂಬುದು ವಿವಾದಗಳಿಂದಲೇ ಎಲ್ಲರಿಗೂ ತಿಳಿದು ಹೋಗಿದೆ.

' ಕೂಲ್' ಚಿತ್ರದ ವಿವಾದ ಸಂಪೂರ್ಣ ಬಗೆಹರಿಸಿಕೊಂಡಿರುವ ಗಣೇಶ್, ಈ ಚಿತ್ರದಲ್ಲಿ ಸಾಕಷ್ಟು ಸ್ಟಂಟ್, ಗಿಮಿಕ್‌ಗಳನ್ನು ಪ್ರದರ್ಶಿಸಿದ್ದಾರಂತೆ. ಅದನ್ನು ನೋಡಲು ಜನ ಚಿತ್ರ ಮಂದಿರಕ್ಕೆ ಬಂದೇ ಬರುತ್ತಾರೆ ಅನ್ನುವ ವಿಶ್ವಾಸ ಅವರಿಗೆ. ಈ ಚಿತ್ರ ತಮಿಳಿನಿಂದ (ಖುಷಿ) ತೆಲುಗು, ಹಿಂದಿ ನಂತರ ಕನ್ನಡಕ್ಕೂ ಬರುತ್ತಿರುವುದು ವಿಶೇಷ.

ಚಿತ್ರದಲ್ಲಿನ ತಮಿಳು ಮೂಲದ ಟ್ಯೂನ್‌ಗೆ ಒಂದಿಷ್ಟು ಬಣ್ಣ ಬಳಿದು ಕೊಂಚ ಹೊಸದಾಗಿ ನೀಡುವ ಯತ್ನವನ್ನು ಸಂಗೀತ ನಿರ್ದೇಶಕ ಹರಿಕೃಷ್ಣ ಮಾಡಿದ್ದಾರೆ. ಗಣೇಶ್‌ಗೆ ನಾಯಕಿಯಾಗಿ ಪ್ರಿಯಾಮಣಿ ಅಭಿನಯವಿದೆ. ಜೈಜಗದೀಶ್, ಶರಣ್, ಶ್ರೀನಿವಾಸಮೂತಿ, ವಿಜಯಲಕ್ಷ್ಮಿ ಸಿಂಗ್, ತೇಜಸ್ವಿನಿ ಮತ್ತಿತರರು ಜತೆಗಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments