Webdunia - Bharat's app for daily news and videos

Install App

ಖುಷಿಯ ಅಲೆಯಲ್ಲಿ ರಾಧಿಕಾ ಪಂಡಿತ್

Webdunia
MOKSHENDRA
ರಾಧಿಕಾ ಪಂಡಿತ್ ಫುಲ್ ಖುಷಿಯಾಗಿ ಕನಸಿನ ಲೋಕದಲ್ಲಿ ತೇಲಾಡುತ್ತಿದ್ದಾರೆ. ಇವರ ಸಂತೋಷಕ್ಕೆ ಕಾರಣವೇನೆಂದರೆ, ಇತ್ತೀಚೆಗಷ್ಟೇ ಬಿಡುಗಡೆಯಾದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಚಿತ್ರದಲ್ಲಿನ ಇವರ ಅಭಿನಯಕ್ಕೆ ಗಾಂಧೀನಗರದ ಹಿರಿಯ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಿರಿಯ ಕಲಾವಿದರಿಗೆ ಇತ್ತೀಚೆಗಷ್ಟೆ ವಿಶೇಷವಾಗಿ ಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಹಾಗೂ ಇನ್ನೂ ಹಲವು ಕಲಾವಿದರು, ನಿರ್ದೇಶಕರು ಪಾಲ್ಗೊಂಡಿದ್ದರು. ಚಿತ್ರ ವೀಕ್ಷಿಸಿದ ವಿಷ್ಣುವರ್ಧನ್, ರಾಧಿಕಾ ಪಂಡಿತ್ ಅವರ ಮುಗ್ದ ಹುಡುಗಿ ಅಭಿನಯವನ್ನು ಕೊಂಡಾಡಿದ್ದಾರೆ. ಹಾಗೆ ರಾಧಿಕಾ ಅವರೊಂದಿಗೆ ಮಾತನಾಡಿ ಆಕೆಯ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರಂತೆ. ರಾಧಿಕಾ, ನನಗೆ ವಿಷ್ಣು ಸರ್ ಕಾಲ್ ಮಾಡಿದ್ರು ಎಂದು ನಂಬಲು ಸಾಧ್ಯವೇ ಆಗುತ್ತಿಲ್ಲ. ಚಿತ್ರದಲ್ಲಿ ನಟನೆಯನ್ನು ತುಂಬಾ ಚೆನ್ನಾಗಿ ಮಾಡಿದ್ದೀಯಾ ಎಂದು ಚಿತ್ರದ ಕೆಲ ತುಣುಕನ್ನು ವಿವರಿಸಿದರು ಎಂದು ಒಂದೇ ಉಸಿರಿನಲ್ಲಿ ವಿವರಿಸುತ್ತಾರೆ.

ನನಗೆ ಗೊತ್ತಿತ್ತು ಚಿತ್ರ ಅದ್ಬುತವಾಗಿ ಮೂಡಿ ಬರುತ್ತೆ ಎಂದು. ಆದರೆ ಚಿತ್ರದಲ್ಲಿ ರುಕ್ಮಿಣಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನಾ ಎಂಬ ಅಳುಕು ಒಂದು ಕಡೆ ಇತ್ತು. ಕನ್ನಡ ಚಿತ್ರರಂಗ ನನ್ನ ಅಭಿನಯವನ್ನು ಕೊಂಡಾಡಿದೆ. ಅದರಲ್ಲೂ ವಿಷ್ಣು ಸರ್ ಅವರ ಅಭಿನಂದನೆ ನನಗೆ ಹೇಳಿಕೊಳ್ಳಲಾಗದಷ್ಟು ಸಂತೋಷವಾಗಿದೆ. ಇಂಥಾ ಒಳ್ಳೆ ಅಭಿನಯಕ್ಕೆ ಅವಕಾಶ ಮಾಡಿಕೊಟ್ಟ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಕಾಗದು ಎಂದರು.

ಈ ಹಿಂದೆ ಅಭಿನಯಿಸಿದ ಮೊಗ್ಗಿನ ಮನಸ್ಸು ಚಿತ್ರಕ್ಕೆ ಇಷ್ಟು ಮೆಚ್ಚುಗೆ ಬಂದಿರಲಿಲ್ಲ. ಆದರೆ ಒಲವೇ ಜೀವನ ಲೆಕ್ಕಾಚಾರ ಚಿತ್ರದಲ್ಲಿ ಅಂದುಕೊಂಡಿದ್ದಕ್ಕಿಂತ ಮೀರಿ ಪ್ರಶಂಸೆ ಸಿಗುತ್ತಿದೆ ಎಂದರು. ಈ ಚಿತ್ರದಲ್ಲಿ ಪಾಪದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಪ್ರಶಾಂತ್ ನಿರ್ದೇಶನ ಮಾಡುತ್ತಿರುವ ಲವ್ ಗುರು ಚಿತ್ರದಲ್ಲಿ ಫುಲ್ ಗ್ಲಾಮರಸ್ ಪಾತ್ರವಂತೆ. ಇವರ ಸ್ಟೈಲ್, ಲುಕ್ಕು ಎಲ್ಲಾ ಡಿಫರೆಂಟಾಗಿದೆಯಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments