Webdunia - Bharat's app for daily news and videos

Install App

'ಕೊಲವೆರಿ ಡಿ' ಆಯ್ತು, ಈಗ 'ಪ್ಯಾರ್‌ಗೆ ಆಗ್ಬಿಟ್ಟೈತಿ'..!

Webdunia
SUJENDRA
ಯೂಟ್ಯೂಬ್‌ನಲ್ಲಿ ಕನ್ನಡ ಹಾಡೊಂದಕ್ಕೆ 85,000ಕ್ಕೂ ಹೆಚ್ಚು ಹಿಟ್ ಸಿಗೋದಂದ್ರೆ ಸುಲಭನಾ? ಅದೂ ಅಪ್‌ಲೋಡ್ ಮಾಡಿದ ಕೇವಲ ಐದೇ ದಿನದಲ್ಲಿ. ಹೌದು, ಕನ್ನಡದ ಸಿನಿಮಾ ಹಾಡೊಂದು ಇಂತಹ ಸಾಧನೆ ಮಾಡಿದೆ. ಕೋಮಲ್ ಕುಮಾರ್ ನಾಯಕರಾಗಿರುವ 'ಗೋವಿಂದಾಯ ನಮಃ' ಚಿತ್ರದ 'ಪ್ಯಾರ್‌ಗೆ ಆಗ್ಬಿಟ್ಟೈತಿ...' ಎಂಬ ಹಾಡು ಹೀಗೆ ಗಲಭೆ ಎಬ್ಬಿಸುತ್ತಿದೆ.

ಕೆಲವು ಹಾಡುಗಳೇ ಹಾಗೆ. ಯಾವಾಗ, ಹೇಗೆ ಹಿಟ್ಟಾಗುತ್ತೆ ಅನ್ನೋದನ್ನು ಊಹಿಸುವುದೂ ಸಾಧ್ಯವಾಗೋದಿಲ್ಲ. ಹಿಟ್ಟಾದರೂ ಈ ಪರಿಯ ಹಿಟ್ ಯಾರೂ ನಿರೀಕ್ಷಿಸಿರೋದಿಲ್ಲ. ಅದೇ ಭಾವದಲ್ಲಿದೆ 'ಗೋವಿಂದಾಯ ನಮಃ' ಚಿತ್ರತಂಡ. ಕೊಂಚ ಡಿಫರೆಂಟ್ ಆಗಿರಲಿ ಅಂತ ಹಳೆಯ ಶೈಲಿಯಲ್ಲಿ ಹಾಡನ್ನು ಮಾಡಿರುವುದು ಹೌದಾದರೂ, ಹೀಗೆ ಕ್ರೇಜ್ ಎಬ್ಬಿಸುತ್ತದೆ ಅಂತ ಯಾರೂ ಅಂದುಕೊಂಡಿರಲಿಲ್ಲ.

' ಪ್ಯಾರ್‌ಗೆ ಆಗ್ಬಿಟ್ಟೈತಿ ನಮ್ದೂಕೆ ಜಾನ್‌ಗೆ ಹೋಗ್ಬಿಟ್ಟೈತಿ...' ಹಾಡು ಈ ಪರಿ ಹಿಟ್ಟಾಗಲು ಕಾರಣವೇನು? ಹಳೆಯ ಸಂಗೀತ, ಅದಕ್ಕೆ ತಕ್ಕಂತೆ ಉರ್ದು-ಕನ್ನಡ ಮಿಶ್ರಿತ ಸಾಹಿತ್ಯ, ಹಳೆಯ ಕಾಲಕ್ಕೆ ಹೊಂದಾಣಿಕೆಯಾಗುವ ಲುಕ್, ಹಾಡು ಹೇಳಿರುವ ಶೈಲಿ. ಈ ಎಲ್ಲವೂ ಸೇರಿಕೊಂಡು ವೀಕ್ಷಕರನ್ನು ಗಿಟ್ಟಿಸಿಕೊಳ್ಳುತ್ತಿದೆ.

ಈ ಹಾಡಿನ ಸಾಹಿತ್ಯ ಬರೆದಿರುವುದು ಚಿತ್ರದ ನಿರ್ದೇಶಕ ಪವನ್ ಒಡೆಯರ್. ಗುರುಕಿರಣ್ ನೀಡಿರುವ ಸಂಗೀತಕ್ಕೆ ದನಿಯಾಗಿರುವುದು ಚೇತನ್ ಮತ್ತು ಇಂದು ನಾಗರಾಜ್. ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆ ಕೇಳುತ್ತಿರುವ ಗುರುಕಿರಣ್ ಕಾಲುಗಳು ನೆಲದಲ್ಲಿಲ್ಲ. ಇಡೀ ಚಿತ್ರತಂಡವೇ ಫುಲ್ ಜೋಶ್‌ನಲ್ಲಿದೆ. ಇದನ್ನೇ ಚಿತ್ರದ ಯಶಸ್ಸಿನ ಮೊದಲ ಹೆಜ್ಜೆ ಅಂತ ನಿರ್ಮಾಪಕ ಸುರೇಶ್ ಪೂರ್ತಿಯಾಗಿ ನಂಬಿದ್ದಾರೆ.

ಈ ಹಾಡಿನಲ್ಲಿ ಕೋಮಲ್‌ಗೆ ನಾಯಕಿಯಾಗಿರೋದು ಯಾರು ಗೊತ್ತಾ? ಪಕ್ಕನೆ ನೋಡಿದರೆ ಬಾಲಿವುಡ್ ಸುಂದರಿಯಿರಬೇಕು ಅಂತ ಯಾರಾದರೂ ಹೇಳಬಹುದು. ಆದರೆ ಅದು ನಿಜವಲ್ಲ. ಜಾರ್ಜಿಯಾದ ಅನಾ ಎಂಬಾಕೆಯೇ ಇಲ್ಲಿ ಹೀರೋಯಿನ್.

ಇನ್ನೇನು ಬಿಡುಗಡೆಯಾಗಲಿರುವ 'ಗೋವಿಂದಾಯ ನಮಃ' ಚಿತ್ರದ ಹಾಡು ಇಷ್ಟೊಂದು ಹಿಟ್ಟಾಗಿರುವುದು ಕನ್ನಡ ಚಿತ್ರರಂಗ ಹೆಮ್ಮೆ ಪಡಬೇಕಾದ ಸಂಗತಿಯೇ ಸರಿ. ಇನ್ಯಾಕೆ ತಡ, ಆ ಹಾಡನ್ನು ನೋಡಿಲ್ಲ-ಕೇಳಿಲ್ಲವೆಂದಾದರೆ ಯೂಟ್ಯೂಬ್‌ನಲ್ಲಿ ನೀವೂ ಜಾಲಾಡಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments