Webdunia - Bharat's app for daily news and videos

Install App

ಕೂಸಿಗೆ ಮೊದಲೇ ಕುಲಾವಿ: 'ಬಚ್ಚನ್ 2' ಟ್ರೇಲರ್ ರಿಲೀಸ್!

Webdunia
ಸೋಮವಾರ, 13 ಮೇ 2013 (15:22 IST)
PR
ಸಿನಿಮಾ ಇನ್ನೇನು ಚಿತ್ರೀಕರಣ ಶುರುವಾಗುತ್ತದೆ ಎನ್ನುವಾಗ ಅಥವಾ ಶುರುವಾದ ನಂತರ ಟ್ರೇಲರ್, ಪ್ರೋಮೋ, ಟೀಸರ್ ಬಿಡುಗಡೆ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಶೂಟಿಂಗ್‌ಗೆ ಇನ್ನೂ ಎರಡು ವರ್ಷಗಳಿವೆ ಎಂಬ ಹೊತ್ತಿನಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ಉದಾಹರಣೆ ಇದೆಯೇ?!

ಇಲ್ಲವೆಂದೇ ಹೇಳಬೇಕು. ಬಹುಶಃ ಈ ಹಿಂದೆ ಇಂತಹ ಪ್ರಯತ್ನ ಯಾರೂ ಮಾಡಿದಂತಿಲ್ಲ. ಆದರೆ 'ಬಚ್ಚನ್' ಟೀಮ್ ಮಾಡಿದೆ. 'ಬಚ್ಚನ್' ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡಿರುವ ಶಶಾಂಕ್, 2015ರಲ್ಲಿ 'ಬಚ್ಚನ್ 2' ಮಾಡುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಟ್ರೇಲರ್ ಕೂಡ ಬಿಡುಗಡೆ ಮಾಡಿದ್ದಾರೆ.

ಬಚ್ಚನ್ ಚಿತ್ರಕ್ಕೆ 'ಆಂಗ್ರಿ ಯಂಗ್ ಮ್ಯಾನ್ ಬ್ಯಾಕ್' ಎಂಬ ಟ್ಯಾಗ್‌ಲೈನ್ ಇತ್ತು. ಆದರೆ 'ಬಚ್ಚನ್ 2' ಚಿತ್ರಕ್ಕೆ 'ಆಂಗ್ರಿ ಯಂಗ್ ಮ್ಯಾನ್ ರಿಟರ್ನ್ಸ್' ಎಂಬ ಅಡಿಬರಹ ನೀಡಲಾಗಿದೆ. ಎರಡು ವರ್ಷದ ಬ್ರೇಕ್‌ನ ನಂತರ ಮುಂದುವರಿದ ಭಾಗ ಬರಲಿದೆ. ಚಿತ್ರದಲ್ಲಿ ಯಾರೆಲ್ಲ ಇರುತ್ತಾರೆ, ಕಥೆ ಮುಂತಾದುವು ಆ ಸಮಯಕ್ಕೆ ನಿರ್ಧರಿಸಲಾಗುತ್ತದೆ ಎಂದು ಶಶಾಂಕ್ ತಿಳಿಸಿದ್ದಾರೆ.

' ಬಚ್ಚನ್' ಏಪ್ರಿಲ್ 11ರಂದು ಬಿಡುಗಡೆಯಾಗಿತ್ತು. ಅದೇ ದಿನಾಂಕವನ್ನು 'ಬಚ್ಚನ್ 2' ಟ್ರೇಲರ್‌ಗೆ ಬಳಸಿಕೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಭರತ್ ಆಲಿಯಾಸ್ ಬಚ್ಚನ್‌ನನ್ನು ನ್ಯಾಯಾಲಯ ಬಿಡುಗಡೆ ಮಾಡಲು ಆದೇಶಿಸುತ್ತದೆ ಎಂದು ತೀರ್ಪು ಹೊರ ಬೀಳುತ್ತಿದ್ದಂತೆ ಸುದೀಪ್ ಕುಟುಂಬವನ್ನು ಸೇರಿಕೊಳ್ಳುತ್ತಾರೆ. ಅಷ್ಟು ಹೊತ್ತಿಗೆ ಪೇಪರ್ ಮಾರುವ ಹುಡುಗ 'ಕೋಟಿ ಕೋಟಿ ಲೂಟಿ..' ಎಂಬ ಶೀರ್ಷಿಕೆಯಿರುವ ಪತ್ರಿಕೆಯನ್ನು ಮಾರಲು ಬರುತ್ತಾನೆ. ಅದರತ್ತ ದಿಟ್ಟಿಸಿ ಮತ್ತೆ ಗಂಭೀರವದನನಾಗುತ್ತಾರೆ ಬಚ್ಚನ್. ಅಲ್ಲಿಗೆ ಟ್ರೇಲರ್ ಮುಕ್ತಾಯ.

ಅಂದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬಚ್ಚನ್ ಮುಂದುವರಿಸಲಿದ್ದಾರೆ ಎಂಬ ಸಂದೇಶವನ್ನು ಟ್ರೇಲರ್ ಮೂಲಕ ನೀಡಲಾಗಿದೆ.

ಸದ್ಯ ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ನಂತರ ಬೇರೆ ಒಪ್ಪಿಕೊಂಡ ಪ್ರಾಜೆಕ್ಟ್‌ಗಳನ್ನು ಮುಗಿಸುತ್ತಾರೆ. ಅಷ್ಟರಲ್ಲಿ ಶಶಾಂಕ್ ಕೂಡ ಒಂದೆರಡು ಚಿತ್ರಗಳನ್ನು ನಿರ್ದೇಶಿಸುತ್ತಾರೆ. ನಂತರವಷ್ಟೇ ಬಚ್ಚನ್ 2 ಚಿತ್ರಕ್ಕೆ ಯೋಜನೆ. ಅದುವರೆಗೆ ಬಚ್ಚನ್ ಮೆಚ್ಚಿಕೊಂಡವರು ಮುಂದುವರಿದ ಭಾಗದ ನಿರೀಕ್ಷೆಯಲ್ಲೇ ಇರಬಹುದು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments