Select Your Language

Notifications

webdunia
webdunia
webdunia
webdunia

ಕಿಲಾಡಿ ಕಿಟ್ಟಿ ಜತೆ ಹಂಪಿಯಲ್ಲಿ ಹರಿಪ್ರಿಯಾ ರೊಮ್ಯಾನ್ಸ್

ಕಿಲಾಡಿ ಕಿಟ್ಟಿ ಜತೆ ಹಂಪಿಯಲ್ಲಿ ಹರಿಪ್ರಿಯಾ ರೊಮ್ಯಾನ್ಸ್
SUJENDRA
ಆತ ಕಳ್ಳ ಕಿಟ್ಟಿ, ಅದೇ ಕಾರಣದಿಂದ 'ಕಿಲಾಡಿ ಕಿಟ್ಟಿ' ಎಂದು ಹೆಸರು ಪಡೆಯುತ್ತಾನೆ. ಕೃತ್ಯ ಏನೇ ಆಗಿದ್ದರೂ ಆತನ ಉದ್ದೇಶ ಮಾತ್ರ ಒಳ್ಳೆಯದಾಗಿರುತ್ತದೆ. ಜನಸೇವೆಗಾಗಿ ಆತ ಕಳ್ಳನಾಗಿರುತ್ತಾನೆ. ಆತನಿಗೆ ಸಾಥ್ ಕೊಡೋ ಹುಡುಗಿಯೇ ಹರಿಪ್ರಿಯಾ. ಇಬ್ಬರ ನಡುವಿನ ರೊಮ್ಯಾನ್ಸ್‌ಗೀಗ ಹಂಪಿ ಸಾಕ್ಷಿಯಾಗಿದೆ.

ಹೌದು, ಅನಂತರಾಜು ನಿರ್ದೇಶನದ 'ಕಿಲಾಡಿ ಚಿತ್ರ'ದ ಸುದ್ದಿಯಿದು. ಇಲ್ಲಿ ಶ್ರೀನಗರ ಕಿಟ್ಟಿಗೆ ಹರಿಪ್ರಿಯಾ ನಾಯಕಿ. ಇತ್ತೀಚೆಗಷ್ಟೇ ಹಂಪಿಯಲ್ಲಿ ಹಾಡೊಂದರ ಚಿತ್ರೀಕರಣ ನಡೆದಿದೆ.

ಕನ್ನಡದ ಜನಪ್ರಿಯ ರೊಮ್ಯಾನ್ಸ್ ಹಾಡುಗಳನ್ನು ಹಾಡಿಯೇ ಹೆಸರು ಮಾಡಿರುವ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸಾಹಿತ್ಯ ಒದಗಿಸಿರುವುದು ಯೋಗರಾಜ್ ಭಟ್. ಅಂದ ಮೇಲೆ ಕೇಳಬೇಕೇ? ಹಾಡು ಸಖತ್ ರೊಮ್ಯಾಂಟಿಕ್ ಆಗಿರೋದಂತೂ ಗ್ಯಾರಂಟಿ.

ಕಿಲಾಡಿ ಕಿಟ್ಟಿಯಲ್ಲಿ ಹರಿಪ್ರಿಯಾ ಒಬ್ಬರೇ ನಾಯಕಿಯಲ್ಲ. ಕೃಷ್ಣಸುಂದರಿ ಸ್ಮಿತಾ ಕೂಡ ಇದ್ದಾರಂತೆ. ಇದು ತೆಲುಗಿನ 'ಬ್ಲೇಡ್ ಬಾಬ್ಜಿ' ರಿಮೇಕ್ ಅನ್ನೋದು ನಿಮಗೂ ಗೊತ್ತಿರಲಿ. ಮೂಲ ಚಿತ್ರದಲ್ಲಿ ಅಲ್ಲಾರಿ ನರೇಶ್, ಸಯಾಲಿ ಭಗತ್ ನಾಯಕ-ನಾಯಕಿಯಾಗಿದ್ದರು.

ಆದರೆ ಮೂಲ ಚಿತ್ರಕ್ಕೂ ಕನ್ನಡ ರಿಮೇಕ್‌ಗೂ ವ್ಯತ್ಯಾಸಗಳಿವೆ ಅಂತಿದ್ದಾರೆ ನಿರ್ದೇಶಕ ಅನಂತರಾಜು. ತೆಲುಗಿನಿಂದ ಹಾಗೆಯೇ ಭಟ್ಟಿ ಇಳಿಸುತ್ತಿಲ್ಲವಂತೆ. ಈಗ ಆಗಿರೋ ಬದಲಾವಣೆಗಳು ಮತ್ತು ಅವರದ್ದೇ ಹೊಸ ಐಡಿಯಾಗಳನ್ನು ಚಿತ್ರಕ್ಕೆ ಸೇರಿಸಿದ್ದಾರಂತೆ. ಖಂಡಿತಾ ಕನ್ನಡದ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Share this Story:

Follow Webdunia kannada