Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ನಟನೆಯ ಬಚ್ಚನ್ ತೆಲುಗು ಅವತರಣಿಕೆ ಯಾವಾಗ ರಿಲೀಸ್ ಆಗುತ್ತೆ ಅಂದ್ರೆ !

ಕಿಚ್ಚ ಸುದೀಪ್ ನಟನೆಯ ಬಚ್ಚನ್ ತೆಲುಗು ಅವತರಣಿಕೆ ಯಾವಾಗ ರಿಲೀಸ್ ಆಗುತ್ತೆ ಅಂದ್ರೆ !
, ಶನಿವಾರ, 19 ಏಪ್ರಿಲ್ 2014 (09:52 IST)
PR
ಕಿಚ್ಚ ಸುದೀಪ್ ನಟನೆಯ ಕನ್ನಡದ ಬಚ್ಚನ್ ಸಿನಿಮಾ ಈಗ ತೆಲುಗಲ್ಲೂ ಸಹ ಪ್ರದರ್ಶಿತ ಆಗಲು ಸಿದ್ಧತೆ ನಡೆಸಿದೆ ಟ್ರಾಫಿಕ್, ವೀರುಡೊಕ್ಕಡೆ ಚಿತ್ರಗಳ ಬಳಿಕ ಭೀಮವರಮ್ ಟಾಕೀಸ್ ಲಾಂಛನದ ಅಡಿಯಲ್ಲಿ ರಾಮಸತ್ಯನಾರಾಯಣ ಅವರು ಬಚ್ಚನ್ ಚಿತ್ರ ನೀಡುತ್ತಿದ್ದಾರೆ.

ಈಗ ಚಿತ್ರದಲ್ಲಿ ಅಪರೂಪದ ಖಳ ನಾಯಕ ನಟನೆಯ ಮೂಲಕ ತೆಲುಗು ಭಾಷಿಕ ಪ್ರೇಕ್ಷಕರ ಮನ ಗೆದ್ದಿರುವ ಸುದೀಪ್ ಬಚ್ಚನ್ ಮುಖಾಂತರ ನಾಯಕರಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಜೊತೆ ಜಗಪತಿ ಬಾಬು, ಬೋಮ್ಮಾಲಿ ರವಿಶಂಕರ್, ಭಾವನ, ತುಲೀಪ್ ಜೋಷಿ ಮುಂತಾದವರು ನಟಿಸಿದ್ದಾರೆ. ಶಶಾಂಕ್ ನಿರ್ದೇಶನ, ವಿ. ಹರಿಕೃಷ್ಣ ಸಂಗೀತ ಚಲ್ಲ ಭಾಗ್ಯಲಕ್ಷ್ಮಿ ಸಾಹಿತ್ಯ ಇರುವ ಈ ಚಿತ್ರದ ವೀಡಿಯೋ ಇತ್ತೀಚೆಗೆ ಹೈದರಾಬಾದ್ನಲ್ಲಿ ಬಿಡುಗಡೆ ಕಂಡಿತು. ಟಾಲಿವುಡ್ ಹಿರಿಯನಟ ಶ್ರೀಕಾಂತ್ ಆಡಿಯೋ ಬಿಡುಗಡೆ ಮಾಡಿದರು.

ಕನ್ನಡದಲ್ಲಿ ಪ್ರೇಕ್ಷಕರ ಮನ ಗೆದ್ದ ಚಿತ್ರ ಇದಾಗಿದೆ. ತೆಲುಗಿನಲ್ಲೂ ಸಹ ಇನ್ನು ಹೆಚ್ಚಿನ ಇಷ್ಟ ಪಡುವಂತಾಗಲಿ ವೀಕ್ಷಕರು ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದು ಶ್ರೀಕಾಂತ್. ಈ ಚಿತ್ರ ಇದೆ ತಿಂಗಳು 25ರಂದು ಬಿಡುಗಡೆ ಆಗಲಿದೆ.

Share this Story:

Follow Webdunia kannada