Select Your Language

Notifications

webdunia
webdunia
webdunia
webdunia

ಕಬೀರ್ ಖಾನ್ ನನ್ನ ನಿಜವಾದ ಗೆಳೆಯ- ಕತ್ರೀನಾ ಕೈಫ್

ಕಬೀರ್ ಖಾನ್ ನನ್ನ ನಿಜವಾದ ಗೆಳೆಯ- ಕತ್ರೀನಾ ಕೈಫ್
, ಸೋಮವಾರ, 31 ಆಗಸ್ಟ್ 2015 (11:01 IST)
ಕಬೀರ್ ಖಾನ್ ನಿರ್ದೇಶನದ ಫ್ಯಾಂಟಮ್ ಸಿನಿಮಾಕ್ಕೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಕತ್ರೀನಾ ಹಾಗೂ ಸೈಫ್ ಆಲಿಖಾನ್ ಅಭಿನಯಕ್ಕೂ ಪ್ರೇಕ್ಷಕರು ಭೇಷ್ ಅಂದಿದ್ದಾರೆ. ಆದ್ರೆ ಇದೆಲ್ಲದಲರ ನಡುವೆ ನಿರ್ದೇಶಕ ಕಬೀರ್ ಖಾನ್ ಅವರನ್ನು ಕತ್ರೀನಾ ಹಾಡಿ ಹೊಗಳಿದ್ದಾರೆ. ಕಬೀರ್ ನನ್ನ ನಿಜವಾದ ಗೆಳೆಯ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕ್ಯಾಟ್ ಕಬೀರ್ ಖಾನ್ ನನ್ನ ನಿಜವಾದ ಗೆಳೆಯ ಎಂದಿದ್ದಾರೆ.
 
ಅಲ್ಲದೇ ಅವರು ಮಾಡುವ ಎಲ್ಲಾ ಸಿನಿಮಾಗಳು ನನಗೆ ತುಂಬಾನೇ ಇಷ್ಟ ಎಂದಿದ್ದಾರೆ. ಇನ್ನು ಕತ್ರೀನಾ ಕಬೀರ್ ಖಾನ್ ಅವರ ಮುಂದಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
 
ಸಿನಿಮಾದ ಬಗ್ಗೆ ಹೆಚ್ಚೇನು ಮಾಹಿತಿ ಹೊರ ಹಾಕದ ಕ್ಯಾಟ್ ಇದೊಂದು ಲವ್ ಸ್ಟೋರಿ ಆಧಾರಿತ ಸಿನಿಮಾವಾಗಿದ್ದು, ಅದರಲ್ಲಿ ರಾಜಕೀಯದ ಕಥೆಯೂ ಇರಲಿದೆ ಎಂದಿದ್ದಾರೆ. ಈಗಾಗಲೇ ಸ್ಕ್ರಿಫ್ಟ್ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಕತ್ರೀನಾ ಹೇಳಿದ್ದಾರೆ.

Share this Story:

Follow Webdunia kannada