Webdunia - Bharat's app for daily news and videos

Install App

ಕನ್ನಡಕ್ಕೆ ಸ್ವರ್ಣಕಮಲ: ಶ್ರೇಷ್ಠ ಮಕ್ಕಳ ಚಿತ್ರವಾಗಿ 'ಗುಬ್ಬಚ್ಚಿಗಳು'!

Webdunia
ಶನಿವಾರ, 23 ಜನವರಿ 2010 (17:14 IST)
MOKSHA
ದೇಶದ ಪ್ರತಿಷ್ಠಿತ ಸ್ವರ್ಣಕಮಲ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡದ ಗುಬ್ಬಚ್ಚಿಗಳು ಎಂಬ ಮಕ್ಕಳ ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಸ್ವರ್ಣಕಮಲ ಪ್ರಶಸ್ತಿಗೆ ಪಾತ್ರವಾಗಿದೆ. ರಾಜ್ಯ ಭಾಷೆಗಳ ಪೈಕಿ ಅತ್ಯುತ್ತಮ ಕನ್ನಡ ಚಿತ್ರವಾಗಿ ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ ರಜತ ಕಮಲ ಪ್ರಶಸ್ತಿ ಪಡೆದಿದರೆ, ಅತ್ಯುತ್ತಮ ತುಳು ಚಿತ್ರವಾಗಿ ಶಿವಧ್ವಜ್ ಶೆಟ್ಟಿ ನಿರ್ದೇಶನದ ಗಗ್ಗರ ಚಿತ್ರ ಪಡೆದಿದ್ದು, ಕನ್ನಡ ಚಿತ್ರರಂಗ ಒಟ್ಟು ಒಂದು ಸ್ವರ್ಣ ಕಮಲ ಹಾಗೂ ಎರಡು ರಜತ ಕಮಲ ಬಾಚಿಕೊಂಡಿದೆ.

ಬಿ.ಸುರೇಶ್ ನಿರ್ಮಾಣದ ಗುಬ್ಬಚ್ಚಿಗಳು ಚಿತ್ರವನ್ನು ಮಂಗಳೂರಿನ ಯುವ ನಿರ್ದೇಶಕ ಅಭಯಸಿಂಹ ನಿರ್ದೇಶಿಸಿದ್ದು, ಈಗಾಗಲೇ ಹಲವು ಪ್ರಶಸ್ತಿಗಳನ್ನೂ ಇದು ಪಡೆದಿತ್ತು. ವಿಮರ್ಶಕರಿಂದಲೂ ಈ ಚಿತ್ರ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಕಳೆದ 2007ನೇ ಸಾಲಿನ ಸ್ವರ್ಣ ಕಮಲ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿಯಾಗಿ ಗುಲಾಬಿ ಟಾಕೀಸ್ ಚಿತ್ರಕ್ಕಾಗಿ ಉಮಾಶ್ರೀ ಪಡೆದಿದ್ದರು. ಆದರೆ ಈ ಬಾರಿ ಶ್ರೇಷ್ಠ ನಟ, ನಟಿ, ಶ್ರೇಷ್ಠ ಚಿತ್ರವಾಗಿ ಯಾವ ಕನ್ನಡ ಚಿತ್ರ ಹೊರಹೊಮ್ಮದಿದ್ದರೂ, ಮಕ್ಕಳ ಚಿತ್ರವಿಭಾಗದಲ್ಲಿ ಗುಬ್ಬಚ್ಚಿಗಳು ಚಿತ್ರ ಕನ್ನಡಕ್ಕೆ ಖ್ಯಾತಿ ತಂದಿದೆ.

2008 ನೇ ಸಾಲಿನ ಪ್ರಶಸ್ತಿ ಪಟ್ಟಿ ಇದಾಗಿದ್ದು, ಅತ್ಯುತ್ತಮ ಚಿತ್ರವಾಗಿ ಈ ಬಾರಿ ಬಂಗಾಳಿ ಭಾಷೆಯ ಅಂಟಾಹೀನ್ ಚಿತ್ರ ಹೊರಹೊಮ್ಮಿದರೆ, ಶ್ರೇಷ್ಠ ಹಿಂದಿ ಚಿತ್ರವಾಗಿ ರಾಕ್ ಆನ್ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ನಟಿಯಾಗಿ ಫ್ಯಾಛನ್ ಚಿತ್ರದ ನಟನೆಗಾಗಿ ಪ್ರಿಯಾಂಕಾ ಛೋಪ್ರಾ ಪಡೆದರೆ, ಅತ್ಯುತ್ತಮ ನಟನಾಗಿ ಮರಾಠಿಯ ಜೋಗ್ವಾ ಚಿತ್ರದ ಉಪೇಂದ್ರ ಲಿಮಾಯೆ ಹೊರಹೊಮ್ಮಿದ್ದಾರೆ.

ಅತ್ಯುತ್ತಮ ಚಿತ್ರವಾಹ ಅಂಟಾಹೀನ್, ಅತ್ಯುತ್ತಮ ಚೊಚ್ಚಲ ನಿರ್ದೇಶನದ ಚಿತ್ರ ಎ ವೆಡ್‌ನೆಸ್ ಡೇ, ಅತ್ಯುತ್ತಮ ಮನರಂಜನಾತ್ಮಕ ಚಿತ್ರವಾಗಿ ಹೊರಹೊಮ್ಮಿದ ಓಯೆ ಲಕ್ಕಿ ಲಕ್ಕಿ ಓಯೆ, ಅತ್ಯುತ್ತಮ ಮಕ್ಕಳ ಚಿತ್ರವಾಗಿ ಹೊರಹೊಮ್ಮಿದ ಕನ್ನಡದ ಗುಬ್ಬಚ್ಚಿಗಳು ಚಿತ್ರ, ಅತ್ಯುತ್ತಮ ಆನಿಮೇಶನ್ ಚಿತ್ರವಾಗಿ ಹೊರಹೊಮ್ಮಿದ ರೋಡ್‌ಸೈಡ್ ರೋಮಿಯೋ, ಅತ್ಯುತ್ತಮ ನಿರ್ದೇಶಕರಾಗಿ ಹೊರಹೊಮ್ಮಿದ ನಾನ್ ಕಡವೊಳ್ (ತಮಿಳು) ಚಿತ್ರದ ನಿರ್ದೇಶಕ ಬಾಲಾ ಸ್ವರ್ಣಕಮಲವನ್ನು ಬಾಚಿಕೊಂಡಿದ್ದಾರೆ. ಉಳಿದ ಪ್ರಶಸ್ತಿ ವಿಜೇತರು ರಜತ ಕಮಲ ಪಡೆಯದಿದ್ದಾರೆ.
IFM


ಶ್ರೇಷ್ಠ ಹಿಂದಿ ಚಲನಚಿತ್ರ- ರಾಕ್ ಆನ್
ಶ್ರೇಷ್ಠ ಚಲನಚಿತ್ರ- ಅಂಟಾಹೀನ್ (ಬಂಗಾಳಿ)
ಶ್ರೇಷ್ಠ ನಟಿ- ಪ್ರಿಯಾಂಕಾ ಛೋಪ್ರಾ (ಫ್ಯಾಷನ್)
ಶ್ರೇಷ್ಠ ನಟ- ಉಪೇಂದ್ರ ಲಿಮಾಯೆ (ಜೋಗ್ವಾ ಎಂಬ ಮರಾಠಿ ಚಿತ್ರದ ನಾಯಕ ನಟ)
ಶ್ರೇಷ್ಠ ಪೋಷಕ ನಟಿ- ಕಂಗನಾ ರಾಣಾವತ್ (ಫ್ಯಾಷನ್)
ಶ್ರೇಷ್ಠ ಪೋಷಕ ನಟ- ಅರ್ಜುನ್ ರಾಂಪಾಲ್ (ರಾಕ್ ಆನ್)
ಶ್ರೇಷ್ಠ ನಿರ್ದೇಶಕ- ಬಾಲಾ (ನಾನ್ ಕಡವೊಳ್ ತಮಿಳು ಚಿತ್ರ)
ಅತ್ಯುತ್ತಮ ಕನ್ನಡ ಚಿತ್ರ- ಪಿ. ಶೇಷಾದ್ರಿ ಅವರ 'ವಿಮುಕ್ತಿ'
ಅತ್ಯುತ್ತಮ ತುಳು ಚಿತ್ರ- ಗಗ್ಗರ
ಶ್ರೇಷ್ಠ ಚೊಚ್ಚಲ ನಿರ್ದೇಶನದ ಚಿತ್ರ- ಎ ವೆಡ್‌ನೆಸ್ ಡೇ
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್- ಮುಂಬೈ ಮೇರಿ ಜಾನ್
ಶ್ರೇಷ್ಠ ಖ್ಯಾತಿವೆತ್ತ ಚಿತ್ರ- ಓಯೆ ಲಕ್ಕಿ ಲಕ್ಕಿ ಓಯೆ
ಶ್ರೇಷ್ಠ ಹಿನ್ನೆಲೆ ಗಾಯಕ- ಹರಿಹರನ್
ಶ್ರೇಷ್ಠ ಹಿನ್ನೆಲೆ ಗಾಯಕಿ- ಶ್ರೇಯಾ ಘೋಷಾಲ್.
ಅತ್ಯುತ್ತಮ ಸಂಕಲನ- ಫಿರಾಕ್
ಶ್ರೇಷ್ಠ ಮಕ್ಕಳ ಚಿತ್ರ- ಗುಬ್ಬಚ್ಚಿಗಳು (ಕನ್ನಡ)
ಅತ್ಯುತ್ತಮ ವಸ್ತ್ರ ವಿನ್ಯಾಸ- ನೀತು ಲಲ್ಲಾ (ಜೋಧಾ ಅಕ್ಬರ್)

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments