Select Your Language

Notifications

webdunia
webdunia
webdunia
webdunia

ಕನ್ನಡಕ್ಕೆ ಪೂನಂ ಪಾಂಡೆ ಬರುತ್ತಿದ್ದಾರಂತೆ...!

ಕನ್ನಡಕ್ಕೆ ಪೂನಂ ಪಾಂಡೆ ಬರುತ್ತಿದ್ದಾರಂತೆ...!
, ಗುರುವಾರ, 3 ಏಪ್ರಿಲ್ 2014 (19:02 IST)
ಈ ಸುದ್ದಿಯೇ ಹಲವರನ್ನು ಬೆಚ್ಚಿಬೀಳಿಸಿದರೆ ಮತ್ತೆ ಉಳಿದವರನ್ನು ಬೆಚ್ಚಗಾಗಿಸುತ್ತದೆ. ಹೌದು, ಬಾಲಿವುಡ್ನ ಹಾಟ್ ಚೆಲುವೆ ಪೂನಂ ಪಾಂಡೆ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರರಸಿಕರನ್ನು ನಿದ್ದೆಗೆಡಿಸುವಂತೆ ಮಾಡುವ ಈ ಬೆಡಗಿಯನ್ನು ಕನ್ನಡಕ್ಕೆ ತರುವ ಸಾಹಸಕ್ಕೆ ಕೈ ಹಾಕಿರುವುದು ಲವ್ ಈಸ್ ಪಾಯಿಸನ್ ಚಿತ್ರತಂಡ. ಹಾಡಿನ ಕುಣಿತವೊಂದಕ್ಕೆ ಬಾಲಿವುಡ್ ಬೆಡಗಿಯರನ್ನು ಕರೆತರುವ ಕೆಲಸ ನಡೆಯುತ್ತಲೇ ಇದೆ. ಬಾಲಿವುಡ್ನಿಂದ ಸನ್ನಿ ಲಿಯೋನ್ ಅವರನ್ನು ಕೆ.ಮಂಜು ಕರೆಸ್ತಾರೆ ಎಂದು ಸುದ್ದಿಯಾಗಿದ್ದು ಠುಸ್ ಆಯಿತು. ಬಳಿಕ ಪ್ರೇಮ್ ಅಡ್ಡಾ ಸಿನೆಮಾಗೆ ಪೂನಂಪಾಂಡೆಯನ್ನು ಕರೆಸ್ತಾರೆ ಎಂದೂ ಹೇಳಲಾಗಿತ್ತು, ಅದೂ ನಡೆಯಲಿಲ್ಲ.

ಈಗ ಜಂಗಲ್ಜಾಕಿ ಖ್ಯಾತಿಯ ರಾಜೇಶ್ ಅಭಿನಯದ ಲವ್ ಈಸ್ ಪಾಯಿಸನ್ ಚಿತ್ರತಂಡ ಈ ಕೆಲಸಕ್ಕೆ ಮುಂದಾಗಿದೆ. ಪೂನಂ ಪಾಂಡೆ ಕನ್ನಡಕ್ಕೆ ಬರುತ್ತಾರೆ ಎಂದು ಸುದ್ದಿಯಾಗುತ್ತಲೇ ಪಡ್ಡೆ ಹೈಕಳು ಮಂಡಕ್ಕಿ ಮೆಲ್ಲಲು ಆರಂಭಿಸಿದ್ದಾರಂತೆ. ನಂದನ ಪ್ರಭು ನಿರ್ದೇಶನದ ಈ ಚಿತ್ರಕ್ಕೆ ಪೂನಂ ಐಟಂ ಡಾನ್ಸ್ ಮಾಡುವುದು ಕನ್ಫರ್ಮ ಆಗಿದೆಯಂತೆ. ಮೊದಲೇ ಪ್ರಚಾರಪ್ರಿಯಳಾಗಿರುವ ಪೂನಂಳ ಅವತಾರಗಳನ್ನು ಇನ್ನು ಬಾಲಿವುಡ್ನಲ್ಲೇ ನೋಡಿ ಸುಮ್ಮನಿರಬೇಕಾಗಿಲ್ಲ, ಆಕೆಯ ಸೊಗಸನ್ನು ಕನ್ನಡದಲ್ಲೂ ಕಣ್ತುಂಬಿಕೊಳ್ಳಬಹುದು.

Share this Story:

Follow Webdunia kannada