Webdunia - Bharat's app for daily news and videos

Install App

ಉಲ್ಲಾಸದ ಹಾಡಿಗೆ ಮಸ್ತಾಗಿ ಕುಣಿದ ಗಣೇಶ್

Webdunia
MOKSHENDRA
ಮುಂಗಾರು ಮಳೆ ಚಿತ್ರದ ಹಾಡುಗಳು ಹಿಟ್ ಆದ ಬಳಿಕ ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಟ್ರೆಂಡ್ ಸೃಷ್ಟಿಯಾಗಿದೆ ಎಂದರೆ ತಪ್ಪಲ್ಲ. ಇದರೊಂದಿಗೆ ಚಿತ್ರ ಸಾಹಿತಿಗಳಾದ ಕವಿರಾಜ್, ಜಯಂತ್ ಕಾಯ್ಕಿಣಿಯವರಿಗೆ ಈಗ ಎಲ್ಲಿಲ್ಲದ ಬೇಡಿಕೆ. ಕೆಲವೇ ಸಮಯದ ಹಿಂದೆ ಉಲ್ಲಾಸದ ಹೂಮಳೆ ಸುರಿಸಿದ ನಂತರ ಗಣೇಶ್ ಈಗ ಮತ್ತೊಂದು ಸಿನಿಮಾದಲ್ಲೂ ಭರ್ಜರಿ ಉಲ್ಲಾಸದಲ್ಲೇ ನಟಿಸಿದ್ದಾರಂತೆ. ಒಂದಾದ ಮೇಲೆ ಒಂದು ಸಿನಿಮಾ ಫ್ಲಾಪ್ ಆಗುತ್ತಿದ್ದರೂ, ಗೋಲ್ಡನ್ ಸ್ಟಾರ್ ನಟಿಸಿರುವ `ಉಲ್ಲಾಸ ಉತ್ಸಾಹ'ದ ಹಾಡುಗಳು ಕೂಡಾ ತುಂಬಾ ಅದ್ದೂರಿಯಾಗಿ ಮೂಡಿ ಬಂದಿವೆ ಅಂತ ನಿರ್ಮಾಪಕ ಬಿ.ಪಿ.ತ್ಯಾಗರಾಜು ಅವರಿಗೆ ಖುಷಿಯೋ ಖುಷಿ.

ಕವಿರಾಜ್ ರಚಿಸಿರುವ `ಹಲೋ ನಮಸ್ತೆ ಮಾಡೋಣ ಮಸ್ತಿ ಬಾ ಮಾಮಾಮಾ ಮಾಮಾಮೈಯಾ ದಿನವೆಲ್ಲಾ ಎಂಜಾಯ್ ಮಾಡೋಣ..' ಹಾಡಿಗೆ ಗಣೇಶ್ ಹಾಗೂ ಸಂಗಡಿಗರು ಕುಣಿದಿದ್ದು ತುಂಬಾ ಚೆನ್ನಾಗಿ ಮೂಡಿ ಬಂದಿದೆಯಂತೆ. ಜೊತೆಗೆ ರಾಂನಾರಾಯಣ್ ರಚಿಸಿದ `ಲವ್ ಮಾಡೆ ನನ್ನೇ ಕನ್ಯಾಕುಮಾರಿ ಏನ್ ಮಾಡಬೇಕು ಕೇಳೆ ಒಂದ್ಸಾರಿ..' ಹಾಡಿನಲ್ಲಿ ಗಣೇಶ್ ಹಾಗೂ ನಾಯಕಿ ಯಾಮಿ ಗೌತಮಿ ಕುಣಿದಿದ್ದಾರೆ ಎಂದು ನಿರ್ಮಾಪಕ ಬಿ.ಪಿ.ತ್ಯಾಗರಾಜು ತಿಳಿಸಿದ್ದಾರೆ.

ಉಲ್ಲಾಸಂಗ ಉತ್ಸಾಹಂಗ ಚಿತ್ರದ ರೀಮೇಕ್ ಇದಾಗಿದ್ದು, ಇದು ಗಣೇಶ್‌ಗೆ ಹೇಳಿ ಮಾಡಿಸಿದಂತಿದೆ. ಚಿತ್ರ ಹೆಚ್ಚಿನ ಭಾಗ ಪೂರ್ಣವಾಗಿದ್ದು, ಇದು ಈ ವರ್ಷದ ಮೆಗಾಹಿಟ್ ಆಗಲಿದೆ ಎಂಬ ವಿಶ್ವಾಸವನ್ನು ನಿರ್ಮಾಪಕರು ವ್ಯಕ್ತಪಡಿಸುತ್ತಾರೆ. ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲಾ, ದೊಡ್ಡಣ್ಣ ನಟಿಸಿದ್ದಾರೆ. ಈ ಬಾರಿ ಗಣೇಶ್ ಲಕ್ ಹೇಗಿದೆಯೋ...

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments